ಬಜೆಟ್‌ ಕುರಿತು ಹಲವರು ಕನ್‌ಪ್ಯೂಸ್‌: ಸುದ್ದಿಗೋಷ್ಠಿಯಲ್ಲಿ ಸಿಎಂ


Team Udayavani, Jul 5, 2018, 2:26 PM IST

hdk.jpg

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಗುರುವಾರ ಮಂಡಿಸಿರುವ ಬಜೆಟ್‌ ಕುರಿತು ಹಲವರು ಗೊಂದಲಕ್ಕೆ ಗುರಿಯಾಗಿದ್ದು, ಈ ಬಗ್ಗೆ  ಮುಖ್ಯಮಂತ್ರಿಗಳೇ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. 

ಬಜೆಟ್‌ ಮಂಡನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಜೆಟ್‌ ಕುರಿತು ಹಲವರಲ್ಲಿ ಒಂದೊಂದು ರೀತಿಯ ವ್ಯಾಖ್ಯಾನಗಳಿವೆ. ಹಲವರಲ್ಲಿ ತಪ್ಪುಗ್ರಹಿಕೆಗಳಿವೆ ಯಾರೂ ತಪ್ಪು ಗ್ರಹಿಕೆಗೆ ಒಳಗಾಗಬೇಕಿಲ್ಲ ಎಂದರು. 

ನಮ್ಮ ಈ ಆಯ ವ್ಯಯ ಮಂಡನೆ ಇದರಲ್ಲಿ ನಾನು ನಿಮಗೆ ಮೊದಲೆ ಹೇಳಿದ್ದೆ,  2018  ಫೆಬ್ರವರಿ 16 ರಂದು  ಸದನದಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರು  ಮಂಡಿಸಿರುವ ಆಯವ್ಯಯದಲ್ಲಿ ರುವ ಎಲ್ಲಾ ಕಾರ್ಯಕ್ರಮಗಳನ್ನು  ಸಂಪೂರ್ಣ ಮುಂದುವರಿಸಿದ್ದೇವೆ. ಪ್ರತಿಯೊಂದು ಇಲಾಖೆಯಲ್ಲಿ  ಮತ್ತೆ ಪುನ ವಿವರಣೆ ಕೊಡುವ ಅಗತ್ಯ ಇಲ್ಲ ಎಂದು ಇಲ್ಲಿ ಪ್ರಕಟಿಸಿಲ್ಲ. ನಾನು ಆ ಯೋಜನೆಗಳನ್ನು ಪ್ರಕಟಿಸಿದರೆ 6 ಗಂಟೆ ಬಜೆಟ್‌ ಓದಬೇಕಿತ್ತು ಎಂದರು. 

ಕರಾವಳಿ, ಮಲೆನಾಡು, ಹೈದ್ರಾಬಾದ್‌ ಕರ್ನಾಟಕ ಎಲ್ಲಾ ಇಲಾಖೆಗಳು ಸೇರಿದಂತೆ ಅಲ್ಪಸಂಖ್ಯಾತರಿಗೆ ಕೊಟ್ಟಿರುವ ಎಲ್ಲಾ ಯೋಜನೆಗಳನ್ನು ಮುಂದುವರಿಸಿದ್ದೇನೆ ಗೊಂದಲ ಬೇಡ. ಯಾರೂ ಅನ್ಯತಾ ಭಾವಿಸಬೇಕಿಲ್ಲ.ಕಾಮಾಲೆ ಕಣ್ಣಿಗೆ  ಎಲ್ಲವೂ ಹಳದಿಯಾಗಿಯೇ ಕಾಣುತ್ತದೆ ಎಂದರು.  

ಸಿದ್ದರಾಮಯ್ಯನವರ ಕಾಲದಲ್ಲಿ ಮಂಡನೆಯಾದ ಬಜೆಟ್‌ನ ಎಲ್ಲಾ ಕಾರ್ಯಕ್ರಮಗಳು ಮುಂದುವರಿಯುತ್ತವೆ. ಅಂದು ಅವರು 2,09,181 ಕೋಟಿ ರೂ ಬಜೆಟ್‌ ಮಂಡಿಸಿದ್ದರು. ನಾನು ಜನತೆಗೆ ಮನವರಿಕೆ  ಮಾಡುತ್ತೇನೆ, ಎಲ್ಲಾ ಕಾರ್ಯಕ್ರಮ ಮುಂದುವರಿಸಿದ್ದೇವೆ. ಬಜೆಟ್‌ ಗಾತ್ರ ಈಗ 2,18,488 ಕೋಟಿಗೆ ಏರಿಕೆ ಮಾಡಿದ್ದೇವೆ. 9,307 ಕೋಟಿ ಗಾತ್ರವನ್ನು ಏರಿಕೆ ಮಾಡಿದ್ದೇವೆ ಎಂದರು. 

