ತಾಂತ್ರಿಕ ದೋಷದಿಂದ ಉತ್ಪಾದನೆ ಕುಂಠಿತ: ಬೇಡಿಕೆಯಷ್ಟು ಪೂರೈಕೆಯಾಗುತ್ತಿಲ್ಲ ವಿದ್ಯುತ್
Team Udayavani, Mar 22, 2021, 12:35 PM IST
ಶಿವಮೊಗ್ಗ: ಕರ್ನಾಟಕ ಪವರ್ ಕಾರ್ಪೊರೇಷನ್, ಯುಪಿಸಿಎಲ್ ಮತ್ತು ಕೇಂದ್ರೀಯ ವಿದ್ಯುತ್ ಉತ್ಪಾದನಾ ಕೇಂದ್ರಗಳ ಉತ್ಪಾದನಾ ಘಟಕಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿರುವುದರಿಂದ ಕೆಲವು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಬೇಡಿಕೆಯಷ್ಟು ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂದು ಮೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಳಿಸಿದ್ದಾರೆ.
ಇದನ್ನೂ ಓದಿ:ವಿಧಾನ ಪರಿಷತ್ ನಲ್ಲಿ ಮುಂದುವರಿದ ಗದ್ದಲ: ಸದನದ ಸಮಿತಿ ರಚಿಸಲು ಪ್ರತಿಪಕ್ಷ ಪಟ್ಟು
ರಾಜ್ಯದ ವಿದ್ಯುತ್ ಜಾಲವು ಒಟ್ಟು 4281 ಮೆ.ವ್ಯಾ ಪ್ರಮಾಣದ ವಿದ್ಯುತ್ ಕೊರತೆಯನ್ನು ಎದುರಿಸುತ್ತಿದೆ. ಇದರಿಂದಾಗಿ ಮೆಸ್ಕಾಂಗೆ ಹಂಚಿಕೆಯಾಗುವ ವಿದ್ಯುತ್ ಪ್ರಮಾಣದಲ್ಲಿ ಸುಮಾರು 200 ಮೆ.ವ್ಯಾ ಕೊರತೆಯಾಗುವ ಸಂಭವವಿದೆ. ಆದ್ದರಿಂದ ಮೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲಿ ಅನಿಯಮಿತವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸ ಕಂಡು ಬರಲಿದೆ. ನೀರಾವರಿ ಪಂಪ್ ಸೆಟ್‌ಗಳಿಗೆ ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮತ್ತು ಮಧ್ಯರಾತ್ರಿಯಿಂದ ಬೆಳಿಗ್ಗೆ 4ರವರೆಗೆ ಮಾತ್ರ ವಿದ್ಯುತ್ ಪೂರೈಕೆಯಾಗಲಿದೆ.
ಮುಂದಿನ ವಾರದ ಒಳಗಾಗಿ ವಿದ್ಯುತ್ ಉತ್ಪಾದನೆಯಲ್ಲಿ ಸುಧಾರಣೆ ನಿರೀಕ್ಷಿಸಲಾಗಿದ್ದು, ಗ್ರಾಹಕರು ಸಹಕರಿಸುವಂತೆ ಅವರು ಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತಿಳಿಗೇಡಿ ಯುವಕನಿಂದ ಪಠ್ಯ ಪರಿಷ್ಕರಣೆ ಮಾಡಿಸಿದ್ದಾರೆ: ಸಿದ್ದರಾಮಯ್ಯ ಕಿಡಿ
ಮತಾಂತರ ನಿಷೇಧದ ಸುಗ್ರೀವಾಜ್ಞೆಯು ಉದ್ಯೋಗಗಳನ್ನು ಸೃಷ್ಟಿಸುವುದೇ?: ಡಿಕೆಶಿ ಪ್ರಶ್ನೆ
ಭಾರಿ ಮಳೆ : ನೀರು ನುಗ್ಗಿರುವ ಮನೆಗಳಿಗೆ 25,000 ರೂ ಪರಿಹಾರ : ಸಿಎಂ ಬೊಮ್ಮಾಯಿ
ಪಂಚರತ್ನ ಕಾರ್ಯಕ್ರಮದ ಪ್ರಚಾರಕ್ಕೆ 123 ವಾಹನಗಳನ್ನು ಖರೀದಿಸಿದ ಜೆಡಿಎಸ್
ಕುಟುಂಬ ರಾಜಕಾರಣದ ಆದ್ಯ ಪಿತಾಮಹ: ಬಿಜೆಪಿ ಟ್ವೀಟ್ ಕುಟುಕು, ಕುಮಾರಸ್ವಾಮಿ ಸಿಡುಕು