ಮಾಹಿತಿ ಕೊಡಲು ಸತಾಯಿಸಿತ್ತು ಚೀನ
Team Udayavani, Jun 3, 2020, 10:14 AM IST
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್: ಕೋವಿಡ್ ತಡೆಯಲು ಚೀನ ಕೈಗೊಂಡ ಕ್ರಮಗಳಿಗೆ ಡಬ್ಲ್ಯೂಎಚ್ಒ ಆರಂಭದಲ್ಲಿ ಬಹಿರಂಗವಾಗಿ ಪ್ರಶಂಸೆ ವ್ಯಕ್ತಪಡಿಸಿತ್ತು. ಆದರೆ, ಇದರ ಹಿಂದಿನ ಸತ್ಯ ಬೇರೆಯದೇ ಇದೆ. ಸೋಂಕು ನಿಯಂತ್ರಣ ಕ್ರಮಗಳ ಬಗ್ಗೆ ಅಗತ್ಯ ಮಾಹಿತಿಗಳನ್ನು ಚೀನದಿಂದ ಪಡೆಯಲು ಸಂಸ್ಥೆಯ ಅಧಿಕಾರಿಗಳು ಹರಸಾಹಸ ಪಡಬೇಕಾಯಿತು. ಇದರಿಂದಾಗಿ ಸಂಸ್ಥೆಯ ಅಧಿಕಾರಿಗಳು ಹತಾಶರಾಗಿದ್ದರು ಎಂದು “ಅಸೋಸಿಯೇಟೆಡ್ ಪ್ರಸ್’ ವರದಿ ಮಾಡಿದೆ.
3 ಸರಕಾರಿ ಪ್ರಯೋಗಾಲಯಗಳು ವೈರಸ್ ಬಗೆಗಿನ ಮಾಹಿತಿಯನ್ನು ಬಹಿರಂಗಪಡಿಸಿದ ಅನಂತರವೂ, ವೈರಸ್ನ ಆನುವಂಶಿಕ ನಕ್ಷೆಯನ್ನು ಬಿಡುಗಡೆ ಮಾಡಲು, ಈ ಬಗ್ಗೆ ಸಂಸ್ಥೆಗೆ ಮಾಹಿತಿ ಸಲ್ಲಿಸಲು ಚೀನ ಒಂದು ವಾರ ವಿಳಂಬ ಮಾಡಿತು. ಜ. 11ರಂದು ವೈರಾಲಜಿಸ್ಟ್ ವೆಬ್ಸೈಟ್ನಲ್ಲಿ ಮಾಹಿತಿ ಪ್ರಕಟವಾದ ಬಳಿಕವೇ ಚೀನದ ಸರಕಾರಿ ಪ್ರಯೋಗಾಲಯಗಳು ಜೀನೋಮ್ನ್ನು ಬಿಡುಗಡೆ ಮಾಡಿದವು. ಆನಂತರ ಕೂಡ, ಕೋವಿಡ್ ಸೋಂಕಿತರು, ಪ್ರಕರಣಗಳ ಕುರಿತಾಗಿ ವಿವರವಾದ ಮಾಹಿತಿ ಸಲ್ಲಿಸಲು ಚೀನ ಎರಡು ವಾರಗಳ ಕಾಲ ವಿಳಂಬ ಮಾಡಿತು. ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಆಂತರಿಕವಾಗಿ ನಡೆಸಿದ ಸಭೆಯಲ್ಲಿ ಈ ಕುರಿತಾದ ಮಾಹಿತಿಗಳು ದಾಖಲಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