ರೇಷ್ಮೆ ಜತೆ ದೀಪಾವಳಿ..! ಉದಯವಾಣಿ ಓದುಗರಿಗೆ ಸ್ಪರ್ಧೆ

Team Udayavani, Oct 17, 2017, 3:00 PM IST

ಮಣಿಪಾಲ: ರೇಷ್ಮೆ ಸೀರೆ-ಉಡುಗೆಗಳನ್ನು ಈ ದೀಪಾವಳಿಯಲ್ಲಿ ತೊಟ್ಟು ಸಂಭ್ರಮಿಸುವುದಷ್ಟೇ ಅಲ್ಲ ; ಅವುಗಳ ಉತ್ತಮ ಫೋಟೋಗಳನ್ನು ಕಳಿಸಿ ಬಹುಮಾನವನ್ನೂ ಗೆಲ್ಲಲು ಅವಕಾಶವಿದೆ. 

ರೇಷ್ಮೆ ಎಷ್ಟು ಮೋಹಕವೋ ಅಷ್ಟೇ ಪವಿತ್ರ. ಸುಂದರ ರೇಷ್ಮೆಯ ಉಡುಗೆಗಳೊಂದಿಗೆ ಹಬ್ಬಗಳನ್ನು ಆಚರಣೆಯ ಸಂಭ್ರಮವೇ ಬೇರೆ. ಹಾಗಾಗಿಯೇ ಕರಾವಳಿ ಕರ್ನಾಟಕದ ಜನಮನದ ಜೀವನಾಡಿ ಉದಯವಾಣಿ, ಮಣಿಪಾಲ ಆವೃತ್ತಿಯಲ್ಲಿ ತನ್ನ ಓದುಗರು ರೇಷ್ಮೆಯೊಂದಿಗೆ ಸಂಭ್ರಮಿಸುವ ಸಂತಸದ ಕ್ಷಣಗಳಿಗೆ ರೇಷ್ಮೆ ಜತೆ ದೀಪಾವಳಿ ಸ್ಪರ್ಧೆಯನ್ನು ಮಹಿಳೆಯರಿಗಾಗಿ ಆಯೋಜಿಸಿದೆ. 

ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಮಹಿಳೆಯರು ಇದರಲ್ಲಿ ಪಾಲ್ಗೊಳ್ಳಬಹುದು. ಸಾಂಪ್ರದಾಯಿಕ ರೇಷ್ಮೆಯ ಪ್ರತಿಷ್ಠಿತ ಸ್ಥಾನವನ್ನು ಮತ್ತಷ್ಟು ಔನ್ಯತ್ಯಕ್ಕೇರಿಸಲು ಹಾಗೂ ಆ ಮೂಲಕ ಮತ್ತೆ ಸಾಂಪ್ರದಾಯಿಕತೆಗೆ ಒತ್ತು ನೀಡುವುದು ಈ ಸ್ಪರ್ಧೆಯ ಉದ್ದೇಶ.

ಮಹಿಳೆಯರು ರೇಷ್ಮೆ ಸೀರೆಯೊಂದಿಗೆ ಆಚರಿಸುತ್ತಿರುವ ದೀಪಾವಳಿಯ ವಿಶಿಷ್ಟ ಫೋಟೋಗಳನ್ನು ನಮಗೆ ಕಳುಹಿಸಿಕೊಡಬೇಕು. ಅಮ್ಮ ಮಗಳು, ಅತ್ತೆ ಸೊಸೆ, ಅಕ್ಕ ತಂಗಿ, ಗೆಳತಿಯರು ಹೀಗೆ ಒಟ್ಟಾಗಿ ಆಚರಿಸುವ ಫೋಟೋಗಳನ್ನು ಕಳುಹಿಸಬಹುದು. 

ಉತ್ತಮ ರೆಸೊಲ್ಯೂಶನ್‌ ಹೊಂದಿರುವ, ಕಲಾತ್ಮಕವಾಗಿರುವ, ನೈಜತೆಯಿಂದ ಕೂಡಿರುವ ಫೋಟೋಗಳಿಗೆ ಹೆಚ್ಚಿನ ಪ್ರಾಶಸ್ತ್ಯತೆ. ಫೋಟೋಗಳನ್ನು ಕಳುಹಿಸಲು ಕೊನೆಯ ದಿನಾಂಕ: 23-10-2017. ವಿಜೇತ ಫೋಟೋಗಳನ್ನು 27-10-2017ರ ಉದಯವಾಣಿ ದಿನಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.  ಫೋಟೋಗಳನ್ನು ನಮ್ಮ ಇ-ಮೇಲ್‌ ವಿಳಾಸ sudina.spl@udayavani.com ಅಥವಾ ವಾಟ್ಸಪ್‌ ನಂಬರಿಗೆ 76187 74529 ಕಳುಹಿಸಿಕೊಡಿ.

ಉತ್ತಮ ಫೋಟೋಗಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು. ಈ ಸ್ಪರ್ಧೆಯ ಬಹುಮಾನಗಳನ್ನು ಮಂಗಳೂರಿನ ಪ್ರಖ್ಯಾತ ಜವಳಿ ಮಳಿಗೆ ಎಂ. ಸಂಜೀವ ಶೆಟ್ಟಿ ಸಿಲ್ಕ್ಸ್‌ ಆ್ಯಂಡ್‌ ಸಾರೀಸ್‌ ಇವರು ಪ್ರಾಯೋಜಿಸುತ್ತಿದ್ದು, ಪ್ರಥಮ ಬಹುಮಾನ 15 ಸಾವಿರ ರೂ. ಬೆಲೆಯ ರೇಷ್ಮೆ ಸೀರೆ, ದ್ವಿತೀಯ ಬಹುಮಾನ 10 ಸಾವಿರ ರೂ. ಮೌಲ್ಯದ ರೇಷ್ಮೆ ಸೀರೆ, ತೃತೀಯ ಬಹುಮಾನ 5 ಸಾವಿರ ರೂ. ಮೌಲ್ಯದ ರೇಷ್ಮೆ ಸೀರೆ ಹಾಗೂ 5 ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು.

ದೀಪಾವಳಿಯ ಸಂಭ್ರಮವನ್ನು ಮತ್ತಷ್ಟು ಸಂಭ್ರಮಿಸಲು ಇದೊಂದು ಸದಾವಕಾಶ. ಬನ್ನಿ ದೀಪಾವಳಿಯನ್ನು ರೇಷ್ಮೆಯೊಂದಿಗೆ ಸಂಭ್ರಮಿಸಿ..

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