ಗಾಜನೂರು ಜಲಾಶಯ ಭರ್ತಿ: ಐದು ಗೇಟುಗಳ ಮೂಲಕ ನೀರು ಹೊರಕ್ಕೆ
Team Udayavani, May 19, 2022, 8:04 PM IST
ಶಿವಮೊಗ್ಗ: ಭಾರಿ ಮಳೆ ಸುರಿದ ಪರಿಣಾಮ ತುಂಗಾ ಜಲಾಶಯ ಭರ್ತಿಯಾಗಿದ್ದು ಐದು ಗೇಟುಗಳ ಮೂಲಕ ನೀರು ಹೊರಬಿಡಲಾಗುತ್ತಿದೆ.
ಜಲಾಶಯದ ಗರಿಷ್ಠ ಮಟ್ಟ 588.24 ಮಿಮೀ ಆಗಿದ್ದು, ಈಗಾಗಲೆ ಅಷ್ಟೆ ಪ್ರಮಾಣದ ನೀರಿನ ಸಂಗ್ರಹವಿತ್ತು. ಹಿನ್ನೀರು ಭಾಗದಲ್ಲಿ ಭಾರಿ ಮಳೆಯಾಗಿದ್ದರಿಂದ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿತ್ತು.
ಗುರುವಾರ ಜಲಾಶಯದ ಐದು ಕ್ರಸ್ಟ್ ಗೇಟುಗಳನ್ನು ಮೇಲೆತ್ತಿ, ಹೊಳೆಗೆ ನೀರು ಹರಿಸಲಾಯಿತು. ಸದ್ಯ ಐದು ಸಾವಿರ ಕ್ಯೂಸೆಕ್ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಉಪ ವಿಭಾಗಾಧಿಕಾರಿ ಪ್ರಕಾಶ್ ಸೇರಿದಂತೆ ಹಲವು ಅಧಿಕಾರಿಗಳು ಜಲಾಶಯಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.
ಇದನ್ನೂ ಓದಿ : ಭಟ್ಕಳ: ಭಾರಿ ಮಳೆಗೆ ತಗ್ಗು ಪ್ರದೇಶಗಳು ಜಲಾವೃತ, ಆತಂಕದಲ್ಲಿ ಜನತೆ