ಶ್ರೀಮಂತಿಕೆಯಲ್ಲಿ ಮುಖೇಶ್ ಅಂಬಾನಿಯನ್ನೂ ಮೀರಿಸಿದ ಮೆಕ್ ಡೊನಾಲ್ಡ್ ಕೆಲಸಗಾರ!
Team Udayavani, Jan 11, 2022, 7:20 AM IST
ಅಬುಧಾಬಿ: ಈ ವ್ಯಕ್ತಿಯ ಹೆಸರು ಚಾಂಗ್‌ಪೆಂಗ್ ಝಾವೊ. ರಾತ್ರಿ ಬೆಳಗಾಗುವಷ್ಟರಲ್ಲಿ ಇವರು ವಿಶ್ವದ ಅತೀ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಎಷ್ಟೆಂದರೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಯನ್ನೂ ಮೀರಿಸಿದ್ದಾರೆ!
ಇವರ ನಿವ್ವಳ ಆಸ್ತಿ ಮೌಲ್ಯ ಈಗ 96 ಬಿಲಿಯನ್ ಡಾಲರ್! ಇದಕ್ಕೂ ಹಿಂದೆ ಇವರು ಮಾಡುತ್ತಿದ್ದ ಕೆಲಸವೇನು ಗೊತ್ತಾ? ಮೆಕ್‌ಡೊನಾಲ್ಡ್ ನಲ್ಲಿ ಬರ್ಗರ್ ತಯಾರಿಸುವುದು, ಜತೆಗೆ ಸಾಫ್ಟ್ ವೇರ್ ಡೆವಲಪ್‌ಮೆಂಟ್. ಈ ವ್ಯಕ್ತಿ ಈ ಪರಿ ಶ್ರೀಮಂತರಾಗಿದ್ದು ಹೇಗೆ?
ಕ್ರಿಪ್ಟೋ ಕರೆನ್ಸಿ ವ್ಯವಹಾರದಲ್ಲಿ ಈತ ನಿಷ್ಣಾತ. ಅಬುಧಾಬಿಗೆ ಕ್ರಿಪ್ಟೋ ಕರೆನ್ಸಿ ತರಬೇಕೆನ್ನುವುದು ಅಲ್ಲಿನ ರಾಜಮನೆತನದ ಬಯಕೆ.
ಇದನ್ನೂ ಓದಿ:ಅಕ್ರಮ ಹಣ ವರ್ಗಾವಣೆ ಪ್ರಕರಣ : ದೀಪಕ್ ಕೊಚ್ಚರ್‌ಗೆ ಸುಪ್ರೀಂ ರಿಲೀಫ್
ಪರಿಣಾಮ ಶ್ರೀಮಂತರು, ಉದ್ಯಮಿಗಳು ನಿರಂತರ ಎಡತಾಕುತ್ತಿದ್ದಾರೆ. ಹೀಗಾಗಿ ಫೇಸ್‌ಬುಕ್ ಮಾಲಿಕ ಮಾರ್ಕ್ ಜುಕರ್‌ಬರ್ಗ್, ಗೂಗಲ್ ಸ್ಥಾಪಕರಾದ ಲಾರಿ ಪೇಜ್, ಸೆರ್ಗೆಯ್ ಬಿನ್‌ರನ್ನೂ ಶ್ರೀಮಂತಿಕೆಯಲ್ಲಿ ಮೀರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪರ್ಕಳ: ಚಿರತೆ ದಾಳಿ ಪ್ರಕರಣ : ಸತ್ತಂತೆ ನಟಿಸಿ ಬದುಕುಳಿದ ಶ್ವಾನ!
ಪಡುಬಿದ್ರಿ : ಮದುವೆಯಾಗುವುದಾಗಿ ನಂಬಿಸಿ ಚಿನ್ನಾಭರಣ ಪಡೆದು ಮೋಸ
ಕುಷ್ಟಗಿ : ಬೆಳ್ಳಂಬೆಳಗ್ಗೆ ಡೀಸಲ್ ಟ್ಯಾಂಕರ್ ಢಿಕ್ಕಿ : ಕುರಿಗಾಹಿ ಸೇರಿ 18 ಕುರಿಗಳು ಸಾವು
ವೇದಿಕೆ ಮೇಲೆ ಲೇಖಕ ಸಲ್ಮಾನ್ ರಶ್ದಿ ಮೇಲೆ ಚಾಕು ಇರಿತ : ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ
ಮುಂದಿನ ವರ್ಷದಿಂದ ವನಿತಾ ಐಪಿಎಲ್: 5 ತಂಡಗಳ ನಡುವಿನ ಟಿ20 ಮುಖಾಮುಖಿ