Udayavni Special

ನಾಯಕರ ಪ್ರತಿಷ್ಠೆ: ಎಚ್ಚರಿಕೆ ಗಂಟೆ


Team Udayavani, Nov 11, 2020, 1:47 PM IST

ನಾಯಕರ ಪ್ರತಿಷ್ಠೆ: ಎಚ್ಚರಿಕೆ ಗಂಟೆ

ಬೆಂಗಳೂರು: ಎರಡು ಕ್ಷೇತ್ರಗಳ ಉಪ ಚುನಾವಣೆ ಫ‌ಲಿತಾಂಶ ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕರ ಪ್ರತಿಷ್ಠೆಗೆ ಎಚ್ಚರಿಕೆ ನೀಡಿದಂತಿದೆ.

ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಚುನಾವಣಾ ಪ್ರಚಾರ ದಲ್ಲಿಯೂ ಕೆಪಿಸಿಸಿಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ತಾವುನಿಲ್ಲಿಸಿದಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬಂದು ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳುವ ಕಸರತ್ತು ನಡೆದಿದ್ದು ಗುಟ್ಟಾಗಿ ಉಳಿಯಲಿಲ್ಲ. ಉಪ ಚುನಾವಣೆ ಫ‌ಲಿತಾಂಶದಿಂದ ರಾಜ್ಯ ರಾಜಕೀಯದಲ್ಲಿ ಯಾವುದೇ ರೀತಿಯ ಬದಲಾವಣೆ ಆಗುವುದಿಲ್ಲ ಎನ್ನುವ ಸತ್ಯದ ಅರಿವಿದ್ದರೂ, ಇಬ್ಬರೂ ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಪಕ್ಷದಲ್ಲಿ ವರ್ಚಸ್ಸು ಹೆಚ್ಚಿಸಿಕೊಳ್ಳುವ ಕಡೆಗೆ ಹೆಚ್ಚಿನ ಆದ್ಯತೆ ನೀಡಿದಂತೆಕಂಡು ಬಂದಿತು.

ಸಿಎಂ ಕನಸು: ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಪಕ್ಷದಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವ ಸಂದೇಶವನ್ನು ತಮ್ಮ ಆಪ್ತರ ಮೂಲಕ ಪಕ್ಷದ ನಾಯಕರಿಗೆ ಕಳುಹಿಸುವ ಪ್ರಯತ್ನ ಮಾಡಿ, ತಮ್ಮೊಳಗಿರುವ ಆಂತರಿಕ ಪೈಪೋಟಿಯನ್ನು ಈಗಲೇ ಬಹಿರಂಗಗೊಳಿಸುವ ಮೂಲಕ ಪಕ್ಷದಲ್ಲಿ ಎರಡು ಶಕ್ತಿ ಕೇಂದ್ರಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸ್ಪರ್ಧೆ ಜೋರಾಗಿದೆ ಎನ್ನುವುದನ್ನು ಬಿಂಬಿಸಿರುವುದು ಎದ್ದು ಕಾಣುವಂತಿತ್ತು.

ಉಪ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸೋಲಿನಿಂದ ಸಿದ್ದರಾಮಯ್ಯಗಿಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ರಾಜಕೀಯ ಭವಿಷ್ಯದ ಮೇಲೆ ಹೆಚ್ಚು ಪರಿಣಾಮ ಬೀರುವಂತಿದೆ. ಡಿ.ಕೆ.ಶಿವಕುಮಾರ್‌ ಅಧ್ಯಕ್ಷರಾದ ಮೇಲೆ ನಡೆದಿರುವ ಎರಡು ಉಪ ಚುನಾವಣೆಗಳು ಅವರ ನಾಯಕತ್ವ ಸಾಬೀತುಪಡಿಸಲು ಸೂಕ್ತ ವೇದಿಕೆಯಾಗಿದ್ದವು. ಈ ಸಂದರ್ಭದಲ್ಲಿ ಅವರು ಆರ್‌.ಆರ್‌. ನಗರ ಅಭ್ಯರ್ಥಿ ಆಯ್ಕೆವಿಚಾರದಲ್ಲಿ ಪಕ್ಷದ ಇತರ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ತಮ್ಮದೇ ಆಯ್ಕೆಯನ್ನು ಅಂತಿಮಗೊಳಿಸಿಕೊಂಡಿದ್ದು, ಪಕ್ಷದ ಇತರ ನಾಯಕರ ಆಕ್ಷೇಪಕ್ಕೆ ಕಾರಣವಾಗಿತ್ತು. ತಮ್ಮದೆ ಹಿಡಿತದಲ್ಲಿದ್ದ ಕ್ಷೇತ್ರವನ್ನು ಉಳಿಸಿಕೊಳ್ಳಲು ಡಿಕೆ ಸಹೋದರರು ನಡೆಸಿದ ಕೆಲವು ಕಾರ್ಯತಂತ್ರಗಳು ಪಕ್ಷದ ನಾಯಕರಿಗೆ ಇರಿಸು ಮುರುಸಾದಂತೆ ಕಂಡು ಬಂದಿತು.

