“ವಾಕರೂ’ ಬ್ರ್ಯಾಂಡ್‌ನ‌ ಹೊಸ ವಿನ್ಯಾಸದ ಪಾದರಕ್ಷೆಗಳು ಮಾರುಕಟ್ಟೆಗೆ

Team Udayavani, May 15, 2019, 3:04 AM IST

ಬೆಂಗಳೂರು: ಯು4ಐಸಿ ಇಂಟರ್‌ನ್ಯಾಷನಲ್‌ ವಿಕೆಸಿ ಗ್ರೂಪ್‌ ಕಂಪನಿಯು ಯುವ ಸಮುದಾಯಕ್ಕಾಗಿಯೇ “ವಾಕರೂ’ ಹೆಸರಿನ ಹೊಸ ವಿನ್ಯಾಸ, ಆರಾಮದಾಯಕ ಪಾದರಕ್ಷೆಗಳನ್ನು ಸಿದ್ಧಪಡಿಸಿದೆ. ಮಂಗಳವಾರ ನಗರದ ಎಂ.ಜಿ.ರಸ್ತೆಯ ತಾಜ್‌ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಪಾದರಕ್ಷೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಕಂಪನಿ ವ್ಯವಸ್ಥಾಪಕ ನಿರ್ದೇಶಕ ವಿಕೆಸಿ ನೌಷದ್‌, ನ್ಪೋರ್ಟ್ಸ್, ಲೈಫ್‌ಸ್ಟೈಲ್‌, ಫಾರ್ಮಲ್ಸ್‌, ಕ್ಯಾಶ್ಯುವಲ್ಸ್‌ ಮತ್ತು ಕಿಡ್ಸ್‌ ಸೇರಿ ವಿವಿಧ ಶ್ರೇಣಿಯ ಪಾದರಕ್ಷೆ ಮತ್ತು ಶೂಗಳನ್ನು “ವಾಕರೂ’ ಬ್ರ್ಯಾಂಡ್‌ ಹೆಸರಿನಲ್ಲಿ ತಯಾರಿಸಲಾಗಿದೆ. ಆಯಾ ವಿನ್ಯಾಸಕ್ಕೆ ತಕ್ಕಂತೆ ದರವನ್ನು ನಿಗದಿಪಡಿಸಲಾಗಿದೆ.

2013ರಲ್ಲಿ ವಾಕರೂ ಬ್ರ್ಯಾಂಡ್‌ ಹೆಸರಿನಲ್ಲಿ ಈಗಾಗಲೇ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಪಾದರಕ್ಷೆಗಳು ಗ್ರಾಹಕರನ್ನು ಆಕರ್ಷಿಸಿದೆ. ಇದೀಗ ಆಯಾ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ವಿವಿಧ ಶ್ರೇಣಿಯ ಪಾದರಕ್ಷೆಗಳನ್ನು ತಯಾರಿಸಿ ಬಿಡುಗಡೆ ಮಾಡಿದ್ದೇವೆ.

ಕ್ರೀಡೆಗಳಿಗೆ ಬಳಸುವ ಶೂ, ಪ್ರತಿ ನಿತ್ಯ ಉಪಯೋಗಿಸುವ ಮತ್ತು ಹಗುರ ಪಾದರಕ್ಷೆಗಳು ಗ್ರಾಹಕರಿಗೆ ಇಷ್ಟವಾಗುವ ನಿರೀಕ್ಷೆಯಿದೆ. ವಾಕರೂ ಬ್ರ್ಯಾಂಡ್‌ 5 ವರ್ಷದಲ್ಲಿ 500 ಕೋಟಿ ರೂ.ವಹಿವಾಟು ನಡೆಸಿದ್ದು, ಮುಂದಿನ ದಿನದಲ್ಲಿ ಈ ಬ್ರ್ಯಾಂಡ್‌ ಅನ್ನು ದೇಶಾದ್ಯಂತ ವಿಸ್ತರಿಸಲಾಗುವುದು ಎಂದರು.

ಗುಣಮಟ್ಟದ ವಿಚಾರದಲ್ಲಿ ರಾಜಿಯಾಗದ ಬಾಲಿವುಡ್‌ ನಟ ಅಮೀರ್‌ ಖಾನ್‌ ಅವರು ನಮ್ಮ “ವಾಕರೂ’ ಬ್ರ್ಯಾಂಡ್‌ನ‌ ರಾಯಭಾರಿಯಾಗಿದ್ದಾರೆ. ದೇಶಾದ್ಯಂತ 550 ವಿತರಕರು ಮತ್ತು 1.5 ಲಕ್ಷ ಮಳಿಗೆಗಳಿವೆ. ಇನ್ನು ಕಂಪನಿ ಕಳೆದ ವರ್ಷ 480 ಕೋಟಿ ರೂ.ವಹಿವಾಟು ನಡೆಸಿದ್ದು, ಪ್ರಸಕ್ತ ವರ್ಷದಲ್ಲಿ 1 ಸಾವಿರ ಕೋಟಿ ರೂ. ವಹಿವಾಟು ನಡೆಸುವ ಗುರಿ ಹೊಂದಿದೆ.