ವಾಹನ ದಟ್ಟನೆ ಸರಿಪಡಿಸಲು ಎಲಿವೇಟೆಟ್‌ ರೋಡ್‌ ನಿರ್ಮಿಸಲು 2006 ರಲ್ಲೇ ನಾನು ತೀರ್ಮಾನ ಮಾಡಿದ್ದೆ. ಹೆಬ್‌ಬಾಳದಿಂದ ಫ್ಲೈಓವರ್‌ ಮಾಡಲು 1000 ಕೋಟಿ ರೂ ಮೀಸಲಿಟ್ಟಿದ್ದೇವೆ. ಬೆಂಗಳೂರು ನಗರಕ್ಕೆ 11,000 ಕೋಟಿ ರೂಪಾಯಿ ಮೀಸಲಿಟ್ಟಿದ್ದೇವೆ. ಇದನ್ನು ಅಶೋಕ ಚಕ್ರವರ್ತಿ ಅರ್ಥ ಮಾಡಿಕೊಳ್ಳಬೇಕು ಎಂದು ಆರ್‌ .ಅಶೋಕ್‌ಗೆ ತಿರುಗೇಟು ನೀಡಿದರು. 

ಪೆಟ್ರೋಲ್‌ ದರ ದಕ್ಷಿಣ ಭಾರತದಲ್ಲೇ ನಮ್ಮಲ್ಲಿ ಕಡಿಮೆ 

ಪೆಟ್ರೋಲ್‌ ಮತ್ತು ಡಿಸೇಲ್‌ ಮೇಲಿನ ಸೆಸ್‌ ಹೆಚ್ಚಳದ ಕುರಿತು ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿ ಪೆಟ್ರೋಲ್‌ ಮೇಲಿನ   ಸೆಸ್‌ 30% ರಿಂದ 32 %ಗೆ  ಹೆಚ್ಚಳ ಮಾಡಿದ್ದೇವೆ. ಡಿಸೇಲ್‌ ಮೇಲಿನ ಸೆಸ್‌ 19 % ನಿಂದ ಸೆಸ್‌ 21 % ಗೆ ಏರಿಕೆ ಮಾಡಿದ್ದೇವೆ. ದಕ್ಷಿಣ ಭಾರತದಲ್ಲಿ ಪೆಟ್ರೋಲ್‌ ಬೆಲೆ ನಮ್ಮಲ್ಲಿ ಕಡಿಮೆ ಇದೆ ಇದನ್ನು ಬಿಜೆಪಿ ಅರ್ಥ ಮಾಡಿಕೊಳ್ಳಬೇಕು.ಬಿಜೆಪಿ ಅಧಿಕಾರದಲ್ಲಿರುವ ಮಹಾರಾಷ್ಟ್ರದಲ್ಲಿ ಪೆಟ್ರೋಲ್‌ ಲೀಟರ್‌ಗೆ 81.23 ರೂಪಾಯಿ ಇದೆ. ನಮ್ಮಲ್ಲಿ 77.91 ರೂಪಾಯಿ ಇದೆ. ಈ ಬಗ್ಗೆ ಬಿಜೆಪಿಯವರು ಬಾಯ್‌ಬಿಡಲಿ ಎಂದರು. 

ಕೇಂದ್ರ ಸರ್ಕಾರದ ವತಿಯಿಂದ ಒಂದು ಬಿಡಿಗಾಸು ಕೊಡುವ ಯೋಗ್ಯತೆ ನಿಮಗಿಲ್ಲ. ಸದನಕ್ಕೆ ಬನ್ನಿ ಸೋಮವಾರ.ಚರ್ಚೆಗೆ ಸಿದ್ದನಾಗಿದ್ದೇನೆ ಎಂದು ಬಿಜೆಪಿ ನಾಯಕರ ವಿರುದ್ಧ  ಕಿಡಿ ಕಾರಿದರು.

ಖಾಸಗಿಯವರ ಸಾಲ ಯಡಿಯೂರಪ್ಪ ಮನ್ನಾ ಮಾಡ್ತಾರೆ!
ಸುದ್ದಿಗಾರರು ಖಾಸಗಿ ಸಾಲ ಮನ್ನಾ ವಿಚಾರ ಕೇಳಿದಾಗ ಅದನ್ನು ಯಡಿಯೂರಪ್ಪನವರು ಅಧಿಕಾರಕ್ಕೆ ಬಂದು ಮನ್ನಾ ಮಾಡುತ್ತಾರೆ ಎಂದು ನಗೆಯಾಡಿದರು. ನಾನು ಖಾಸಗಿಯವರ ಬಳಿ ರೈತರು ಸಾಲ ಮಾಡಿ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಚರ್ಚೆ ಮಾಡಿದ್ದೆ. ನಮ್ಮ ಸರ್ಕಾರ ಬಂದರೆ ರೈತರು ಸಮಸ್ಯೆಗೆ ಸಿಲುಕದಂತೆ ತಡೆಯಲು ಕ್ರಮ ಕೈಗೊಳ್ಳುವ ಕುರಿತಾಗಿ ಹೇಳಿದ್ದೆ ಎಂದರು.

ನಾನು ಪರಮೇಶ್ವರ್‌ ನೋಟ್‌ ಪ್ರಿಂಟ್‌ ಮಾಡ್ತೀವಾ?

ಬಿಜೆಪಿಯವರು ನಮ್ಮನ್ನು ಹೊಗಳುವುದಿಲ್ಲ. ಅವರ ಹೊಗಳಿಗೆ ನನಗೆ ಬೇಕಾಗಿಲ್ಲ. ರಾಜ್ಯದ ಜನರ ಬೆಂಬಲ  ನನಗಿದ್ದರೆ ಸಾಕು. ಬಿಜೆಪಿಯವರು ಹೊಗಳಿದರೆ ಅವರಿಗೆ ರಾಜಕೀಯ ಮಾಡಲು ಏನೂ ವಿಚಾರವಿರುವುದಿಲ್ಲ. 

ಸಾಲ ಮನ್ನಾಕ್ಕೆ ಹಣ ಹೊಂದಿಸಲು…ಹಿಂದೆ ಯಡಿಯೂರಪ್ಪನವರೇ ವಿಧಾನಪರಿಷತ್‌ನಲ್ಲಿ ಹೇಳಿದ್ದರಲ್ಲ  ಸಾಲ ಮನ್ನಾ ಮಾಡಲು ನೋಟ್‌ ಪ್ರಿಂಟ್‌ ಮಾಡುವ ಮೆಷಿನ್‌ ಇಟ್ಟುಕೊಂಡಿದ್ದೇವಾ ಎಂದು ನಾನು ಈಗ ಅದನ್ನೇ ಹೇಳುತ್ತೇನೆ  ನಾನು ಮತ್ತು  ಪರಮೇಶ್ವರ್‌ ಎನು ನೋಟ್‌ ಪ್ರಿಂಟ್‌ ಮಾಡುವ ಯಂತ್ರ ಇಟ್ಟುಕೊಂಡಿದ್ದೇವಾ. ಕೇಂದ್ರ ಸರ್ಕಾರ ನಮಗೆ ವಿಶೇಷ ಅಧಿಕಾರವೇನಾದರೂ ನೀಡಿದೆಯಾ ಎಂದು ಕಿಡಿ ಕಾರಿದರು. 

ಕಾಂಗ್ರೆಸ್‌ ಪಕ್ಷ ಸಂಪೂರ್ಣ ಸಹಕಾರ ನೀಡಿದೆ 

ನಾನು ಇಂದು ಉತ್ತಮವಾದ ಬಜೆಟ್‌ ಮಂಡಿಸಲು ಕಾಂಗ್ರೆಸ್‌ ಮುಖಂಡರು ಸಂಪೂರ್ಣ ಸಹಕಾರ ನೀಡಿದ್ದಾರೆ. ರಾಹುಲ್‌ ಗಾಂಧಿ ಅವರೇ ಬೆಳಗ್ಗೆ ಸಾಲ ಮನ್ನಾ ಮಾಡುವ ಕುರಿತು ಟ್ವೀಟ್‌ ಮಾಡಿದ್ದರು. ಇದು ನಮ್ಮ ಹೊಂದಾಣಿಕೆ ಎಷ್ಟು ಉತ್ತಮವಾಗಿದೆ ಎನ್ನುವುದಕ್ಕೆ ಸಾಕ್ಷಿ ಎಂದರು. 

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.