ಸ್ಯಾಂಡಲ್ ವುಡ್ ಮನವಿಗೆ ಮಣಿದ ಸರ್ಕಾರ : ಹೌಸ್ ಫುಲ್ ಪ್ರದರ್ಶನಕ್ಕೆ ಅಸ್ತು
Team Udayavani, Apr 3, 2021, 8:50 PM IST
ಬೆಂಗಳೂರು : ಚಿತ್ರರಂಗದ ಮನವಿಗೆ ಮಣಿದಿರುವ ರಾಜ್ಯ ಸರ್ಕಾರ ಥಿಯೇಟರ್ ಗಳ ಹೌಸ್ ಫುಲ್ ಪ್ರದರ್ಶನಕ್ಕೆ ಅನುಮತಿ ನೀಡಿದೆ.
ನಿನ್ನೆ ಸರ್ಕಾರವು ರಾಜ್ಯದ 8 ಜಿಲ್ಲೆಗಳ ಚಿತ್ರ ಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಿ ಆದೇಶ ನೀಡಿತ್ತು.
ಇದೇ ಹಿನ್ನೆಲೆ ನಟ ಪುನೀತ್ ರಾಜ್ ಕುಮಾರ್, ಯಶ್, ಸುದೀಪ್ ಸೇರಿದಂತೆ ಕನ್ನಡ ಚಿತ್ರರಂಗದ ಹಲವರು ಸರ್ಕಾರದ ಆದೇಶದ ವಿರುದ್ಧ ತಿರುಗಿ ಬಿದ್ದಿದ್ದರು.
ಸದ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಮನವಿಯನ್ನು ಸ್ವೀಕರಿಸಿರುವ ಸರ್ಕಾರ ಏಪ್ರಿಲ್ 7 ರ ವರೆಗೆ ನಿರ್ಬಂಧ ಸಡಿಲಿಕೆ ಮಾಡಿದೆ. ಈ ಮೂಲಕ ಮೂರು ದಿನಗಳ ಕಾಲ ನಿರ್ಬಂಧ ಸಡಿಲಿಕೆ ಮಾಡಿರುವ ಸರ್ಕಾರ, ಏಪ್ರಿಲ್ 6 ರ ಮಧ್ಯರಾತ್ರಿವರೆಗೆ ನಿರ್ಬಂಧ ಸಡಿಲಿಕೆ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಸುಧಾಕರ್, ಚಿತ್ರರಂಗದ ಹಾಗೂ ವಾಣಿಜ್ಯ ಮಂಡಳಿಯ ಮನವಿ ಮೇರೆಗೆ ಚಿತ್ರಮಂದಿರಗಳು ಶೇ.50% ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುವ ನಿಯಮವನ್ನು ಬುಧವಾರ, ದಿನಾಂಕ 7 ಏಪ್ರಿಲ್ ನಿಂದ ಜಾರಿಗೆ ಬರುವಂತೆ ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗಿದೆ ಎಂದಿದ್ದಾರೆ.
ಚಿತ್ರರಂಗದ ಹಾಗೂ ವಾಣಿಜ್ಯ ಮಂಡಳಿಯ ಮನವಿ ಮೇರೆಗೆ ಚಿತ್ರಮಂದಿರಗಳು ಶೇ.50% ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುವ ನಿಯಮವನ್ನು ಬುಧವಾರ, ದಿನಾಂಕ 7 ಏಪ್ರಿಲ್ ನಿಂದ ಜಾರಿಗೆ ಬರುವಂತೆ ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗಿದೆ. pic.twitter.com/6L3MihbRv2
— Dr Sudhakar K (@mla_sudhakar) April 3, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಾಟ್ಸ್ಪಾಟ್ ಬೆಂಗಳೂರು! ಇಲ್ಲೇ ಬಂದು ಸ್ಟಾರ್ಟಪ್ ಆರಂಭಿಸುತ್ತಿರುವ ವಿದೇಶಿಯರು
ದೇಸೀ ಪಠ್ಯಕ್ಕೆ ಸಲಹೆ ನೀಡಿ: ಆನ್ಲೈನ್ ಸಲಹೆ ನೀಡಲು ದೇಶವಾಸಿಗಳಿಗೆ ಕೇಂದ್ರದ ಮನವಿ
ಸಂಸತ್, ವಿಧಾನಸಭೆಗಳಿಗೆ ಸ್ಮಾರ್ಟ್ ಟಚ್!
ಮುಸ್ಲಿಮರು ವಾಸಿಸುವ ಪ್ರದೇಶ ದೇಶದ ಭಾಗವಲ್ಲವೇ?: ಸಚಿವ ಆರಗ ಜ್ಞಾನೇಂದ್ರ
ಇಂದಿನಿಂದ ಲಾರ್ಡ್ಸ್ ಟೆಸ್ಟ್: ಬಿಲ್ಲಿಂಗ್ಸ್ ಬದಲು ಬೆನ್ ಫೋಕ್ಸ್