ಕೋವಿಡ್ 19 ವೈರಸ್ ವಿರುದ್ಧ ಹೋರಾಟ: ಸಿಂಗಾಪುರದಿಂದ ಪಾಠ ಕಲಿಯಬೇಕಿದೆ

Team Udayavani, Mar 24, 2020, 11:58 AM IST

Covid-Singapore

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಸಿಂಗಾಪುರ: ಚೀನದ ನೆರೆಯ ರಾಷ್ಟ್ರಗಳ ಸಾಲಿನಲ್ಲಿ ಗುರುತಿಸಿಕೊಳ್ಳುವ ಸಿಂಗಾಪುರ, ತೈವಾನ್‌ ಹಾಕಾಂಗ್‌ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಗಳು ಆರಂಭದಲ್ಲೇ ಉಪಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದರಿಂದ ಈ ರಾಷ್ಟ್ರಗಳು ಕೋವಿಡ್ 19 ವೈರಸ್ ನ ಆರಂಭಿಕ ಆಘಾತದಿಂದ ತಪ್ಪಿಸಿಕೊಂಡಿದ್ದವು. ಆದರೆ ಏಷ್ಯಾದಲ್ಲಿ ಆರಂಭವಾದ ಈ ಮಾರಣಾಂತಿಕ ವೈರಸನ್ನು ಐರೋಪ್ಯ ರಾಷ್ಟ್ರಗಳು ಲಘವಾಗಿ ಪರಿಗಣಿಸಿದ್ದವು. ಇದರ ಫ‌ಲವಾಗಿ ಇಂದು ಐರೋಪ್ಯ ರಾಷ್ಟ್ರಗಳಲ್ಲೂ ಕೊರೊನಾ ವ್ಯಾಪಕವಾಗುತ್ತಿದೆ.

ಹಾಗೆ ನೋಡಿದರೆ ಸಿಂಗಾಪುರ ಹೆಚ್ಚು ಪ್ರವಾಸಿಗರನ್ನು ಹೊಂದಿರುವ ಮತ್ತು ಮುಖ್ಯ ಏರ್‌ಪೋರ್ಟ್‌ಗಳುಳ್ಳ ಪ್ರದೇಶವಾಗಿದೆ. ಚೀನದ ಪ್ರವಾಸಿಗರು, ಉದ್ಯೋಗಸ್ಥರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶ ಅದಾಗಿದೆ. ಚೀನದಲ್ಲಿ ವೈರಸ್‌ ಭೀತಿ ಹೆಚ್ಚಾಗುತ್ತಿದ್ದ ಸಂದರ್ಭದಲ್ಲೇ ಸಾವಿನ ಸಂಖ್ಯೆಯೂ ಏರಿಕೆಯಾಗತೊಡಗಿತು.

ಆ ಸಂದರ್ಭದಿಂದಲೇ ಸಿಂಗಾಪುರದಲ್ಲಿ ಸುಮಾರು 6 ಲಕ್ಷ ಜನರನ್ನು ತನಿಖೆಗೆ ಒಳಪಡಿಸಿತ್ತು. ತತ್‌ಕ್ಷಣ ಕಾರ್ಯಪ್ರವೃತ್ತವಾದ ಸರಕಾರ ಮುಖ್ಯವಾಗಿ ವಿಮಾನಗಳು, ರೈಲು ಸೇವೆಗಳಿಗೆ ಆರಂಭದಲ್ಲೇ ತಡೆ ದೊರೆಯಿತು. ಇದರಿಂದ ಹೊರ ದೇಶದಲ್ಲಿರುವವರು ಮುಖ್ಯವಾಗಿ ಚೀನದಲ್ಲಿರುವವರು ಸಿಂಗಾಪುರ ಪ್ರವೇಶಿಸುವುದಕ್ಕೆ ರೆಡ್‌ ಸಿಗ್ನಲ್‌ ನೀಡಿದಂತಾಯಿತು.

ವೇಗವಾಗಿ ಪತ್ತೆ ಹಚ್ಚಿದ ಸಿಂಗಾಪುರ
ಕೋವಿಡ್ 19 ವೈರ ಸನ್ನು ಅತ್ಯಂತ ತುರ್ತಾಗಿ ಹತ್ತಿಕ್ಕುತ್ತಿರುವ ದೇಶಗಳ ಪೈಕಿ ಸಿಂಗಾಪುರ ಒಂದಾಗಿದೆ. ಸಿಂಗಾಪುರದಲ್ಲಿ ಕೊರೊನಾದಿಂದಾಗಿ ಇದುವರೆಗೂ ಒಂದೇ ಒಂದು ಸಾವು ಸಂಭವಿಸದಿರುವುದು ಕೂಡ ಗಮನ ಸೆಳೆದಿದೆ. ಕೊರೊನಾ ಪೀಡಿತರನ್ನು ಅತ್ಯಂತ ವೇಗವಾಗಿ ಪತ್ತೆ ಹೆಚ್ಚಿರುವುದು ಒಳ್ಳೆಯ ಕ್ರಮವಾಗಿದೆ. ಸೋಂಕು ತಗುಲಿರುವ ಶಂಕೆ ಇರುವ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಿತ್ತು. ಯಾರೂ ಕೂಡ ಪರೀಕ್ಷೆಯಿಂದ ತಪ್ಪಿಸಿಕೊಳ್ಳದಂತೆ ಸೂಕ್ತ ಕ್ರಮವಹಿಸಿದ ಸಿಂಗಾಪುರ, ಸೋಂಕು ಪೀಡಿತರನ್ನು ಪ್ರತ್ಯೇಕಿಸಿ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುತ್ತಿದೆ. ಇದರಲ್ಲಿ ಸಿಂಗಾಪುರ ಆರೋಗ್ಯ ಇಲಾಖೆಯ ಕಾರ್ಯ ಮೆಚ್ಚಲೇಬೇಕು.

ಸೋಂಕು ದೃಢಪಟ್ಟವರನ್ನು ಕೂಡಲೇ ಸಾರ್ವಜನಿಕ ವಲಯದಿಂದ ಪ್ರತ್ಯೇಕಿಸಲಾಗಿತ್ತು. ಅವರನ್ನು ವೈದ್ಯಕೀಯ ಶಿಬಿರಗಳಲ್ಲಿಟ್ಟು ನಿಗಾದಿಂದ ಚಿಕಿತ್ಸೆ ನೀಡಲಾಗುತ್ತಿದೆ. ಶಿಬಿರಗಳಲ್ಲಿರುವ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ಜತೆಗೆ ಆಧುನಿಕ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಸೋಂಕಿತರು ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸಿ ಬೇಗ ಚೇತರಿಸಿಕೊಳ್ಳುತ್ತಿದ್ದಾರೆ. ಆರಂಭದಲ್ಲೇ ಎಚ್ಚೆತ್ತ ಸಿಂಗಾಪುರ ಸರಕಾರ, ತನ್ನ ಪ್ರಜೆಗಳೊಂದಿಗೆ ಹಾಗೂ ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಸದಾ ಸಂಪರ್ಕದಲ್ಲೇ ಇತ್ತು.

ಜನರಿಗೆ ಮಾಹಿತಿ
ಸೋಂಕಿನ ಮಾಹಿತಿಯನ್ನು ಜನರಿಗೆ ತಿಳಿಸಿ ಭಯಭೀತರಾಗದಂತೆ ನಿಗಾವಹಿಸಿತ್ತು. ಅಲ್ಲದೇ ಸೋಂಕು ಪೀಡಿತರನ್ನು ಗುರುತಿಸಿ ಅವರನ್ನು ಸಮಾಜದಿಂದ ಪ್ರತ್ಯೇಕಿಸಿ ಸೂಕ್ತ ಚಿಕಿತ್ಸೆ ಕೊಡಿಸುವ ಮೂಲಕ ಸಿಂಗಾಪುರ ಇಡೀ ದೇಶಕ್ಕೆ ಮಾದರಿಯಾಯಿತು. ಹೊರ ದೇಶಗಳಿಂದ ಜನರು ಬರದಂತೆ ನಿರ್ಬಂಧ ವಿಧಿಸಲಾಗಿದ್ದು, ತನ್ನ ಪ್ರಜೆಗಳಿಗೆ ಯಾವುದೇ ವಿದೇಶ ಪ್ರವಾಸ ಕೈಗೊಳ್ಳದಂತೆಯೂ ಸೂಚಿಸಿದೆ. ಸರಕಾರ ಹೊರಡಿಸುವ ಮಾರ್ಗಸೂಚಿಗಳನ್ನು ಪ್ರಜೆಗಳು ನಿಷ್ಠೆಯಿಂದ ಪಾಲಿಸುತ್ತಿದ್ದಾರೆ.

27ರಿಂದ ಹೆಲ್ತ್‌ ಡಿಕ್ಲೆರೇಶನ್‌
ಸಿಂಗಾಪುರಕ್ಕೆ ಮಾರ್ಚ್‌ 27ರ ಬಳಿಕ ಆಗಮಿಸುವ ಎಲ್ಲರೂ ತಮ್ಮ ಆರೋಗ್ಯ ಮಾಹಿತಿಯನ್ನು ಕಡ್ಡಾಯವಾಗಿ ನೀಡಲೇಬೇಕು ಎಂದು ಅಲ್ಲಿನ ಸರಕಾರ ಸೂಚಿಸಿದೆ. ಇದನ್ನು ವಿದೇಶಿಗರೂ ಮತ್ತು ಸಿಂಗಾಪುರದ ಪ್ರಜೆಗಳೂ ನೀಡಲೇಬೇಕಾಗಿದೆ. ಸಿಂಗಾಪುರದಲ್ಲಿ ಒಟ್ಟು 455 ಪ್ರಕರಣಗಳು ದಾಖಲಾಗಿದ್ದು, 144 ಮಂದಿ ಸುಧಾರಿಸಿದ್ದಾರೆ. 309 ಮಂದಿಯಲ್ಲಿ ಈಗ ಸೋಂಕು ಕಂಡು ಬಂದಿದೆ. ಇಬ್ಬರು ಬಲಿಯಾಗಿದ್ದಾರೆ.

ಟಾಪ್ ನ್ಯೂಸ್

Actor Pratham: ಬಿಗ್‌ ಬಾಸ್‌ ಖ್ಯಾತಿಯ ನಟ ಪ್ರಥಮ್‌ಗೆ ಜೀವ ಬೆದರಿಕೆ; ದೂರು ದಾಖಲು

Actor Pratham: ಬಿಗ್‌ ಬಾಸ್‌ ಖ್ಯಾತಿಯ ನಟ ಪ್ರಥಮ್‌ಗೆ ಜೀವ ಬೆದರಿಕೆ; ದೂರು ದಾಖಲು

Bengaluru: ಅಮೆಜಾನ್‌ ಪಾರ್ಸೆಲ್‌ ನೊಳಗೆ ವಿಷಕಾರಿ ಹಾವು-ಮಹಿಳೆ ಬಚಾವ್!‌ Watch

Bengaluru: ಅಮೆಜಾನ್‌ ಪಾರ್ಸೆಲ್‌ ನೊಳಗೆ ವಿಷಕಾರಿ ಹಾವು-ಮಹಿಳೆ ಬಚಾವ್!‌ Watch

10

ದರ್ಶನ್‌ ನನ್ನ ಮೇಲೆ ಹಲ್ಲೆ ನಡೆಸಿಲ್ಲ.. ನಾನು ಅವರ ದೊಡ್ಡ ಅಭಿಮಾನಿ: ಪವಿತ್ರಾ ಮಾಜಿ ಪತಿ  

10-mng

Umrahಕ್ಕೆ ತೆರಳಿದ್ದವರ ಟ್ರಾಲಿ ಬ್ಯಾಗ್ ನಿಂದ ಹಣ ಕಳವು; ವಿಮಾನಯಾನ ಸಂಸ್ಥೆಯ ಮೇಲೆ ಆರೋಪ

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ತಿರುಚುವ ಪ್ರಯತ್ನದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ತಿರುಚುವ ಪ್ರಯತ್ನದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

9-hunsur

Hunsur: ನಾಗರಹೊಳೆ ಉದ್ಯಾನದಲ್ಲಿ ಕಾಡಾನೆ ಶವ ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mecca Heat Wave: ವಿಪರೀತ ಬಿಸಿಲ ತಾಪ-500ಕ್ಕೂ ಅಧಿಕ ಹಜ್‌ ಯಾತ್ರಾರ್ಥಿಗಳು ಮೃತ್ಯು

