“ರಾಜ್ಯದಲ್ಲಿ ಬಲಪಂಥೀಯ ಸಂಘಟನೆಗಳನ್ನೂ ನಿಷೇಧಿಸಿ’

Team Udayavani, Jan 25, 2020, 3:03 AM IST

ಮೈಸೂರು: ಎಸ್‌ಡಿಪಿಐ, ಪಿಎಫ್ಐ ಸಂಘಟನೆ ನಿಷೇಧಿಸುವಂತೆ ಶಿಫಾರಸು ಮಾಡಿರುವ ರಾಜ್ಯ ಸರ್ಕಾರದ್ದು ದ್ವಂದ್ವ ನಿಲುವು. ನಿಷೇಧ ಮಾಡುವುದಾದರೆ ಬಲ ಪಂಥೀಯ ಸಂಘಟನೆಗಳಾದ ಆರೆಸ್ಸೆಸ್‌, ಭಜರಂಗದಳ, ಶ್ರೀರಾಮಸೇನೆಯನ್ನೂ ನಿಷೇಧಿಸಲಿ ಎಂದು ದಿನೇಶ್‌ ಗುಂಡೂರಾವ್‌ ಆಗ್ರಹಿಸಿದರು. ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿ, ಕೇವಲ ಎಸ್‌ಡಿಪಿಐ ಅಥವಾ ಎಡಪಂಥೀಯ ಸಂಘಟನೆಗಳು ಮಾತ್ರ ಅಪರಾಧ ಕೃತ್ಯ ಮಾಡಿದ್ದಾವಾ?

ಬಲಪಂಥೀಯ ಸಂಘಟನೆಗಳಾದ ಆರೆಸ್ಸೆಸ್‌, ಭಜರಂಗದಳ, ಶ್ರೀರಾಮಸೇನೆ ಗಳವರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿಲ್ಲವೇ ಎಂದು ಪ್ರಶ್ನಿಸಿದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇಟ್ಟ ಪ್ರಕರಣದಲ್ಲಿ ನಿಮಗಿಷ್ಟವಾಗದ ಹೆಸರು ಕೇಳಿ ಬಂದಿದ್ದರಿಂದ ಮೌನವಾಗಿದ್ದೀರಿ, ನೀವು ಗುರಿಯಾಗಿಸಿ ಕೊಂಡಿರುವ ಅಲ್ಪಸಂಖ್ಯಾತರ ಹೆಸರು ಕೇಳಿ ಬಂದಿದ್ದರೆ ಸುಮ್ಮನಿರುತ್ತಿದ್ದಿರಾ ಎಂದು ಪ್ರಶ್ನಿಸಿದರು.

ಬಲಪಂಥೀಯ ಸಂಘಟನೆಗಳನ್ನೂ ನಿಷೇಧ ಮಾಡಬೇಕು ಎಂದಿರುವ ದಿನೇಶ್‌ ಗುಂಡೂರಾವ್‌ ಮಾತಿಗೆ ಅಷ್ಟು ಬೆಲೆಯೂ ಇಲ್ಲ. ಬೆಲೆ ಕೊಡಬೇಕಾದ ಅಗತ್ಯವೂ ಇಲ್ಲ. ನಿಮ್ಮನ್ನು ಜನ ಮೂಲೆಗೆ ಸೇರಿಸಿ ಆಗಿದೆ. ನಿಮ್ಮದೇ ಪಕ್ಷದ ಶಾಸಕ ತನ್ವೀರ್‌ ಸೇಠ್ ಮೇಲೆ ಹಲ್ಲೆ ನಡೆಸಿದ್ದು ಯಾರು? ಮೈಸೂರಿನಲ್ಲಿ ರಾಜು, ಬೆಂಗಳೂರಿನಲ್ಲಿ ರುದ್ರೇಶ್‌ ಕೊಲೆ ಮಾಡಿದ್ದು ಯಾರು?
-ಪ್ರತಾಪ್‌ ಸಿಂಹ, ಸಂಸದ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