ದಕ್ಷಿಣ ಭಾರತದಲ್ಲಿಯೇ ವಿಕೆಸಿ ಕಂಪನಿಗೆ ಹೆಚ್ಚಿನ ಬೇಡಿಕೆ ಇದ್ದು, ಇದೀಗ ಉತ್ತರ ಭಾರತ, ವಿದೇಶಗಳಿಗೂ ವಹಿವಾಟು ವಿಸ್ತರಿಸುತ್ತಿದ್ದೇವೆ. ಕರ್ನಾಟಕದ ನಂಜನಗೂಡು, ಬೆಂಗಳೂರು ಸೇರಿದಂತೆ ನಲ್ಲೂರು, ಕೊಯಮತ್ತೂರು, ಕ್ಯಾಲಿಕಟ್‌, ದೆಹಲಿ, ಭೂಪಾಲ್‌ ಹಾಗೂ ಬಾಂಗ್ಲಾದೇಶದಲ್ಲಿ ಉತ್ಪಾದನಾ ಘಟಕಗಳಿವೆ.

ವಾರ್ಷಿಕ ಉತ್ಪಾದನೆಯ ಶೇ.5ರಷ್ಟು ಪಾದರಕ್ಷೆಗಳನ್ನು ದೇಶ ವಿದೇಶಗಳಿಗೂ ರಫ್ತು ಮಾಡಲಾಗುತ್ತಿದೆ ಎಂದು ತಿಳಿಸಿದರು. ಕಂಪನಿ ನಿರ್ದೇಶಕ ಎನ್‌.ಪಿ.ಮುಸ್ತಫಾ ಯಾಸೀನ್‌ ಮಾತನಾಡಿ, ಯುವ ಜನತೆಯ ಆಸೆ, ಕನಸುಗಳು ಬಹು ಎತ್ತರಕ್ಕಿದ್ದು ಅಂತವರ ನಿರಂತರ ಓಟಕ್ಕಾಗಿಯೆ ಹೊಸ ವಿನ್ಯಾಸದ ಪಾದರಕ್ಷೆ ಸಿದ್ಧಪಡಿಸಲಾಗಿದೆ.

ಹೀಗಾಗಿಯೇ “ಬಿ ರೆಸ್ಟ್‌ಲೆಸ್‌’ ಎಂಬ ಅಡಿಬರಹ ನೀಡಲಾಗಿದೆ. ಈ ಹೊಸ ಶ್ರೇಣಿಯ ಪಾದರಕ್ಷೆಗಳು ನಡೆಗೆಯಲ್ಲಿ ಹಿಡಿತ ಹಾಗೂ ಹಿತ ಸಾಧಿಸಲು ಅನುಕೂಲವಾಗುವಂತಿವೆ. ನ್ಪೋರ್ಟ್ಸ್ ಶೂ 600 ರೂ.ನಿಂದ 1400 ರೂ., ಕ್ಯಾಸುಲ್ಸ್‌ 200 ರೂ.ನಿಂದ 400 ರೂ. ಹಾಗೂ ಫಾರ್ಮಲ್ಸ್‌ ಪಾದರಕ್ಷೆ 400 ರೂ.ನಿಂದ 890 ರೂ.ವರೆಗೆ ದರ ಇದೆ ಎಂದು ತಿಳಿಸಿದರು. ಗ್ರಾಹಕರಿಗೆ ಉತ್ತಮ ದರ್ಜೆಯ ಪಾದರಕ್ಷೆಗಳನ್ನು ನೀಡುವುದು ಸಂಸ್ಥೆಯ ಗುರಿಯಾಗಿದೆ.

ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಎಲ್ಲ ವಯೋಮಾನದ ಪಾದರಕ್ಷೆಗಳನ್ನು ತಯಾರಿಸಲಾಗುವುದು. 20 ಕೋಟಿ ರೂ. ನಿಂದ ಪ್ರಾರಂಭವಾದ ಕಂಪನಿಯು ಇದೀಗ 1400 ಕೋಟಿ ರೂ.ಕ್ಕಿಂತ ಹೆಚ್ಚು ವಹಿವಾಟು ನಡೆಸುತ್ತಿದೆ. ದೇಶ ವಿದೇಶಗಳಲ್ಲಿ ಮಾರುಕಟ್ಟೆ ವಿಸ್ತರಿಸಲಾಗುವುದು ಎಂದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