ಭಾರತೀಯ ಮೂಲದ ಅಜೀಜ್ ಅನ್ಸಾರಿಗೆ ಪ್ರಶಸ್ತಿ
Team Udayavani, Jan 9, 2018, 6:30 AM IST
ಲಾಸ್ ಏಂಜಲೀಸ್: ಭಾರತೀಯ ಮೂಲದ ಹಾಲಿವುಡ್ ಹಾಸ್ಯ ನಟ ಅಜೀಜ್ ಅನ್ಸಾರಿ ಅವರು ಟಿವಿ ಹಾಸ್ಯ ಸರಣಿಯಲ್ಲಿನ ನಟನೆಗಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಟಿವಿ ಹಾಸ್ಯ ಸರಣಿಯಲ್ಲಿ ಉತ್ತಮ ನಟ ಪ್ರಶಸ್ತಿ ಪಡೆದ ಏಕೈಕ ಏಷ್ಯಾ ಮೂಲದ ಕಲಾವಿದ ಎಂಬ ಹಿರಿಮೆಯೂ ಸಂದಿದೆ.
ದಿ ಮಾಸ್ಟರ್ ಆಫ್ ನನ್ ಸರಣಿಯಲ್ಲಿನ ನಟನೆಗಾಗಿ ಇವರಿಗೆ ಈ ಪುರಸ್ಕಾರ ಸಂದಿದೆ. ಅಲ್ಲದೆ ಜೀವಮಾನ ಸಾಧನೆಗಾಗಿ ನಿರೂಪಕಿ ಓಪ್ರಾ ವಿನ್ಫ್ರೆà ಮತ್ತು ಟಿವಿ ಧಾರಾವಾಹಿಯಲ್ಲಿನ ನಟನೆಗಾಗಿ ಸ್ಟೆರ್ಲಿಂಗ್ ಕೆ ಬ್ರೌನ್ ಗೋಲ್ಡನ್ ಗ್ಲೋಬ್ ಪುರಸ್ಕಾರ ಪಡೆದಿದ್ದಾರೆ. ಥ್ರಿà ಬಿಲ್ಬೋರ್ಡ್ಸ್ ಔಟ್ಸೈಡ್ ಎಬ್ಬಿಂಗ್, ಮಿಸೌÕರಿ ಸಿನಿಮಾಗೆ ನಾಲ್ಕು ಪುರಸ್ಕಾರಗಳು ಸಂದಿವೆ.
ಲೈಂಗಿಕ ಕಿರುಕುಳದ ವಿರುದ್ಧ ಕಪ್ಪು ದಿರಿಸು: ಪ್ರದಾನ ಸಮಾರಂಭ ಈ ಬಾರಿ ಸಂಪೂರ್ಣ ಕಪ್ಪು ವರ್ಣದಲ್ಲಿತ್ತು. ಹಾಲಿವುಡ್ನಲ್ಲಿ ಇತ್ತೀಚೆಗೆ ವರದಿಯಾದ ಲೈಂಗಿಕ ಕಿರುಕುಳದ ಪ್ರಕರಣಗಳ ಹಿನ್ನೆಲೆಯಲ್ಲಿ, ಬಹುತೇಕ ಎಲ್ಲ ನಟ, ನಟಿಯರೂ ಕಪ್ಪು ದಿರಿಸು ಧರಿಸಿ ಆಗಮಿಸಿದ್ದರು. ಲೈಂಗಿಕ ಕಿರುಕುಳದ ಬಗ್ಗೆ ಧ್ವನಿಯೆತ್ತುವ “ಮಿ ಟೂ’ ಎಂಬ ಅಭಿಯಾನ ಕೂಡ ಇತ್ತೀಚೆಗೆ ಭಾರೀ ಪ್ರಚಾರ ಪಡೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