ಡಿಜಿಟಲ್‌ ಕರೆನ್ಸಿ ಜಾರಿಗೆ ತರಲು ಮುಂದಾದ ಚೀನ


Team Udayavani, Dec 10, 2019, 9:06 PM IST

china

ಬೀಜಿಂಗ್‌: ಚೀನ ಸರಕಾರ ಡಿಜಿಟಲ್‌ ಕರೆನ್ಸಿಯನ್ನು ಜಾರಿಗೆ ತರುವ ಕುರಿತು ಚಿಂತಿಸುತ್ತಿದೆ. ಈಗಾಗಲೇ ಈ ಪ್ರಸ್ತಾವನೆಗೆ ಅನುಮೋಧನೆ ನೀಡಿರುವ ಚೀನದ ಸೆಂಟ್ರಲ್‌ ಬ್ಯಾಂಕ್‌ ಪ್ರಾಯೋಗಿಕವಾಗಿ ರಾಜ್ಯದ ಕೆಲವು ಪ್ರಮುಖ ನಗರಗಳಲ್ಲಿ ಇದನ್ನು ಜಾರಿಗೆ ತರಲು ಸರಕಾರಕ್ಕೆ ಸೂಚಿಸಿದೆ ಎನ್ನಲಾಗುತ್ತಿದೆ.

ಚೀನದ ಕೇಂದ್ರ ಬ್ಯಾಂಕ್‌ – ಪೀಪಲ್ಸ್‌ ಬ್ಯಾಂಕ್‌ ಆಫ್ ಚೀನ (ಪಿಬಿಸಿ) ತನ್ನ ಡಿಜಿಟಲ್‌ ಕರೆನ್ಸಿ ಎಲೆಕ್ಟ್ರಾನಿಕ್‌ ಪಾವತಿ (ಡಿಸಿಇಪಿ) ಯನ್ನು ಪರಿಚಯಿಸುವ ಕಾರ್ಯಕ್ಕೆ ವೇಗ ನೀಡಲು ಆರಂಭಿಸಿದೆ. ಏಕೆಂದರೆ ಇದು ವಿಶ್ವದಾದ್ಯಂತದ ಕೇಂದ್ರ ಬ್ಯಾಂಕುಗಳ ನಡುವಿನ ಸ್ಪರ್ಧೆಯಿಂದ ಮುಂದೆ ಆರ್ಥಿಕವಾಗಿ ಸದೃಢವಾಗಿ ಉಳಿಯಬೇಕಾದರೆ ಮತ್ತು ಆರ್ಥಿಕ ಸಾರ್ವಭೌಮತ್ವವನ್ನು ಕಾಪಾಡಲು ಇದು ಸಹಾಯ ಮಾಡುತ್ತದೆ ಎಂದು ಗ್ಲೋಬಲ್‌ ಟೈಮ್ಸ್ ವರದಿ ಮಾಡಿದೆ.

ದೇಶದ ದಕ್ಷಿಣ ಗುವಾಂಗಾxಂಗ್‌ ಪ್ರಾಂತ್ಯದ ಟೆಕ್‌ ಹಬ್‌ ಶೆನೆjನ್‌ ನಂತಹ ನಗರಗಳಲ್ಲಿ ಡಿಜಿಟಲ್‌ ಕರೆನ್ಸಿಯ ಪ್ರಯೋಗಗಳನ್ನು ನಡೆಸಲು ಬ್ಯಾಂಕ್‌ ಸಜ್ಜಾಗಿದೆ. ಮುಂದಿನ ವರ್ಷ ಇದರ ಪರೀಕ್ಷೆಯನ್ನು ಕೆಲವು ನಗರಗಳಿಗೆ ವಿಸ್ತರಿಸಲಾಗುವುದು ಎಂದು ಅದು ಹೇಳಿದೆ.

ದೇಶೀಯ ಅಂತರ್ಜಾಲ ದೈತ್ಯ ಸಂಸ್ಥೆಗಳಾದ ಅಲಿಬಾಬಾ ಮತ್ತು ಟೆನ್ಸೆಂಟ್‌ ಸಹ ಪ್ರಯೋಗಗಳಲ್ಲಿ ಭಾಗವಹಿಸಲಿ¨ªಾರೆ. ಡಿಜಿಟಲ್‌ ಕರೆನ್ಸಿಯೊಂದಿಗೆ ಮುನ್ನಡೆಯಲು ವಿಶ್ವದಾದ್ಯಂತದ ಕೇಂದ್ರೀಯ ಬ್ಯಾಂಕುಗಳಲ್ಲಿ ಸ್ಪರ್ಧೆಯು ಬಿಸಿಯಾಗುತ್ತಿರುವುದರಿಂದ ಪಿಬಿಸಿ ಅತ್ಯಂತ ಕ್ಷಿಪ್ರವಾಗಿ ಇದನ್ನು ಜಾರಿಗೊಳಿಸಲು ಮುಂದೆ ಬಂದಿದೆ. 2020ರ ಮೊದಲ ತ್ತೈಮಾಸಿಕದ ಅಂತ್ಯದ ಮೊದಲು ಬ್ಯಾಂಕ್‌ ಡಿಜಿಟಲ್‌ ಕರೆನ್ಸಿಯ ಪರೀಕ್ಷೆಯನ್ನು ಚೀನ ಪೂರ್ಣಗೊಳಿಸಲಿದೆ. ಮತ್ತೆ ಅದರ ಸಾಧಕ ಬಾಧಕಗಳನ್ನು ಅಧ್ಯಯನ ಮಾಡಿ ಮುಂದಿನ ಹಂತಕ್ಕೆ ಕೊಂಡೊಯ್ಯಲಿದೆ. ಡಿಜಿಟಲ್‌ ಮನಿಯನ್ನು ದೇಶದಲ್ಲಿ ಮಾತ್ರವಲ್ಲದೇ ಮಲ್ಟಿನ್ಯಾಶನಲ್‌ ಕಂಪೆನಿಗಳಲ್ಲೂ ಪ್ರಯೋಗ ನಡೆಸಲಿದೆ.

ಈಗಾಗಲೇ ಅಮೆರಿಕ ಮತ್ತು ಚೀನದ ನಡುವೆ ಜಾಗತಿಕ ಮಾರುಕಟ್ಟೆಗಾಗಿ ಪೈಪೋಟಿ ಶುರುವಾಗಿದೆ. ಇದು ವಿಶೇಷವಾಗಿ ಇದು ಅಮೆರಿಕದಲ್ಲಿ ಡೊನಾಲ್ಡ್‌ ಟ್ರಂಪ್‌ ಅಧಿಕಾರಕ್ಕೆ ಬಂದ ಬಳಿಕ ಹೆಚ್ಚಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಅತೀ ದೊಡ್ಡ ಪಾಲುದಾರನಾಗಲು ಈ ಎರಡು ರಾಷ್ಟ್ರಗಳು ಸ್ಪರ್ಧೆಯಲ್ಲಿದೆ.

ಅಮೆರಿಕ 5ಜಿ ತಂತ್ರಜ್ಞಾನ ಪರಿಚಯಿಸಿದ ಬಳಿಕ ಚೀನ ತನ್ನ ಹೆಚ್ಚಿನ ನಗರಗಳಲ್ಲಿ 5ಜಿಯನ್ನು ಪರಿಚಯಿಸಿದೆ. ಈ ಮೂಲಕ ಇಂದು ಜಗತ್ತಿನ ಅತೀದೊಡ್ಡ 5ಜಿ ರಾಷ್ಟ್ರಗಳ ಸಾಲಿನಲ್ಲಿ ಚೀನ ಅಗ್ರಸ್ಥಾನದಲ್ಲಿ ಗುರಿತಿಸಿಕೊಳ್ಳುತ್ತಿದೆ. ಇನ್ನು ವ್ಯಪಾರದಲ್ಲಿಯೂ ಚೀನದ ಬಹುತೇಕ ಉತ್ಪನ್ನಗಳನ್ನು ಅಮೆರಿಕ ಕಪ್ಪು ಪಟ್ಟಿಗೆ ಸೇರಿಸಿದೆ. ಇದರಲ್ಲಿ ತಾಂತ್ರಿಕ ಕ್ಷೇತ್ರಕ್ಕೆ ಸಂಬಂಧಪಟ್ಟ ಉತ್ಪನ್ನಗಳು ಹೆಚ್ಚು ಎಂಬುದು ಗಮನಾರ್ಹ. ಇದೀಗ ಡಿಜಿಟಲ್‌ ಕರೆನ್ಸಿಯನ್ನು ಪರಿಚಯಿಸಲಿರುವ ಚೀನ ಸಹಜವಾಗಿ ಅಮೆರಿಕದೊಂದಿಗೆ ಸ್ಪರ್ಧೆ ನಡೆಸುತ್ತಿದೆ ಎಂದರ್ಥ.

ಏನಿದು ಕರೆನ್ಸಿ?
ಇದು ಒಂದು ಡಿಜಿಟಲ್‌ ಕರೆನ್ಸಿ. ಜಗತ್ತಿನ ಯಾವುದೇ ಭಾಗದಿಂದ ಕೆಲವೇ ನಿಮಿಷಗಳಲ್ಲಿ ಹಣ ಕಳಿಸಲು ಅಥವಾ ಪಡೆಯಲು ಬಳಸಬಹುದು. ಕೆಲವು ಕಡೆಗಳಲ್ಲಿ ಉತ್ಪನ್ನ ಮತ್ತು ಸೇವೆಗಳನ್ನು ಪಡೆಯಲೂ ಇದನ್ನು ಉಪಯೋಗಿಸಬಹುದು. ಷೇರು ಮತ್ತು ಚಿನ್ನದಲ್ಲಿಯೂ ಹೂಡಿಕೆ ಮಾಡಬಹುದಾಗಿದೆ. ಆದರೆ ಇಲ್ಲಿ ವರ್ಗಾವಣೆಗಳೆಲ್ಲವೂ ಇಂಟರ್ನೆಟ್‌ ಮೂಲಕ ನಡೆಯುತ್ತದೆ.

ಪ್ರಮುಖ ಉಪಯೋಗಗಳೇನು?
ಹಣದ ತ್ವರಿತ ವರ್ಗಾವಣೆಗೆ ಇಲ್ಲಿ ಸಂಸ್ಕರಣೆ ಶುಲ್ಕ ಇರುವುದಿಲ್ಲ. ಇದ್ದರೂ ಅತ್ಯಲ್ಪ. ವಿಶ್ವಾದ್ಯಂತ ಚಲಾವಣೆ ಮಾಡಬಹುದು. ಉತ್ಪನ್ನ, ಸೇವೆಗಳ ಖರೀದಿಗೆ ಬಳಸಬಹುದು. ಇತ್ತೀಚೆಗೆ ಬಿಟ್‌ಕಾಯಿನ್‌ಗಳು ಭಾರೀ ಸುದ್ದಿಯಾಗಿತ್ತು.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.