ಬನ್ನಿ ಶಾಲೆಗೆ, ಸುರಕ್ಷೆಯೊಂದಿಗೆ ಕಲಿಕೆ ಮುಂದುವರಿಸಿ…


Team Udayavani, Aug 22, 2021, 7:40 AM IST

ಬನ್ನಿ ಶಾಲೆಗೆ, ಸುರಕ್ಷೆಯೊಂದಿಗೆ ಕಲಿಕೆ ಮುಂದುವರಿಸಿ…

ಪ್ರೀತಿಯ ವಿದ್ಯಾರ್ಥಿಗಳೇ… ಶಾಲಾ ಕಾಲೇಜುಗಳಲ್ಲಿ ಗಂಟೆ ಸದ್ದು ಮತ್ತೆ ಕೇಳಿಸಲಿದೆ. ತರಗತಿ ಕೋಣೆಯ ಕಲರವ ಸೋಮವಾರದಿಂದ ಆರಂಭವಾಗಲಿದೆ.

ಪಾಠ, ಸಹಪಾಠಿಗಳ ಭೇಟಿ, ಪಠ್ಯ, ಪಠ್ಯೇತರ ಚಟುವಟಿಕೆಗಳ ಕುರಿತು ಚರ್ಚೆ, ವಿಷಯ ವಿನಿಮಯ, ಶಾಲೆಯಲ್ಲೇ ಗುರುಗಳಿಗೆ ಪ್ರಶ್ನೆ ಕೇಳಿ ಸಂಶಯ ನಿವಾರಿಸಿಕೊಳ್ಳುವ ಮೂಲಕ ಪೂರ್ಣ ಪ್ರಮಾಣದಲ್ಲಿ ಜ್ಞಾನಾರ್ಜನೆಗೆ ಅನುಕೂಲ ವಾಗುವ ಭೌತಿಕ ತರತಿಗಳು ಆರಂಭವಾಗುತ್ತಿವೆ.

ನಿಮ್ಮೆಲ್ಲರ ಆರೋಗ್ಯದ ಸುರಕ್ಷೆಯೇ ನಮ್ಮ ಆದ್ಯತೆ. ಹೀಗಾಗಿ ಕ್ಯಾಂಪಸ್‌ ದಿನಗಳು ಮರಳಿ ದರೂ ಹಿಂದಿನಂತಿರುವುದಿಲ್ಲ. ಏಕೆಂದರೆ ಕೋವಿಡ್‌ ವಿರುದ್ಧ ಹೋರಾಟ ಮುಗಿದಿಲ್ಲ. ಆದರೆ ಶಿಕ್ಷಣ ಮುಂದುವರಿಯಬೇಕು.

ಅದಕ್ಕಾಗಿ ನೀವು ಮನೆಯಿಂದ ಹೊರಗೆ ಕಾಲಿಡುವಾಗ 3 ವಿಚಾರಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮನೆಯಿಂದಲೇ ಸರಿಯಾಗಿ ಮಾಸ್ಕ್ ಧರಿಸಿ ಹೊರಡಿ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ. ಕೈಗಳನ್ನು ಆಗಾಗ ತೊಳೆಯುತ್ತಿರಿ ಅಥವಾ ಸ್ಯಾನಿಟೈಸ್‌ ಮಾಡಿಕೊಳ್ಳಿ. ಈ 3 ನಿಯಮಗಳನ್ನು ಪಾಲಿಸುವುದರಿಂದ ನೀವೂ ಕೋವಿಡ್‌ ಸೇನಾನಿ ಆಗುವ ಜತೆಗೆ ಕೊರೊನಾದಿಂದ ದೂರವಿರಲು ಸಾಧ್ಯವಿದೆ.

