ಹರಾಜಾದ ಮರುಕ್ಷಣವೇ ಕಲಾಕೃತಿ ಚೂರು
Team Udayavani, Oct 7, 2018, 5:43 AM IST
ಲಂಡನ್: ತನ್ನ ಕಲಾಕೃತಿಗಳ ಪ್ರದರ್ಶನದ ವೇಳೆ ಸದಾ ಒಂದಿಲ್ಲೊಂದು ಸ್ಟಂಟ್ ಮಾಡುವ ಬ್ರಿಟನ್ನ ಅಜ್ಞಾತ ಕಲಾವಿದನೆಂದೇ ಪರಿಗಣಿಸಲ್ಪಟ್ಟಿರುವ ಬಾಂಕಿ, ಲಂಡನ್ನ ಸೋತಿಸ್ನಲ್ಲಿ ಗುರುವಾರ ನಡೆದ ಕಲಾಕೃತಿ ಪ್ರದರ್ಶನ-ಕಂ-ಮಾರಾಟದ ವೇಳೆ ತಮ್ಮ “ಗರ್ಲ್ ವಿತ್ ಬಲೂನ್’ ಎಂಬ ಕಲಾಕೃತಿ ಕೋಟಿಗಟ್ಟಲೆ ರೂ.ಗಳಿಗೆ ಮಾರಾಟವಾದರೂ, ಮಾರಾಟವಾದ ಕೆಲವೇ ನಿಮಿಷಗಳಲ್ಲಿ ಆ ಕಲಾಕೃತಿಯನ್ನು ಚೂರುಚೂರು ಮಾಡಿದ್ದಾರೆ.
ಅಸಲಿಗೆ, ಇದೊಂದು ಸ್ವಯಂ ನಾಶ ಹೊಂದುವಂಥ (ಸೆಲ್ಫ್-ಡಿಸ್ಟ್ರಕ್ಷನ್) ಕಲಾಕೃತಿ ಆಗಿದ್ದು, ಅದರಲ್ಲಿ ಬಾಲಕಿಯೊಬ್ಬಳು ಕೆಂಪು ಬಣ್ಣದ, ಹೃದಯಾಕಾರದ ಬಲೂನನ್ನು ಹಿಡಿಯಲು ಕೈಚಾಚಿರುವ ಚಿತ್ರವಿತ್ತು. ಈ ಕಲಾಕೃತಿಯ ಸುಂದರ ಚೌಕಟ್ಟಿನ ಕೆಳಭಾಗದ ಕಟ್ಟಿನಲ್ಲಿ ಸೂಕ್ಷ್ಮ ಬ್ಲೇಡುಗಳುಳ್ಳ ಯಂತ್ರವನ್ನು ಅಳವಡಿಸಲಾಗಿತ್ತು. ಇದು ಬಾಂಕಿಗೆ ಬಿಟ್ಟರೆ ಬೇರ್ಯಾರಿಗೂ ತಿಳಿದಿರಲಿಲ್ಲ.
ಹರಾಜಿನ ವೇಳೆ ಈ ಕಲಾಕೃತಿ 10.40 ಕೋಟಿ ರೂ.ಗಳಿಗೆ ಮಾರಾಟವಾಯಿತು. ಆದರೆ, ಮಾರಾಟವಾದ ಕೆಲವು ಸೆಕೆಂಡ್ಗಳಲ್ಲೇ ಇದ್ದಕ್ಕಿದ್ದಂತೆ ಚೌಕಟ್ಟಿನೊಳಗಿದ್ದ ಬಾಲಕಿಯ ಚಿತ್ರ ಫ್ರೆಮಿನ ಕೆಳಭಾಗಕ್ಕೆ ನಿಧಾನವಾಗಿ ಚಲಿಸತೊಡಗಿ, ಫ್ರೆàಮಿನಿಂದ ಆಚೆ ಬರುವಾಗ ನೀಳವಾಗಿ ಕಟಾವು ಆಗಿ ಹೊರಬಂತು. ಈ ಮೂಲಕ ಬಾಂಕಿ, ತಮ್ಮ ಎಂದಿನ ವಿಶೇಷತೆಯನ್ನು ಈ ಬಾರಿಯ ಹರಾಜು ವೇಳೆಯಲ್ಲೂ ಕಾಯ್ದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು