ಮೃತರ ಸಂಖ್ಯೆ ಆರಕ್ಕೇರಿಕೆ:ಧಾರವಾಡ ಕಟ್ಟಡ ದುರಂತದಲ್ಲಿ 55 ಜನರ ರಕ್ಷಣೆ

Team Udayavani, Mar 22, 2019, 12:30 AM IST

11.jpg

ಧಾರವಾಡ: ನಿರ್ಮಾಣ ಹಂತದ ಯಮ ಸ್ವರೂಪಿ ಕಟ್ಟಡ ಕುಸಿತ ದುರ್ಘ‌ಟನೆಯಲ್ಲಿ ಬುಧವಾರ ಮತ್ತೆ ಮೂರು ಮೃತದೇಹ ಹೊರ ತೆಗೆಯಲಾಗಿದ್ದು, ಮೃತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಅವಶೇಷಗಳಡಿ ಇನ್ನೂ ಇಪ್ಪತ್ತಕ್ಕೂ ಹೆಚ್ಚು ಮಂದಿ ಸಿಲುಕಿದ್ದು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಗಳಿವೆ. ಇದುವರೆಗೆ 55 ಜನರನ್ನು ರಕ್ಷಣೆ ಮಾಡಲಾಗಿದ್ದು, ಗುರುವಾರ ಮಧ್ಯಾಹ್ನದವರೆಗೂ ರಕ್ಷಣಾ ಕಾರ್ಯಾಚರಣೆ ಮುಂದುವರಿಯಲಿದೆ.

ಹುಬ್ಬಳ್ಳಿ ಆನಂದನಗರದ ನಿವಾಸಿ ಸಲೀಂ ಮಕಾಂದಾರ (35), ಮರಾಠಾ ಕಾಲೊನಿ ನಿವಾಸಿ ಆಶೀತ್‌ ಹಿರೇಮಠ(32), ಹುಬ್ಬಳ್ಳಿ ಆನಂದನಗರದ ಇನೋ°ರ್ವ ನಿವಾಸಿ ಮೆಹಬೂಬ್‌ ದೇಸಾಯಿ (55) ಹಾಗೂ ಹುಬ್ಬಳ್ಳಿಯ ಶಿವಶಕ್ತಿನಗರದ ಮಾಬೂಸಾಬ್‌ ರಾಯಚೂರ (48), ಕುಮಾರೇಶ್ವರ ನಗರ ನಿವಾಸಿ, ಅಸ್ಲಂ ಮುಲ್ಲಾ (43) ಹಾಗೂ ಧಾರವಾಡ ತಪೋವನ ನಿವಾಸಿ ಮಹೇಶ್ವರ ಹಿರೇಮಠ (65) ಮೃತರು. ಅವಶೇಷಗಳಡಿ ಮತ್ತಷ್ಟು ಮಂದಿ ಸಿಲುಕಿರುವ ಶಂಕೆ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್‌ ತಂಡ ಕಟ್ಟಡದ ಮೇಲಿನ ಕೆಲವು ಅವಶೇಷಗಳನ್ನು ಕೊರೆದು ಬದುಕಿರುವವರ ಚಲನವಲನ ವೀಕ್ಷಿಸಿತು.

ಬುಧವಾರ ಬೆಳಗಿನ ಜಾವ ನಾಲ್ಕು ಗಂಟೆಯಿಂದ ನೆಲಮಹಡಿಯಲ್ಲಿ ಸಿಲುಕಿರುವವರಿಗೆ ಅನುಕೂಲವಾಗಲೆಂದು ಆಮ್ಲಜನಕ ಮತ್ತು ಗ್ಲುಕೋಸ್‌ ಪ್ಯಾಕೆಟ್‌ ಗಳನ್ನು ತಳ್ಳಲಾಯಿತು. ಮಧ್ಯಾಹ್ನದವರೆಗೂ ಒಳಗಡೆ ಸಿಲುಕಿದ್ದವರ ಚೀರಾಟದ ಧ್ವನಿ ಕೇಳುತ್ತಿತ್ತು. ಅಲ್ಲಿ ಕಿಂಡಿ ಕೊರೆದು ಕೆಳಗಿಳಿದ ಎನ್‌ಡಿಆರ್‌ಎಫ್‌ ಸಿಬ್ಬಂದಿ ಗಾಯಾಳುಗಳನ್ನು ರಕ್ಷಿಸಲು ಹರಸಾಹಸ ಪಟ್ಟರಾದರೂ ಪ್ರಯೋಜವಾಗಲಿಲ್ಲ. 

ಅಲ್ಲಿ ದೈತ್ಯ ಪಿಲ್ಲರ್‌ಗಳು ಅಡ್ಡಬಂದಿದ್ದರಿಂದ ಬುಡದಲ್ಲಿ ಸಿಲುಕಿದವರನ್ನು ರಕ್ಷಿಸಲಾಗದೇ ಹೊರಬಂದರು. ಮಂಗಳವಾರ ಮಧ್ಯರಾತ್ರಿಯಿಂದ ಬುಧವಾರ ಬೆಳಗಿನವರೆಗೂ ಕಾರ್ಯಾಚರಣೆ ಅವಿರತವಾಗಿ ಸಾಗಿತ್ತು, ಬೆಳಗ್ಗೆ 7:45ರ ಸುಮಾರಿಗೆ ಇಬ್ಬರ ಶವಗಳನ್ನು ಹೊರ ತೆಗೆಯಲಾಯಿತು. ರೈತ ಹೋರಾಟಗಾರ ಸಲೀಂ ಸಂಗನಮುಲ್ಲಾ ಎನ್ನುವವರು ಕಟ್ಟಡದ ನೀಲನಕ್ಷೆ ತಂದು ಕೊಟ್ಟಿದ್ದರಿಂದ ಎನ್‌ಡಿಆರ್‌ ಎಫ್‌ ಸಿಬ್ಬಂದಿ ಕಟ್ಟಡದ ಭಾಗಗಳನ್ನು ಗುರುತಿಸಿ ಕಾರ್ಯಾಚರಣೆ ಚುರುಕುಗೊಳಿಸಿದರು.

ಬುಧವಾರ ಸಂಜೆವರೆಗೂ ನಡೆದ ಕಾರ್ಯಾಚರಣೆಯಲ್ಲಿ ನಾಗರಾಜ ಬನ್ಸೋಡೆ (35) ಮಾತ್ರ ತೀವ್ರ ಗಾಯಗೊಂಡು ಪವಾಡ ಸದೃಶ್ಯ ರೀತಿಯಲ್ಲಿ ಬದುಕಿ ಬಂದಿದ್ದು, ಇನ್ನುಳಿದಂತೆ ಒಟ್ಟು ನಾಲ್ವರ ಶವಗಳನ್ನು ಹೊರ ತೆಗೆಯಲಾಯಿತು. ಗುರುವಾರ ಮಧ್ಯಾಹ್ನದನಂತರ ಅಂದರೆ ಕಟ್ಟಡ ದುರಂತವಾದ 48 ಗಂಟೆಗಳ ನಂತರ ನೇರವಾಗಿ ಯಂತ್ರಗಳನ್ನು ಬಳಸಿ ಅವಶೇಷಗಳನ್ನು ಕೊರೆದು ಮತ್ತುಜೆಸಿಬಿಗಳನ್ನು ಬಳಸಿ ತೆಗೆದುಹಾಕಲು ಎನ್‌ಡಿಆರ್‌ಎಫ್‌ ಚಿಂತನೆ ನಡೆಸಿದೆ. 

ನಾಯಿ-ಕ್ಯಾಮರಾ ಬಳಕೆ:ಎನ್‌ಡಿಆರ್‌ಎಫ್‌ ತಂಡದ ಶ್ವಾನ ದಳವು ಬೆಳಗ್ಗೆ 5 ಗಂಟೆಯಿಂದಲೇ ಕಾರ್ಯಾಚರಣೆಗೆ ಇಳಿಯಿತು. ನಾಲ್ಕು ನುರಿತ ಶ್ವಾನಗಳು ಅವಶೇಷಗಳಡಿ ಸಿಲುಕಿದ ವ್ಯಕ್ತಿಗಳ ಪತ್ತೆಗೆ ನೆರವಾದವು. ಇದರ ಆಧಾರದ ಮೇಲೆಯೇ “ವಿಕ್ಟಿಮ್‌ ಲೋಕೇಶನ್‌ ಕ್ಯಾಮರಾ’ಗಳನ್ನು ಬಳಸಿಕೊಂಡು ಕೆಳಗಡೆ ಸಿಲುಕಿದವರ ರಕ್ಷಣೆಗೆ ವ್ಯೂಹ ರಚಿಸಲಾಯಿತು. ಈ ಕ್ಯಾಮರಾದಲ್ಲಿ ಬರೀ ಉಸಿರಾಟವಿದ್ದರೂ ವ್ಯಕ್ತಿ ಇದ್ದಾರೆ ಎನ್ನುವುದನ್ನು ಪತ್ತೆ ಹಚ್ಚಲು ಸಾಧ್ಯವಿರುವುದರಿಂದ ನೆಲಮಹಡಿಯಲ್ಲಿ ಸಿಲುಕಿದವರ ಚಲನ-ವಲನ ಗುರುತಿಸಲು ಇದನ್ನು ಬಳಕೆ ಮಾಡಿಕೊಳ್ಳಲಾಯಿತು. ಈ ನಡುವೆ ನೆಲಮಹಡಿಯಲ್ಲಿದ್ದವರ ರಕ್ಷಣೆಗೆ ಬುಧವಾರ ಮಧ್ಯಾಹ್ನ 12:30ರ ಸುಮಾರಿಗೆ ಕಟ್ಟಡದ ಮುಂಭಾಗದಲ್ಲಿ ಅಂದರೆ ಪಶ್ಚಿಮ ದಿಕ್ಕಿನಿಂದ ಜೆಸಿಬಿ ಬಳಸಿಕೊಂಡು ದೈತ್ಯ ಸುರಂಗ ಮಾರ್ಗವನ್ನು ಕೊರೆಯಲಾಯಿತು. ಅ ಮೂಲಕ ಬಣ್ಣದ ಅಂಗಡಿ ಮತ್ತು ಪೀಠೊಪಕರಣದ ಅಂಗಡಿಗಳಲ್ಲಿ ಇದ್ದವರ ರಕ್ಷಣೆಗೆ ಯತ್ನಿಸಲಾಯಿತಾದರೂ, ಅಲ್ಲಿಂದ ಇಬ್ಬರ ಶವಗಳನ್ನು ಹೊರತರಲಾಯಿತು. ಘಟನೆ ಸಂಬಂಧ ಭಾರತೀಯ ದಂಡ ಸಂಹಿತೆಯ ಕಲಂ 304 ಅಡಿ ಕಟ್ಟಡದ ನಾಲ್ವರು ಮಾಲೀಕರು ಹಾಗೂ ಎಂಜಿನಿಯರ್‌ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಕುಸಿದ ಕಟ್ಟಡಕ್ಕೆ ಪರವಾನಗಿ ನೀಡುವ ಹಂತ, ತಾಂತ್ರಿಕ ದೋಷ ಅಥವಾ ಯಾವುದೇ ಲೋಪಗಳಿದ್ದರೂ
ಕೂಡಾ ತಜ್ಞರನ್ನೊಳಗೊಂಡ ಸಮಿತಿಯಿಂದ ನಿಷ್ಪಕ್ಷಪಾತ ತನಿಖೆ ನಡೆಸಿ ನಿರ್ದಾಕ್ಷಿಣ್ಯವಾಗಿ ತಪ್ಪಿತಸ್ಥರ
ವಿರುದಟಛಿ ಕ್ರಮ ಜರುಗಿಸಲಾಗುವುದು.

● ಆರ್‌.ವಿ.ದೇಶಪಾಂಡೆ, ಸಚಿವ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.