Mecca Heat Wave: ವಿಪರೀತ ಬಿಸಿಲ ತಾಪ-500ಕ್ಕೂ ಅಧಿಕ ಹಜ್‌ ಯಾತ್ರಾರ್ಥಿಗಳು ಮೃತ್ಯು

New Jersey: ಗುಂಡಿನ ದಾಳಿಗೆ ಪಂಜಾಬ್‌ ಮೂಲದ ಮಹಿಳೆ ಮೃತ್ಯು, ಮತ್ತೊಬ್ಬಾಕೆ ಚಿಂತಾಜನಕ

New Jersey: ಗುಂಡಿನ ದಾಳಿಗೆ ಪಂಜಾಬ್‌ ಮೂಲದ ಮಹಿಳೆ ಮೃತ್ಯು, ಮತ್ತೊಬ್ಬಾಕೆ ಚಿಂತಾಜನಕ

Pakistan ಜನರು ಕಂಗಾಲು-ಒಂದು ಕೆಜಿ ಟೊಮೆಟೋ ಬೆಲೆ 200, ಲಿಂಬೆಹಣ್ಣು ಕೆಜಿಗೆ 480 ರೂ.!

Pakistan ಜನರು ಕಂಗಾಲು-ಒಂದು ಕೆಜಿ ಟೊಮೆಟೋ ಬೆಲೆ 200, ಲಿಂಬೆಹಣ್ಣು ಕೆಜಿಗೆ 480 ರೂ.!

UK: ಡಿಲೀಟ್‌ ಆದ ಮೇಸೆಜ್‌ ಪತ್ತೆ ಹಚ್ಚಿದ ಪತ್ನಿ; Apple ಕಂಪನಿ ವಿರುದ್ಧ ದಾವೆ ಹೂಡಿದ ಪತಿ!

UK: ಡಿಲೀಟ್‌ ಆದ ಮೇಸೆಜ್‌ ಪತ್ತೆ ಹಚ್ಚಿದ ಪತ್ನಿ; Apple ಕಂಪನಿ ವಿರುದ್ಧ ದಾವೆ ಹೂಡಿದ ಪತಿ!

Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

Actor Pratham: ಬಿಗ್‌ ಬಾಸ್‌ ಖ್ಯಾತಿಯ ನಟ ಪ್ರಥಮ್‌ಗೆ ಜೀವ ಬೆದರಿಕೆ; ದೂರು ದಾಖಲು

Actor Pratham: ಬಿಗ್‌ ಬಾಸ್‌ ಖ್ಯಾತಿಯ ನಟ ಪ್ರಥಮ್‌ಗೆ ಜೀವ ಬೆದರಿಕೆ; ದೂರು ದಾಖಲು

11-yellapur

Yellapur: ನಿಯಂತ್ರಣ ತಪ್ಪಿ ಕಾರು ಪಲ್ಟಿ; ಪ್ರಯಾಣಿಕರು ಪಾರು

Bengaluru: ಅಮೆಜಾನ್‌ ಪಾರ್ಸೆಲ್‌ ನೊಳಗೆ ವಿಷಕಾರಿ ಹಾವು-ಮಹಿಳೆ ಬಚಾವ್!‌ Watch

Bengaluru: ಅಮೆಜಾನ್‌ ಪಾರ್ಸೆಲ್‌ ನೊಳಗೆ ವಿಷಕಾರಿ ಹಾವು-ಮಹಿಳೆ ಬಚಾವ್!‌ Watch

10

ದರ್ಶನ್‌ ನನ್ನ ಮೇಲೆ ಹಲ್ಲೆ ನಡೆಸಿಲ್ಲ.. ನಾನು ಅವರ ದೊಡ್ಡ ಅಭಿಮಾನಿ: ಪವಿತ್ರಾ ಮಾಜಿ ಪತಿ  

Cow

Chikkaballapura: ಮುಂಗಾರು ಬೆನ್ನಲ್ಲೇ ಹೈನೋದ್ಯಮಕ್ಕೆ ಜೀವಕಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.