ಕೋಟ್ಯಂತರ ರೂ. ಸ್ನೇಹಿತರ ಮನೆಯಲ್ಲಿಇಟ್ಟಿದ್ದ ಹೆಡ್‌ಕಾನ್‌ಸ್ಟೆಬಲ್ ಶ್ರೀಧರ್
Team Udayavani, May 19, 2022, 1:47 AM IST
ಬೆಂಗಳೂರು: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಡ್‌ಕಾನ್‌ಸ್ಟೇಬಲ್ ಶ್ರೀಧರ್ ನಿವಾಸದಲ್ಲಿ ಸಿಕ್ಕ ಹಣ, ಅದಕ್ಕೂ ಮೊದಲು ಆತನ ಸ್ನೇಹಿತರ ಮನೆಗಳಲ್ಲಿ ಇತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.
ಪಿಎಸ್‌ಐ ಅಕ್ರಮದ ರೂವಾರಿ ಡಿವೈಎಸ್ಪಿ ಶಾಂತಕುಮಾರ್ ಮತ್ತು ಹೆಡ್‌ಕಾನ್‌ಸ್ಟೇಬಲ್ ಶ್ರೀಧರ್ ಅಭ್ಯರ್ಥಿಗಳಿಂದ ಪಡೆದಿದ್ದ ಕೋಟ್ಯಂತರ ರೂ. ಪೈಕಿ ಸ್ವಲ್ಪ ಶಾಂತಕುಮಾರ್ ಮನೆಯಲ್ಲಿ ಬಾಕಿ ಹಣವನ್ನು ಶ್ರೀಧರ್ ಮನೆಯಲ್ಲಿ ಇಟ್ಟುಕೊಂಡಿದ್ದರು.
ಆದರೆ, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಶಾಂತಕುಮಾರ್ ತನ್ನ ಮನೆಯಲ್ಲಿದ್ದ ಹಣವನ್ನು ಶ್ರೀಧರ್ ಮನೆಯಲ್ಲಿ ಇಡಲು ಸೂಚಿಸಿದ್ದ. ಇನ್ನು ಶ್ರೀಧರ್ ಕೂಡ ಒಂದೂವರೆ ಕೋಟಿ ರೂ. ಅನ್ನು ತನ್ನ ಆರು ಮಂದಿ ಸ್ನೇಹಿತರಿಗೆ ಹಂಚಿ ಕೆಲ ಕಾಲ ರಹಸ್ಯವಾಗಿ ಇಟ್ಟುಕೊಳ್ಳುವಂತೆ ಸೂಚಿಸಿದ್ದ. ಈ ಮಧ್ಯೆ ಶ್ರೀಧರ್ ಬಂಧನವಾಗುತ್ತಿದ್ದಂತೆ ಹೆದರಿದ ಆತನ ಸ್ನೇಹಿತರು ತಮ್ಮ ಬಳಿಯಿದ್ದ ಹಣವನ್ನು ಆತನ ಮನೆಗೆ ತಂದು ಕೊಟ್ಟು ಹೋಗಿದ್ದರು. ಹೀಗಾಗಿ ಆತನ ಮನೆ ಮೇಲೆ ದಾಳಿ ನಡೆಸಿದಾಗ ಮೊದಲಿಗೆ 16 ಲಕ್ಷ ರೂ., ಬಳಿಕ 1.55 ಕೋಟಿ ರೂ. ಪತ್ತೆಯಾಗಿತ್ತು. ಈ ಹಿಂದೆ ಮಧ್ಯವರ್ತಿ ಕೇಶವಮೂರ್ತಿ ನಿವಾಸದಲ್ಲಿ 30 ಲಕ್ಷ ರೂ. ಅನ್ನು ಜಪ್ತಿ ಮಾಡಲಾಗಿತ್ತು. ಈ ಪ್ರಕರಣದ ಸಂಬಂಧ ಬೆಂಗಳೂರಿನಲ್ಲೇ ಇದುವರೆಗೆ ಒಟ್ಟು 2.1 ಕೋಟಿ ರೂ. ಅನ್ನು ಜಪ್ತಿ ಮಾಡಲಾಗಿದೆ.
ಜಾರಿ ನಿರ್ದೇಶನಾಲಯ (ಇ.ಡಿ.) ಎಂಟ್ರಿ?
ಪಿಎಸ್‌ಐ ಅಕ್ರಮದಲ್ಲಿ ಕೋಟಿ-ಕೋಟಿ ರೂ. ಹಣ ವರ್ಗಾವಣೆ ಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ ಜಾರಿ ನಿರ್ದೇಶ ನಾಲಯ (ಇ.ಡಿ.) ಅಧಿಕಾರಿಗಳು ಪ್ರಕರಣದಲ್ಲಿ ಮಧ್ಯ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮತ್ತೊಬ್ಬ ಕೆಎಸ್‌ಆರ್‌ಪಿ ಇನ್‌ಸ್ಪೆಕ್ಟರ್ ಬಂಧನ
ಪ್ರಕರಣದಲ್ಲಿ ಮತ್ತೊಬ್ಬ ಕೆಎಸ್‌ಆರ್‌ಪಿ ಇನ್‌ಸ್ಪೆಕ್ಟರ್‌ನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಕೆಎಸ್‌ಆರ್‌ಪಿ ಬೆಟಾಲಿಯನ್‌ನ ಇನ್‌ಸ್ಪೆಕ್ಟರ್ ಮಧು ಬಂಧಿತ. ಪಿಎಸ್‌ಐ ಅಭ್ಯರ್ಥಿಗಳಿಂದ ಮಧು 40 ಲಕ್ಷದಿಂದ 1 ಕೋಟಿ ರೂ.ವರೆಗೆ ಡೀಲ್ ನಡೆಸುತ್ತಿದ್ದ ಎಂದು ಹೇಳಲಾಗಿದೆ. ಈ ಬಾರಿಯ 545 ಅಭ್ಯರ್ಥಿಗಳ ಪೈಕಿ 30 ಮಂದಿ ಅಭ್ಯರ್ಥಿಗಳನ್ನು ಮಧು ಶಾಂತಕುಮಾರ್‌ಗೆ ಪರಿಚಯಿಸಿಕೊಟ್ಟಿದ್ದ. ಅವರಿಂದ ಪರೀಕ್ಷೆಯಲ್ಲಿ ಉತ್ತೀರ್ಣಗೊಳಿಸಲು ತಲಾ 50-60 ಲಕ್ಷ ರೂ.ವರೆಗೆ ಡೀಲ್ ನಡೆಸಿದ್ದರು ಎಂದು ಸಿಐಡಿ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿ : ಆಟೋರಿಕ್ಷಾ ಬಳಿ ತೆರಳಿ ಪ್ರಕರಣ ಇತ್ಯರ್ಥಪಡಿಸಿದ ನ್ಯಾಯಾಧೀಶರು
ಸುಳ್ಯ, ಕೊಡಗಿನ ಕೆಲವೆಡೆ ಭಾರಿ ಶಬ್ದದೊಂದಿಗೆ ಭೂಕಂಪನ, ಗೋಡೆ ಬಿರುಕು
ಸಕಲೇಶಪುರ : ರಸ್ತೆ ಅಪಘಾತಕ್ಕೆ ದೈಹಿಕ ಶಿಕ್ಷಕ ಸ್ಥಳದಲ್ಲೇ ಸಾವು: ವಿದ್ಯಾರ್ಥಿಗಳ ಕಣ್ಣೀರು…
ಗೃಹ ಪ್ರವೇಶ ಸಂದರ್ಭ ಅವಾಂತರ |ಮಂಗಳಮುಖಿಯರ ರಂಪಾಟ
ಕಿನ್ನಿಗೋಳಿ :ಪತ್ನಿ ಸೇರಿ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಯತ್ನಿಸಿದ ಪತಿ
ಹೊಸ ಸೇರ್ಪಡೆ
ರಾಜ್ಯದಲ್ಲಿ 67 ಕೋಟಿ ರೂ. ಮೌಲ್ಯದ ಮಾದಕವಸ್ತು ನಾಶ
ಟಿ20 ಪಂದ್ಯ: ಟಾಸ್ ಗೆದ್ದ ಭಾರತ ಫೀಲ್ಡಿಂಗ್, ಮಳೆ ಅಡಚಣೆ, ಉಮ್ರಾನ್ ಮಲಿಕ್ ಪದಾರ್ಪಣೆ
ವಿಂಬಲ್ಡನ್ ಗ್ರ್ಯಾನ್ಸ್ಲಾಂ ಟೆನಿಸ್ ಟೂರ್ನಿ: ವೀನಸ್ ದಾಖಲೆ ಮುರಿಯುವತ್ತ ಸ್ವಿಯಾಟೆಕ್
ಮಾರುತಿ ಸುಜುಕಿ ಸಂಸ್ಥೆಯ ಆಡಳಿತ ನಿರ್ದೇಶಕರಾಗಿದ್ದ ಡಾ| ವೆಂಕಟರಾಮನ್ ಇನ್ನಿಲ್ಲ
ಧಾರವಾಡದಲ್ಲಿ ಭೀಕರ ರಸ್ತೆ ಅಪಘಾತ : ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು