ತೈವಾನ್ ಸ್ವತಂತ್ರ ರಾಷ್ಟ್ರವೇ ಅಲ್ಲ: ಚೀನ ಎಚ್ಚರಿಕೆ
Team Udayavani, Sep 28, 2017, 6:05 AM IST
ಬೀಜಿಂಗ್: ತೈವಾನ್ ಎನ್ನುವುದು ಸ್ವತಂತ್ರ ರಾಷ್ಟ್ರವೇ ಅಲ್ಲ. ಒಂದು ವೇಳೆ ಸ್ವತಂತ್ರ ಎಂದು ಘೋಷಿಸಿಕೊಂಡರೆ ಪರಿಸ್ಥಿತಿ ನೆಟ್ಟಗಿರದು ಎಂದು ಚೀನ ಬುಧವಾರ ಎಚ್ಚರಿಕೆ ನೀಡಿದೆ.
ಅದಕ್ಕೆ ಪ್ರತ್ಯುತ್ತರ ನೀಡಿರುವ ತೈವಾನ್ನ ಪ್ರಧಾನಿ ವಿಲಿಯಂ ಲೈ ಚೀನ ದಾಖಲೆಗಳನ್ನು ನೋಡಿಕೊಂಡು ಪ್ರತಿಕ್ರಿಯೆ ನೀಡಲಿ ಎಂದು ತಿರುಗೇಟು ನೀಡಿದ್ದಾರೆ. ಮಂಗಳವಾರ ತೈವಾನ್ನ ಸಂಸತ್ನಲ್ಲಿ ಮಾತನಾಡಿದ್ದ ಪ್ರಧಾನಿ ವಿಲಿಯಂ ಲೈ ತಮ್ಮ ದೇಶ ಸ್ವತಂತ್ರವಾಗಬೇಕು. ಅದುವೇ ತಮ್ಮ ಆದ್ಯತೆ ಎಂದು ಹೇಳಿಕೆ ನೀಡಿದ್ದರು.
ಚೀನದ ಈ ಹೇಳಿಕೆಯಿಂದ ಸಿಡಿಮಿಡಿಗೊಂಡಿದ್ದು, ಅಂಥ ಕ್ರಮಕ್ಕೆ ಮನಸ್ಸು ಮಾಡಿದರೆ ತಕ್ಕ ಶಾಸ್ತಿ ಮಾಡಬೇಕಾದೀತು ಎಂದಿದ್ದಾರೆ. ಆ ರಾಷ್ಟ್ರ ಸ್ವತಂತ್ರವಾಗಿದ್ದರೂ ಚೀನದ್ದೇ ಆಗಿದೆ ಎಂದಿದೆ. ಅದಕ್ಕೆ ತಿರುಗೇಟು ನೀಡಿದ ತೈವಾನ್, ಬೀಜಿಂಗ್ ಏನು ಬೇಕಾದರೂ ಹೇಳಿಕೊಳ್ಳಲಿ. ಒಂದು ಕಾಲದಲ್ಲಿ ಈ ಭೂಪ್ರದೇಶ ಚೀನಕ್ಕೆ ಸೇರಿದ್ದಾಗಿತ್ತು. ಈ ಬಗ್ಗೆ ದಾಖಲೆಗಳನ್ನು ಪರಿಶೀಲಿಸಲಿ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