ಡಿ.ಕೆ.ಶಿವಕುಮಾರ್‌ ಅವರು ಪಕ್ಷದ ನಾಯಕರಾಗಿ ಉಪ ಚುನಾವಣೆಗಳನ್ನು ಎದುರಿಸುವಾಗ ನಡೆಸುವ ಕಾರ್ಯತಂತ್ರಗಳು, ಪಕ್ಷದ ಅಧ್ಯಕ್ಷರಾಗಿ ನಡೆಸುವ ಕಾರ್ಯತಂತ್ರ ಹಾಗೂ ನಡೆದುಕೊಳ್ಳುವ ರೀತಿಯಲ್ಲಿನ ವ್ಯತ್ಯಾಸಗಳ ಬಗ್ಗೆ ಸೂಕ್ಷ್ಮವಾಗಿ ಅರಿತು ಕೊಳ್ಳುವುದು ಅವರು ಮುಂದಿನ ದಿನಗಳಲ್ಲಿ ಹಾಕಿಕೊಂಡಿರುವ ಕನಸುಗಳು ಸಾಕಾರಗೊಳ್ಳಲು ಅವರಂದುಕೊಂ ಡಂತೆ ಚಪ್ಪಡಿ ಕಲ್ಲುಗಳಾಗಿ ವಿಧಾನ ಸೌಧದ ಮೂರನೇ ಮಹಡಿಯಲ್ಲಿ ಕೂರಿಸಬಹುದು.

ಉಪ ಚುನಾವಣೆಯಲ್ಲಿ ಬಹುತೇಕ ‌ ಆಡಳಿತ ಪಕ್ಷದ ಕಡೆಗೆ ಮತದಾರರ ಒಲವಿರುವುದು ಹಾಗೂ ಹಣ ಮತ್ತು ಅಧಿಕಾರದ ಪ್ರಭಾವದಿಂದ ಗೆಲುವು ಸಾಧಿಸಿದೆ ಎನ್ನುವುದು ಸಾಮಾನ್ಯವಾದರೂ, ಸರ್ಕಾರ ಸರಿದಾರಿಯಲ್ಲಿ ಹೋಗುತ್ತಿಲ್ಲ ಎನ್ನುವುದ‌ನ್ನು ತೋರಿಸಲು ಉಪ ಚುನಾವಣೆಯ ಫ‌ಲಿತಾಂಶ ಪ್ರತಿಪಕ್ಷಕ್ಕೆ ಅತ್ಯಂತ ‌ಮಹತ್ವದ್ದಾಗಿರುತ್ತದೆ. ಎರಡೂ ಕ್ಷೇತ್ರಗಳಲ್ಲಿ‌ ಕಾಂಗ್ರೆಸ್‌ ಸೋಲು ಆಡಳಿತ ‌ಪಕ್ಷದ ‌ ನ‌ಡೆಗಳು ಹಾಗೂ ತೀರ್ಮಾನಗಳಿಗೆ ಜನರ ಸಮ್ಮತಿ ಇದೆ ಎನ್ನುವುದ‌ನ್ನು ಬಿಂಬಿಸಿದಂತಾಗುತ್ತದೆ. ಹೀಗಾಗಿ ಪ್ರತಿಪಕ್ಷದಲ್ಲಿದ್ದಾಗಲೇ ಉಪ ಚುನಾವಣೆಗಳನ್ನು ಗೆಲ್ಲುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸುವ ಅವಕಾಶವನ್ನು ಕಾಂಗ್ರೆಸ್‌ ನಾಯಕರು ತಮ್ಮ ಪ್ರತಿಷ್ಠೆಯಿಂದಾಗಿ ಕಳೆದುಕೊಂಡಂತಾಗಿದೆ.

ಭವಿಷ್ಯಕ್ಕೆ ಉತ್ತಮ :  ಉಪ ಚುನಾವಣೆಯ ಫ‌ಲಿತಾಂಶ ಡಿ.ಕೆ. ಶಿವಕುಮಾರ್‌ಗೆ ಭವಿಷ್ಯದಲ್ಲಿ ತೆಗೆದುಕೊಳ್ಳುವ ನಿರ್ಧಾರ ಮತ್ತು ನಡವಳಿಕೆಗಳ ಮೇಲೆ ಪರಿಣಾಮ ಬೀರಬಹುದು. ಈ ಬಗ್ಗೆ ಅವರು ಗಂಭೀರವಾಗಿ ಆಲೋಚಿಸುವುದುಕೂಡ ಅವರ ರಾಜಕೀಯ ಭವಿಷ್ಯಕ್ಕೆ ಉತ್ತಮ ಎಂಬ ಮಾತುಗಳುಕೇಳಿ ಬರುತ್ತಿವೆ.

 

ಶಂಕರ ಪಾಗೋಜಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

2 ವರ್ಷಗಳ ಗರಿಷ್ಠಕ್ಕೆ ಪೆಟ್ರೋಲ್‌ ಬೆಲೆ ಏರಿಕೆ

2 ವರ್ಷಗಳ ಗರಿಷ್ಠಕ್ಕೆ ಪೆಟ್ರೋಲ್‌ ಬೆಲೆ ಏರಿಕೆ

r-ashok

ಈ ಬಾರಿ ಸಾರ್ವಜನಿಕವಾಗಿ ಹೊಸ ವರ್ಷಾಚರಣೆಗೆ ಅವಕಾಶವಿಲ್ಲ: ಆರ್ ಅಶೋಕ್

bsy

ಗೋಹತ್ಯೆ ನಿಷೇಧ ಮತ್ತು ಲವ್ ಜಿಹಾದ್ ತಡೆ ಕಾಯ್ದೆ ಜಾರಿಗೆ ತೀರ್ಮಾನ: ಸಿಎಂ ಬಿಎಸ್ ವೈ

grama

ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದೇ ಹಂತದ ಗ್ರಾ.ಪಂ ಚುನಾವಣೆ ನಡೆಸುವಂತೆ ಆದೇಶ !

ashwath

HDK ಬಿಜೆಪಿ ಜೊತೆ ಸೇರಿದ್ದರೆ ಸಿಎಂ ಆಗುತ್ತಿರಲಿಲ್ಲ; BSY ನಮ್ಮ ನಾಯಕ: ಅಶ್ವತ್ಥನಾರಾಯಣ

ಮಂಗಳೂರು ಉಗ್ರರ ಪರ ಗೋಡೆ ಬರಹ ಪ್ರಕರಣ : ಇಬ್ಬರ ಬಂಧನ 

ಮಂಗಳೂರು: ಉಗ್ರರ ಪರ ಗೋಡೆ ಬರಹ ಪ್ರಕರಣ; ಇಬ್ಬರ ಬಂಧನ 

ಚಿಕ್ಕಬಳ್ಳಾಪುರ ನಗರದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಲು ಕ್ರಮ: ಡಿಎಸ್ ಆನಂದ್‍ರೆಡ್ಡಿ

ಚಿಕ್ಕಬಳ್ಳಾಪುರ ನಗರದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಕ್ರಮ: ಡಿಎಸ್ ಆನಂದ್‍ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

r-ashok

ಈ ಬಾರಿ ಸಾರ್ವಜನಿಕವಾಗಿ ಹೊಸ ವರ್ಷಾಚರಣೆಗೆ ಅವಕಾಶವಿಲ್ಲ: ಆರ್ ಅಶೋಕ್

bsy

ಗೋಹತ್ಯೆ ನಿಷೇಧ ಮತ್ತು ಲವ್ ಜಿಹಾದ್ ತಡೆ ಕಾಯ್ದೆ ಜಾರಿಗೆ ತೀರ್ಮಾನ: ಸಿಎಂ ಬಿಎಸ್ ವೈ

grama

ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದೇ ಹಂತದ ಗ್ರಾ.ಪಂ ಚುನಾವಣೆ ನಡೆಸುವಂತೆ ಆದೇಶ !

