Udayavni Special

ಯಮ ಯಾರಿಗೂ ಕರುಣೆ ತೋರುವುದಿಲ್ಲ, ಸುರೇಶ್ ಅಂಗಡಿ ಸಾವು ಅನ್ಯಾಯ: ಡಿ.ಕೆ ಶಿವಕುಮಾರ್

Team Udayavani, Sep 24, 2020, 4:41 PM IST

ಯಮ ಯಾರಿಗೂ ಕರುಣೆ ತೋರುವುದಿಲ್ಲ, ಸುರೇಶ್ ಅಂಗಡಿ ಸಾವು ಅನ್ಯಾಯ: ಡಿ.ಕೆ ಶಿವಕುಮಾರ್

ಬೆಂಗಳೂರು: ಯಮ ಯಾರಿಗೂ ಕರುಣೆ ತೋರುವುದಿಲ್ಲ, ಸುರೇಶ್ ಅಂಗಡಿ ಸಾವು ಅನ್ಯಾಯ. ಈ ಸಮಯದಲ್ಲಿ ದೇವರು ಬಹಳ ಕ್ರೂರಿ ಎಂದು ಭಾವಿಸುವಂತಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿಧಾನಸೌಧದಲ್ಲಿ ಹೇಳಿದರು.

ಬುಧವಾರ ರಾತ್ರಿ ಕೋವಿಡ್ ಸೋಂಕಿನಿಂದ ನಿಧನರಾದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರಿಗೆ ಗುರುವಾರ ವಿಧಾನಸಭೆಯಲ್ಲಿ ನಡೆದ ಸಂತಾಪ ಸೂಚಕ ಚರ್ಚೆಯಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್ ‘ನಿನ್ನೆ ರಾತ್ರಿ ನಮ್ಮ ಶಾಸಕರಿಗೆಲ್ಲ ಔತಣಕೂಟ ಆಯೋಜಿಸಿದ್ದೆ. 20 ವರ್ಷಗಳ ಹಿಂದೆ ಅದೇ ಜಾಗದಲ್ಲಿ ಒಂದು ಕಾರ್ಯಕ್ರಮ ನಡೆಸಿದಾಗ ಆಗಿನ ಸಹಕಾರಿ ಇಲಾಖೆಯ ಹೆಚ್ಚುವರಿ ನಿರ್ದೇಶಕರಾದ ಮುದ್ದೂರ್ ಅವರು ಆ ಕಾರ್ಯಕ್ರಮಕ್ಕೆ ಬಂದಿದ್ದರು. ಅವರು ಕಾರ್ಯಕ್ರಮ ಮುಗಿಸಿ ಮನೆಗೆ ಮರಳಿದ ನಂತರ ಕೆಲ ಹೊತ್ತಿನಲ್ಲೇ ಅವರು ಸಾವನ್ನಪಿದರು ಅಂತಾ ಸುದ್ದಿ ಬಂತು. ಅವತ್ತು ಅರು ಕಾರ್ಯಕ್ರಮದಲ್ಲಿ ನನಗೆ ಒಂದು ಮಾತು ಹೇಳಿದ್ದರು. ‘ಕ್ಷಣಂ ವಿತ್ತಂ, ಕ್ಷಣಂ ಚಿತ್ತಂ, ಕ್ಷಣಂ ಜೀವಿತಮೇವಚ ಯಮಸ್ಯ ಕರುಣಾ ನಾಸ್ತಿ, ತಸ್ಮಾತ್ ಜಾಗ್ರತ.. ಜಾಗ್ರತ.’ ಈ ಮನಸ್ಸು, ಹಣ ಚಂಚಲ ಇದ್ದಂತೆ. ಅದೇರೀತಿ ಯಮ ಕೂಡ ನಾನು ಯಾರಿಗಾದರೂ ಸಹಾಯ ಮಾಡುತ್ತೇನೆ, ಮಕ್ಕಳ ಮದುವೆ ಮಾಡುತ್ತೇನೆ ಕರುಣೆ ತೋರಿಸು ಎಂದರೆ ತೋರಿಸುವುದಿಲ್ಲವಂತೆ. ಅವನು ನಿರ್ಧರಿಸಿದರೆ ಯಾರನ್ನಾದರೂ ಮುಲಾಜಿಲ್ಲದೆ ಕರೆಸಿಕೊಳ್ಳುತ್ತಾನಂತೆ. ಅದೇ ರೀತಿ ಇಂದು ಸುರೇಶ ಅಂಗಡಿ ಅವರನ್ನು ಕರೆಸಿಕೊಂಡಿದ್ದಾನೆ. ಅವರು ಮಂತ್ರಿತಾಗಿ ಕೇವಲ ಒಂದು ಕಾಲು ವರ್ಷವಾಗಿದೆ. ಅವರು ಮಂತ್ರಿಯಾಗಿದ್ದಾಗ ಅವರನ್ನು ಭೇಟಿ ಮಾಡಿದ್ದೆ. ಆಗ ನಾನು ಮಂತ್ರಿ ಸ್ಥಾನ ನಿರೀಕ್ಷೆ ಮಾಡಿರಲಿಲ್ಲ. ಅವರೇ ನನಗೆ ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ನನಗೆ ಸಿಕ್ಕಿರುವ ಅವಕಾಶದಲ್ಲಿ ನನ್ನ ಕೈಲಾದ ಸಹಾಯವನ್ನು ರಾಜ್ಯಕ್ಕೆ ಮಾಡುತ್ತೇನೆ ಎಂದಿದ್ದರು. ಅವರು ಅಲ್ಪಾವಧಿಯಲ್ಲೇ ರಾಜ್ಯಕ್ಕೆ ಉತ್ತಮ ಯೋಜನೆ ತರುವ ಪ್ರಯತ್ನ ಮಾಡಿದ್ದಾರೆ. ಅವರ ಬಗ್ಗೆ ಯಮ ಕರುಣೆ ತೋರಲಿಲ್ಲ ಎಂದರು.

ಇದನ್ನೂ ಓದಿ: ಬಸವಕಲ್ಯಾಣ ಶಾಸಕ ನಾರಾಯಣ ರಾವ್ ಕೋವಿಡ್ ಸೋಂಕಿಗೆ ಬಲಿ

ನಾನು ಈ ಕೋವಿಡ್-19 ವಿಚಾರದಲ್ಲಿ ಸಾಕಷ್ಟು ಉಡಾಫೆ ಮಾಡುತ್ತಿದ್ದೆ. ನನಗೆ ಅದು ಬಂದಾಗ ನನಗೆ ಅರಿವಾಯಿತು. ಆಸ್ಪತ್ರೆಗೆ ಹೋಗಿ ಬಂದ ನಂತರ ಮತ್ತೆ ಜ್ವರ ಬಂತು. ಆ ಮೇಲೆ ಉರಾಟದ ಸಮಸ್ಯೆ ಕಾಣಿಸಿಕೊಂಡಿತು. ನಮ್ಮ ಶಾಸಕಾಂಗ ಪಕ್ಷದ ನಾಯಕರೂ ಕೂಡ ಎಚ್ಚರವಹಿಸುವಂತೆ ಹೇಳುತ್ತಿದ್ದರು. ನಾನು ಅವರ ಮಾತನ್ನು ನಿರ್ಲಕ್ಷಿಸುತ್ತಿದ್ದೆ ಎಂದರು.

ಕೆಲದಿನಗಳ ಹಿಂದೆ ಚೆನ್ನಾಗಿದ್ದು, ದೆಹಲಿಗೆ ಹೋದ ಅವರು ಈಗ ಇಲ್ಲ ಎಂದರೆ ನಂಬಲು ಸಾಧ್ಯವಾಗಲಿಲ್ಲ. ನಿನ್ನೆ ಶಾಸಕರ ಔತಣ ಕೂಟದಲ್ಲಿ ಈ ವಿಚಾರ ಕೇಳಿದಾಗ ಯಾರಿಗೂ ಊಟ ಮಾಡುವ ಮನಸ್ಸು ಇರಲಿಲ್ಲ. ಅವರೊಬ್ಬ ಅಜಾತಶತ್ರು. ಅವರ ಅಗಲಿಕೆ ರಾಜ್ಯಕ್ಕೆ ಆದ ನಷ್ಟ ಹಾಗೂ ಅನ್ಯಾಯ. ಯಾರಿಗೂ ಇಂತಹ ಪರಿಸ್ಥಿತಿ ಬರಬಾರದು. ರೈತಕುಟುಂಬದಿಂದ ಬಂದು, ಶಿಕ್ಷಣ ಸಂಸ್ಥೆ ಕಟ್ಟಿ ರಾಜಕೀಯವಾಗಿ ಇಷ್ಟು ಎತ್ತರಕ್ಕೆ ಬೆಳೆದವರಿಗೆ ಈ ರೀತಿ ಆಗಬಾರದಿತ್ತು. ಸೌಮ್ಯ, ವಿನಯತೆಯಿಂದ ರಾಜಕೀಯ ಮಾಡಿಕೊಂಡು ಬಂದ ನಾಯಕನಿಗೆ ಭಗವಂತ ಈ ಶಿಕ್ಷೆ ಕೊಟ್ಟಿದ್ದು, ಭಗವಂತ ಎಷ್ಟು ಕ್ರೂರಿ ಯಾಕೆ? ಎಂದು ದೇವರ ಮೇಲೆ ನಂಬಿಕೆ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ. ಹುಟ್ಟಿದ ಮೇಲೆ ಸಾಯಬೇಕು ನಿಜ, ಆದರೆ ಯಾವುದೇ ಅಭ್ಯಾಸ ಇಲ್ಲದೆ ಚೆನ್ನಾಗಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಸಾಯುತ್ತಾರೆ ಎಂದರೆ ನಿಜಕ್ಕೂ ಬೇಸರವಾಗುತ್ತದೆ ಎಂದು ಡಿಕೆಶಿ ಹೇಳಿದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಮತ ಎಣಿಕೆ ನ.10ಕ್ಕೆ ಮುಂದೂಡಿಕೆ

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಮತ ಎಣಿಕೆ ನ.10ಕ್ಕೆ ಮುಂದೂಡಿಕೆ

ಸುರೇಂದ್ರ ಬಂಟ್ವಾಳ್‌ ಹತ್ಯೆ ಪ್ರಕರಣ: ಒಟ್ಟು 9 ಆರೋಪಿಗಳ ಬಂಧನ

ಸುರೇಂದ್ರ ಬಂಟ್ವಾಳ್‌ ಹತ್ಯೆ ಪ್ರಕರಣ: ಒಟ್ಟು 9 ಆರೋಪಿಗಳ ಬಂಧನ

ಬಾಕ್ಸಿಂಗ್‌’ ಸ್ಪರ್ಧೆ ‌: ಭಾರತಕ್ಕೆ 3 ಚಿನ್ನದ ಪದಕ

ಬಾಕ್ಸಿಂಗ್‌’ ಸ್ಪರ್ಧೆ ‌: ಭಾರತಕ್ಕೆ 3 ಚಿನ್ನದ ಪದಕ

ಶಿಡ್ಲಘಟ್ಟ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಫಲಿತಾಂಶಕ್ಕೆ ತಡೆ

ಶಿಡ್ಲಘಟ್ಟ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಫಲಿತಾಂಶಕ್ಕೆ ತಡೆ

ಅದಾನಿ ಸಮೂಹಕ್ಕೆ ಮಂಗಳೂರು ವಿಮಾನ ನಿಲ್ದಾಣ ಹಸ್ತಾಂತರ

ಅದಾನಿ ಸಮೂಹ ಸಂಸ್ಥೆಗೆ ಮಂಗಳೂರು ವಿಮಾನ ನಿಲ್ದಾಣ ಹಸ್ತಾಂತರ

000

77 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ : ಬೆಂಗಳೂರು ತರಕಾರಿ ವ್ಯಾಪಾರಿಗೆ 42,000 ಸಾವಿರ ದಂಡ.!

“ಕಾಂಪಿಟ್‌ ವಿತ್‌ ಚೀನ” ನನ್ನ ಯೋಜನೆ ಹೈಜಾಕ್‌ ಮಾಡಿದ ಪ್ರಧಾನಿ : ಹೆಚ್ ಡಿಕೆ ಆರೋಪ

“ಕಾಂಪಿಟ್‌ ವಿತ್‌ ಚೀನ” ನನ್ನ ಯೋಜನೆ ಹೈಜಾಕ್‌ ಮಾಡಿದ ಪ್ರಧಾನಿ : ಹೆಚ್ ಡಿಕೆ ಆರೋಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಮತ ಎಣಿಕೆ ನ.10ಕ್ಕೆ ಮುಂದೂಡಿಕೆ

