ವಸತಿ ಸಮುಚ್ಛಯದ ಮೇಲೆ 500 ಕೆಜಿ ತೂಕದ ಬಾಂಬ್ ದಾಳಿ ನಡೆಸಿದ ರಷ್ಯಾ; 18 ಮಂದಿ ಸಾವು!

Team Udayavani, Mar 8, 2022, 3:38 PM IST

500-kg Russian bombs fell on residential buildings at Sumy

ಸುಮಿ: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಮತ್ತಷ್ಟು ಭೀಕರತೆ ಪಡೆಯುತ್ತಿದೆ. ಉಕ್ರೇನ್ ನಾಗರಿಕ ಪ್ರದೇಶಗಳ ಮೇಳೆ ರಷ್ಯಾ ದಾಳಿ ನಡೆಸುತ್ತಿದ್ದು, ಸುಮಿ ನಗರದ ವಸತಿ ಸಮುಚ್ಛಯದ ಮೇಲೆ ನಡೆಸಿದ ಬಾಂಬ್ ದಾಳಿಯಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ,

ಉಕ್ರೇನ್ ನ ಸಂಸ್ಕೃತಿ ಮತ್ತು ಮಾಹಿತಿ ಇಲಾಖೆಯು ಈ ಬಗ್ಗೆ ಮಾಹಿತಿ ನೀಡಿದೆ. ಘಟನೆಯಲ್ಲಿ ಇಬ್ಬರು ಮಕ್ಕಳೂ ಅಸುನೀಗಿದ್ದಾರೆ ಎಂದಿದೆ.

“ರಷ್ಯಾದ ಯುದ್ಧ ಪೈಲಟ್ ಗಳು ಕಳೆದ ರಾತ್ರಿ ಮತ್ತೊಂದು ಅಪರಾಧ ಕೃತ್ಯ ನಡೆಸಿದ್ದಾರೆ. ಅವರು ಸುಮಾರು 500 ಕೆಜಿ ತೂಕದ ಬಾಂಬನ್ನು ಸುಮಿ ನಗರದ ವಸತಿ ಕಟ್ಟಡದ ಮೇಲೆ ಹಾಕಿದ್ದಾರೆ. ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ 18 ಮಂದಿ ಸಾವನ್ನಪ್ಪಿದ್ದಾರೆ” ಎಂದು ಸಚಿವಾಲಯ ಟ್ವೀಟ್ ಮಾಡಿದೆ.

ಸ್ಫೋಟಗೊಳ್ಳದ ಬಾಂಬ್‌!: ಇದರ ನಡುವೆಯೇ, ಉಕ್ರೇನ್‌ನ ಉತ್ತರ ಭಾಗದಲ್ಲಿರುವ ಚೆರ್ನಿಹಿವ್‌ ನಲ್ಲಿ ವಸತಿ ಕಟ್ಟಡವೊಂದರ ಮೇಲೆ ರಷ್ಯಾ ಪಡೆಗಳು ಬರೋಬ್ಬರಿ 500 ಕೆಜಿ ತೂಕದ ಬಾಂಬ್‌ ವೊಂದನ್ನು ಹಾಕಿದೆ. ಆದರೆ ಅದೃಷ್ಟವಶಾತ್‌ ಆ ಬಾಂಬು ಸ್ಫೋಟಗೊಂಡಿಲ್ಲ.

ಇದನ್ನೂ ಓದಿ:ರಷ್ಯಾ ಯುದ್ಧದ ಪರಿಣಾಮ; ಷೇರುಪೇಟೆ ಸೆನ್ಸೆಕ್ಸ್ ಇಳಿಕೆ, ಚಿನ್ನ, ಬೆಳ್ಳಿ ಬೆಲೆ ಭಾರೀ ಏರಿಕೆ

ಈ ಕುರಿತು ಸೋಮವಾರ ಟ್ವೀಟ್‌ ಮಾಡಿರುವ ಉಕ್ರೇನ್‌ ವಿದೇಶಾಂಗ ಸಚಿವ ಕುಲೇಬಾ, “ಅದೃಷ್ಟಕ್ಕೆ ಈ 500 ಕೆಜಿಯ ಬಾಂಬ್‌ ಸ್ಫೋಟಗೊಳ್ಳದೇ ಉಳಿಯಿತು. ಆದರೆ, ಇನ್ನು ಎಷ್ಟೋ ಬಾಂಬುಗಳು ಸ್ಫೋಟಗೊಂಡು, ಮಕ್ಕಳು, ಮಹಿಳೆಯರು ಸೇರಿ ಹಲವು ಅಮಾಯಕರನ್ನು ಬಲಿಪಡೆದು ಕೊಂಡಿವೆ’ ಎಂದು ಬರೆದಿದ್ದಾರೆ.

ಜತೆಗೆ ರಷ್ಯಾದ ಈ ಬೀಭತ್ಸ ಆಕ್ರಮಣದಿಂದ ನಮ್ಮ ಜನರನ್ನು ರಕ್ಷಿಸಲು ಜಗತ್ತು ನಮಗೆ ಸಹಾಯ ಮಾಡಬೇಕು. ನಮ್ಮ ಗಗನವನ್ನು ವಿಮಾನಗಳ ಹಾರಾಟಕ್ಕೆ ನಿರ್ಬಂಧ ಹೇರಲು ನೆರವಾಗಬೇಕು, ನಮಗೆ ಸಮರ ವಿಮಾನ ಗಳನ್ನು ರವಾನಿಸಬೇಕು ಎಂದೂ ಅವರು ಮನವಿ ಮಾಡಿದ್ದಾರೆ.

ಟಾಪ್ ನ್ಯೂಸ್

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.