ashwath

HDK ಬಿಜೆಪಿ ಜೊತೆ ಸೇರಿದ್ದರೆ ಸಿಎಂ ಆಗುತ್ತಿರಲಿಲ್ಲ; BSY ನಮ್ಮ ನಾಯಕ: ಅಶ್ವತ್ಥನಾರಾಯಣ

ಮಂಗಳೂರು ಉಗ್ರರ ಪರ ಗೋಡೆ ಬರಹ ಪ್ರಕರಣ : ಇಬ್ಬರ ಬಂಧನ 

ಮಂಗಳೂರು: ಉಗ್ರರ ಪರ ಗೋಡೆ ಬರಹ ಪ್ರಕರಣ; ಇಬ್ಬರ ಬಂಧನ 

MUST WATCH

udayavani youtube

ಮಂಗಳೂರು: ಉಗ್ರರ ಪರ ಗೋಡೆ ಬರಹ ಪ್ರಕರಣ; ಇಬ್ಬರ ಬಂಧನ

udayavani youtube

ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಬಂದ್ | Udayavani

udayavani youtube

ಮಂಗಳೂರು ದೋಣಿ ದುರಂತದಲ್ಲಿ ಮೃತಪಟ್ಟವರಲ್ಲಿ ಅನ್ಸಾರ್ ಎಂಬಾತನ ಮೃತ ದೇಹಕ್ಕಾಗಿ ಹುಡುಕಾಟ

udayavani youtube

ಕುಂದಾಪುರ: ಬಾವಿಗೆ ಬಿದ್ದ ಜಿಂಕೆಯ ರಕ್ಷಣೆ

udayavani youtube

ಅನಾರೋಗ್ಯಕ್ಕೆ ಕುಗ್ಗದೆ ಕೃಷಿಯಲ್ಲಿ ಬದುಕು ಬದಲಿಸಿಕೊಂಡ ಸಾಧಕ

ಹೊಸ ಸೇರ್ಪಡೆ

2 ವರ್ಷಗಳ ಗರಿಷ್ಠಕ್ಕೆ ಪೆಟ್ರೋಲ್‌ ಬೆಲೆ ಏರಿಕೆ

2 ವರ್ಷಗಳ ಗರಿಷ್ಠಕ್ಕೆ ಪೆಟ್ರೋಲ್‌ ಬೆಲೆ ಏರಿಕೆ

Udupi-2ಜನಸಾಮಾನ್ಯ ಕಲ್ಯಾಣ ಯೋಜನೆ ಅನುಷ್ಠಾನಿಸಿ: ಡಾ| ಎಂ.ಟಿ. ರೆಜು

ಜನಸಾಮಾನ್ಯ ಕಲ್ಯಾಣ ಯೋಜನೆ ಅನುಷ್ಠಾನಿಸಿ: ಡಾ| ಎಂ.ಟಿ. ರೆಜು

Udupi-2″ಮತದಾರರ ಪಟ್ಟಿ ಪಾರದರ್ಶಕವಾಗಿರಲಿ’

“ಮತದಾರರ ಪಟ್ಟಿ ಪಾರದರ್ಶಕವಾಗಿರಲಿ’

r-ashok

ಈ ಬಾರಿ ಸಾರ್ವಜನಿಕವಾಗಿ ಹೊಸ ವರ್ಷಾಚರಣೆಗೆ ಅವಕಾಶವಿಲ್ಲ: ಆರ್ ಅಶೋಕ್

bsy

ಗೋಹತ್ಯೆ ನಿಷೇಧ ಮತ್ತು ಲವ್ ಜಿಹಾದ್ ತಡೆ ಕಾಯ್ದೆ ಜಾರಿಗೆ ತೀರ್ಮಾನ: ಸಿಎಂ ಬಿಎಸ್ ವೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.