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಮತ ಎಣಿಕೆ ನ.10ಕ್ಕೆ ಮುಂದೂಡಿಕೆ

ಶಿಡ್ಲಘಟ್ಟ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಫಲಿತಾಂಶಕ್ಕೆ ತಡೆ

ಶಿಡ್ಲಘಟ್ಟ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಫಲಿತಾಂಶಕ್ಕೆ ತಡೆ

“ಕಾಂಪಿಟ್‌ ವಿತ್‌ ಚೀನ” ನನ್ನ ಯೋಜನೆ ಹೈಜಾಕ್‌ ಮಾಡಿದ ಪ್ರಧಾನಿ : ಹೆಚ್ ಡಿಕೆ ಆರೋಪ

“ಕಾಂಪಿಟ್‌ ವಿತ್‌ ಚೀನ” ನನ್ನ ಯೋಜನೆ ಹೈಜಾಕ್‌ ಮಾಡಿದ ಪ್ರಧಾನಿ : ಹೆಚ್ ಡಿಕೆ ಆರೋಪ

ಹಾವೇರಿ ಜಿಲ್ಲೆಯಲ್ಲಿ 28 ಜನರಿಗೆ ಕೋವಿಡ್ ಸೋಂಕು; 25 ಜನರು ಗುಣಮುಖ

ಹಾವೇರಿ ಜಿಲ್ಲೆಯಲ್ಲಿ 28 ಜನರಿಗೆ ಕೋವಿಡ್ ಸೋಂಕು; 25 ಜನರು ಗುಣಮುಖ

ಚಿಕ್ಕಮಗಳೂರು : ಶಾಮಿಯಾನ ಸಾಗಾಟದ ವಾಹನ ಪಲ್ಟಿ! ಚಾಲಕ ಪ್ರಾಣಾಪಾಯದಿಂದ ಪಾರು

ಚಿಕ್ಕಮಗಳೂರು : ಶಾಮಿಯಾನ ಸಾಗಾಟದ ವಾಹನ ಪಲ್ಟಿ! ಚಾಲಕ ಪ್ರಾಣಾಪಾಯದಿಂದ ಪಾರು

MUST WATCH

udayavani youtube

ಈ ಮತ್ಸ್ಯಪ್ರೇಮಿಗೆ ಮನೆಯ ಬಾವಿಯೇ ಅಕ್ವೇರಿಯಂ

udayavani youtube

ಬೆಳ್ತಂಗಡಿ: ಕಾಡಿನಿಂದ ನಾಡಿಗೆ ಆಹಾರ ಅರಸಿಬಂದ ಎರಡು ತಿಂಗಳ ಆನೆ ಮರಿ

udayavani youtube

ಅಪಾಯಕಾರಿ ತಿರುವು; ಎಚ್ಚರ ತಪ್ಪಿದರೆ ಅಪಘಾತ ಖಚಿತ!

udayavani youtube

Peoples take on reopening of schools | ಶಾಲೆ ಯಾಕೆ ಬೇಕು? ಯಾಕೆ ಬೇಡ ? | Udayavani

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

ಹೊಸ ಸೇರ್ಪಡೆ

ಹೊಟೇಲ್‌ನಲ್ಲಿ “ಗುಂಡು ಹಾರಾಟ’: ಮೂವರಿಗಾಗಿ ಶೋಧ

ಹೊಟೇಲ್‌ನಲ್ಲಿ “ಗುಂಡು ಹಾರಾಟ’: ಮೂವರಿಗಾಗಿ ಶೋಧ

ಅಡ್ಕ: ಮಾರಕಾಯುಧದಿಂದ ದಾಳಿ: ಗುಂಡು ಹಾರಾಟ; ಕಾರುಗಳಿಗೆ ಹಾನಿ

ಅಡ್ಕ: ಮಾರಕಾಯುಧದಿಂದ ದಾಳಿ: ಗುಂಡು ಹಾರಾಟ; ಕಾರುಗಳಿಗೆ ಹಾನಿ

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಮತ ಎಣಿಕೆ ನ.10ಕ್ಕೆ ಮುಂದೂಡಿಕೆ

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಮತ ಎಣಿಕೆ ನ.10ಕ್ಕೆ ಮುಂದೂಡಿಕೆ

ಸುರೇಂದ್ರ ಬಂಟ್ವಾಳ್‌ ಹತ್ಯೆ ಪ್ರಕರಣ: ಒಟ್ಟು 9 ಆರೋಪಿಗಳ ಬಂಧನ

ಸುರೇಂದ್ರ ಬಂಟ್ವಾಳ್‌ ಹತ್ಯೆ ಪ್ರಕರಣ: ಒಟ್ಟು 9 ಆರೋಪಿಗಳ ಬಂಧನ

ಬಾಕ್ಸಿಂಗ್‌’ ಸ್ಪರ್ಧೆ ‌: ಭಾರತಕ್ಕೆ 3 ಚಿನ್ನದ ಪದಕ

ಬಾಕ್ಸಿಂಗ್‌’ ಸ್ಪರ್ಧೆ ‌: ಭಾರತಕ್ಕೆ 3 ಚಿನ್ನದ ಪದಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.