ಕೋವಿಡ್‌-19 ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಹೆತ್ತವರು ಅಥವಾ ಶಿಕ್ಷಕರ ಗಮನಕ್ಕೆ ತನ್ನಿ. ಯಾವುದೇ ರೀತಿಯಲ್ಲೂ ಆತಂಕ ಅಥವಾ ಭಯ ಬೇಡ. ಶಾಲೆಯಲ್ಲಿ ಕೋವಿಡ್‌ ಲಕ್ಷಣ ಕಂಡುಬಂದಲ್ಲಿ, ಅದಕ್ಕಾಗಿ ಪ್ರತ್ಯೇಕ ಕೊಠಡಿ ಇರಲಿದೆ. ಅಲ್ಲಿ ಪ್ರಾಥಮಿಕ ಆರೈಕೆಯ ಜತೆಗೆ ಸ್ಥಳೀಯ ಆರೋಗ್ಯ ಕೇಂದ್ರಕ್ಕೂ ಮಾಹಿತಿ ನೀಡಲಾಗುತ್ತದೆ. ಮನೆಯಲ್ಲಿ ಕೊರೊನಾ ಲಕ್ಷಣ ಕಂಡುಬಂದರೆ ಹೆತ್ತವರಿಗೆ ತಿಳಿಸಬೇಕು.

ಆರೋಗ್ಯದ ಜತೆಗೆ ಕಲಿಕೆಯೂ ಅತೀ ಮುಖ್ಯ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಹೆತ್ತವರು, ಪೋಷಕರು, ಬೋಧಕರ ಆರೋಗ್ಯ ಗಮನದಲ್ಲಿ ಇರಿಸಿಕೊಂಡು ತಜ್ಞರ ಸಲಹೆಯಂತೆ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಶಾಲೆಗಳಲ್ಲಿ ಭೌತಿಕ ತರಗತಿಗಳನ್ನು ಆರಂಭಿಸಲಾಗುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪ್ರತ್ಯೇಕ ಗುಂಪುಗಳ ರಚನೆಯನ್ನು ಮಾಡಲಾಗಿದೆ. ಆನ್‌ಲೈನ್‌, ಪರ್ಯಾಯ ಮಾರ್ಗದಲ್ಲಿ ತರಗತಿಗಳು ಮುಂದುವರಿಯಲಿವೆ.

ಕಲಿಕೆಗೆ ಬೇಕಾದ ಎಲ್ಲ ರೀತಿಯ ಸುರಕ್ಷ ಕ್ರಮಗಳನ್ನು ಕೈಗೊಂಡಿದ್ದೇವೆ. ಬಹುತೇಕ ಎಲ್ಲ ಶಿಕ್ಷಕರು ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಅವರು  ಮಾಸ್ಕ್ ಸರಿಯಾಗಿ ಧರಿಸಿದ್ದಾರೆಯೇ  ಎಂಬುದನ್ನು ಗಮನಿಸುವ ಜತೆಗೆ ಮನೆಯಿಂದಲೇ ಬಿಸಿನೀರು ಹಾಗೂ ಲಘು ಉಪಾಹಾರ ನೀಡುವುದು ಉತ್ತಮ.

ಮಕ್ಕಳು ಆತಂಕಕ್ಕೆ ಒಳಗಾಗದೆ ಸೋಮವಾರದಿಂದ ಶಾಲೆಗಳಿಗೆ ಹಾಜರಾಗಿ. ಸೋಮವಾರ ಬೆಳಗ್ಗೆ ಶಿಕ್ಷಣ ಸಚಿವರೊಂದಿಗೆ ಕೆಲವು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದೇನೆ. ಮಕ್ಕಳು  ಶಾಲೆಗೆ ಬರಬೇಕು, ಕಲಿಕೆ ನಡೆಯಬೇಕು, ಜತೆಗೆ ಕೋವಿಡ್‌ ಸುರಕ್ಷೆಯೂ ಇರಬೇಕು. -ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಟಾಪ್ ನ್ಯೂಸ್

8-kvasantha-bangera

K. Vasantha Bangera: ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ಅಸ್ತಂಗತ

15

Heavy Rain: ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್‌ಮೆಂಟ್‌ನ ಗೋಡೆ ಕುಸಿದು 7 ಮಂದಿ ಸಾವು

ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು

ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು

6-bantwala

Bantwala: ನೀರಿನ ಅಭಾವದಿಂದ ಕೃಷಿ ಹಾನಿ; ಮನನೊಂದು ಕೃಷಿಕ ಆತ್ಮಹತ್ಯೆ

Viral: 1 ಗಂಟೆಯಲ್ಲಿ 1,123 ಮರಗಳನ್ನು ಅಪ್ಪಿಕೊಂಡು ಗಿನ್ನೆಸ್​ ವಿಶ್ವ ದಾಖಲೆ ಬರೆದ ಯುವಕ

Viral: 1 ಗಂಟೆಯಲ್ಲಿ 1,123 ಮರಗಳನ್ನು ಅಪ್ಪಿಕೊಂಡು ಗಿನ್ನೆಸ್​ ವಿಶ್ವ ದಾಖಲೆ ಬರೆದ ಯುವಕ

3-kollegala

Kollegala: ಖಾಸಗಿ ಬಸ್ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Revanna 2

Extended;ಎಚ್.ಡಿ.ರೇವಣ್ಣ ನ್ಯಾಯಾಂಗ ಬಂಧನ ಮೇ 14ರವರೆಗೆ ವಿಸ್ತರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Revanna 2

Extended;ಎಚ್.ಡಿ.ರೇವಣ್ಣ ನ್ಯಾಯಾಂಗ ಬಂಧನ ಮೇ 14ರವರೆಗೆ ವಿಸ್ತರಣೆ

1-wqe-wq-ewqeqq

Sirsi; ಶಾಸಕ ಭೀಮಣ್ಣ ನಾಯ್ಕ ಸೇರಿ ಮೂವರ ಮೇಲೆ ಜೇನು ನೊಣಗಳ ದಾಳಿ

11

Politics: ಪ್ರಜ್ವಲ್‌ ರೇವಣ್ಣ ಪ್ರಕರಣಕ್ಕೆ ಡಿಕೆಶಿಯೇ ಮಾಸ್ಟರ್ ಮೈಂಡ್; ಸಿ.ಪಿ.ಯೋಗೇಶ್ವರ್

prahlad-joshi

2025 ರಿಂದ ಕಲ್ಲಿದ್ದಲು ಆಮದು ಸಂಪೂರ್ಣವಾಗಿ ಬಂದ್: ಪ್ರಹ್ಲಾದ್ ಜೋಶಿ

DKSHI (2)

Pen drive case; ಮುಗಿಸೋದೇ ಕುಮಾರಸ್ವಾಮಿ ಕೆಲಸ: ಡಿ.ಕೆ.ಶಿವಕುಮಾರ್ ಆಕ್ರೋಶ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

8-kvasantha-bangera

K. Vasantha Bangera: ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ಅಸ್ತಂಗತ

ಚಿತ್ರದುರ್ಗ-ಬಸವ ತತ್ವ ಪ್ರತಿ ಮನೆಗೆ ತಲುಪಲಿ: ಡಾ| ಬಸವಕುಮಾರ ಶ್ರೀ

ಚಿತ್ರದುರ್ಗ-ಬಸವ ತತ್ವ ಪ್ರತಿ ಮನೆಗೆ ತಲುಪಲಿ: ಡಾ| ಬಸವಕುಮಾರ ಶ್ರೀ

15

Heavy Rain: ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್‌ಮೆಂಟ್‌ನ ಗೋಡೆ ಕುಸಿದು 7 ಮಂದಿ ಸಾವು

ಚಿಕ್ಕಮಗಳೂರು: 436 ಗ್ರಾಮಗಳಲ್ಲಿ ಕುಡಿವ ನೀರಿನ ಅಭಾವ

ಚಿಕ್ಕಮಗಳೂರು: 436 ಗ್ರಾಮಗಳಲ್ಲಿ ಕುಡಿವ ನೀರಿನ ಅಭಾವ

7-

ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು: ಕೃತಜ್ಞತೆ, ಗೌರವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.