ನಿಶ್ಚಿತಾರ್ಥ ಉಂಗುರ ನುಂಗಿದಂತೆ ಕನಸು; ಆದರೆ ಆಕೆ ನಿಜಕ್ಕೂ ನುಂಗಿದ್ದಳು!
Team Udayavani, Sep 16, 2019, 8:40 PM IST
ಕ್ಯಾಲಿಫೋರ್ನಿಯಾ: ಸ್ಯಾನ್ ಡಿಯಾಗೋದ ಜೆನ್ನಾ ಇವಾನ್ಸ್ಗೆ ಗಡದ್ದು ನಿದ್ದೆ. ಆ ನಿದ್ದೆಯಲ್ಲೇ ಆಕೆಗೆ ಕೈಲಿದ್ದ ಉಂಗುರವನ್ನು ನುಂಗಿದಂತೆ ಕನಸು. ಅಷ್ಟೊತ್ತಿಗೆ ಧಡಕ್ಕನೆ ಎಚ್ಚರವಾಗಿ ಎದ್ದು ನೋಡಿದರೆ ಉಂಗುರವಿರಲಿಲ್ಲ!
ಜೆನ್ನಾ ಹೇಳುವಂತೆ ಈ ಕಥೆ ಹೀಗಿದೆ. ರಾತ್ರಿ ಮಲಗಿದ ನನಗೆ ಕನಸು ಬಿದ್ದಿತ್ತು. ನಾನು ಮತ್ತು ನನ್ನ ಮದುವೆಯಾಗುವವರು, ರೈಲಿನಲ್ಲಿ ಹೋಗುತ್ತಿದ್ದೆವು. ಈ ವೇಳೆ ಅದೇನೋ ಘಟನೆ ನಡೆದಿದ್ದು ಈ ವೇಳೆ ರಕ್ಷಣೆಗೆ ಅಂತ ಉಂಗುರವನ್ನು ಅವರು ನುಂಗಲು ಹೇಳಿದ್ರಂತೆ. ಅಷ್ಟೊತ್ತಿಗೆ ನನಗೆ ಗಾಬರಿಯಾಗಿ ಎಚ್ಚರಿಯಾಯಿತು. ಎದ್ದು ನೋಡಿದರೆ ಉಂಗುರವಿರಲಿಲ್ಲ. ಗಾಬರಿಯಾಗಿ ನಾನು ಬಳಿಕ ಅವರಿಗೆ ಫೋನ್ ಮಾಡಿದ್ದು, ಉಂಗುರವನ್ನು ನಾನು ನುಂಗಿದ್ದೇನೆ ಅಂತ ಗೊತ್ತಾಯ್ತು ಎಂದು ಹೇಳಿಕೊಂಡಿದ್ದಾರೆ.
ಬಳಿಕ ಜೆನ್ನಾ ವೈದ್ಯರ ಬಳಿ ಪರೀಕ್ಷೆಗೆ ಹೋಗಿದ್ದು, ಉಂಗುರ ನುಂಗಿದ್ದು ಖಚಿತಗೊಂಡಿದೆ. ಜೆನ್ನಾಗೆ ನಿದ್ದೆಯಲ್ಲೂ ನಡೆಯುವ ಅಭ್ಯಾಸವಿದ್ದು, ಇದೇ ಸಮಸ್ಯೆಯಿಂದ ಹೀಗಾಗಿರಬಹುದು ಎಂದು ಊಹಿಸಲಾಗಿದೆ. ಜೆನ್ನಾಗೆ ಬಳಿಕ ಅಪ್ಪರ್ ಎಂಡೋಸ್ಕೋಪಿ ನಡೆಸಲಾಗಿದ್ದು, 2.4 ಕ್ಯಾರೆಟ್ನ ಬಂಗಾರದ ಉಂಗುರ ಹೊರತೆಗೆಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು