ಕೋವಿಡ್ 19 ತಲ್ಲಣ : ಅಮೆರಿಕದಲ್ಲಿ ವೆಂಟಿಲೇಟರ್ಸ್ ಅಭಾವ
Team Udayavani, Mar 24, 2020, 11:56 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ವಾಷಿಂಗ್ಟನ್: ಜಗತ್ತಿನ ದೊಡ್ಡಣ್ಣ ಪಟ್ಟದಲ್ಲಿರುವ ಅಮೆರಿಕದಲ್ಲೂ ಕೋವಿಡ್ 19 ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಸೋಂಕಿಗೆ ಬಲಿಯಾದವರ ಸಂಖ್ಯೆ 452ಕ್ಕೇರಿದೆ. 34,717 ಮಂದಿಗೆ ಸೋಂಕು ದೃಢಪಟ್ಟಿದೆ. 178 ಮಂದಿ ಗುಣ ಮುಖರಾಗಿದ್ದಾರೆ. ಸೋಂಕು ದೃಢಪಟ್ಟ ಮೊದಲ ಸೆನೆಟರ್ ಪೌಲ್ ಆಗಿದ್ದು ಈಗ ಕ್ವಾರೆಂಟೈನ್ನಲ್ಲಿದ್ದಾರೆ. ನ್ಯೂಯಾರ್ಕ್ನಲ್ಲಿ 15,000ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಕಳೆದ 24 ಗಂಟೆಗಳಲ್ಲಿ 5,418ಹೊಸ ಪ್ರಕರಣಗಳು ದಾಖಲಾಗಿವೆ.
ನ್ಯೂಯಾರ್ಕ್ಲ್ಲಿ 114 ಜನರು ಸಾವಿಗೀಡಾಗಿದ್ದು ಒಂದು ದಿನದಲ್ಲಿ 58 ಪ್ರಕರಣಗಳು ವರದಿಯಾಗಿವೆ. ಮುಂದಿನ 10 ದಿನಗಳಲ್ಲಿ ನ್ಯೂಯಾರ್ಕ್ನಲ್ಲಿ ಅಗತ್ಯ ವೈದ್ಯಕೀಯ ವಸ್ತುಗಳ ಪೂರೈಕೆಗೂ ಹೊಡೆತ ಬೀಳುವ ಸಾಧ್ಯತೆ ಇದೆ. 10 ದಿನಗಳಲ್ಲಿ ವೈದ್ಯಕೀಯ ವಸ್ತುಗಳ ಪೂರೈಕೆ ಕುಂಠಿತವಾಗಲಿದ್ದು, ಅಲ್ಲೂ ಅಗತ್ಯ ಸಂಖ್ಯೆಯಲ್ಲಿ ವೆಂಟಿಲೇಟರ್ ಸಿಗದೇ ಇದ್ದರೆ ಜನರ ಜೀವನಕ್ಕೆ ಅಪಾಯ ಇದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಇಟಲಿಯಲ್ಲಿ ರೋಗಿಗಳ ಸಂಖ್ಯೆಗಳು ಹೆಚ್ಚಾದ ಪರಿಣಾಮ ಆಸ್ಪತ್ರೆಗಳಲ್ಲಿ ಸ್ಥಳಗಳ ಅಲಭ್ಯತೆ ಹೆಚ್ಚಾಗಿತ್ತು. ಇದರಿಂದ ವೆಂಟಿಲೇಟರ್ನ ಸಮಸ್ಯೆ ಉಂಟಾಗಿದ್ದು, ಜನರು ಸಾಯುತ್ತಿದ್ದಾರೆ.
ಕೊರಿಯಾದಲ್ಲಿ ನಿಯಂತ್ರಣ
ದಕ್ಷಿಣ ಕೊರಿಯಾದಲ್ಲಿ ಕೋವಿಡ್ 19 ವೈರಸ್ ನಿಯಂತ್ರಣದಲ್ಲಿದೆ. ಆರಂಭದಲ್ಲಿ ಇಟಲಿಯಂತೆ ಎರಿಕೆಯಾಗುತ್ತಾ ಇದ್ದರೂ ಬಳಿಕ ಹತೋಟಿಗೆ ಬಂದಿದೆ. ಕಳೆದ 24 ಗಂಟೆಗಳಲ್ಲಿ 64 ಪ್ರಕರಣಗಳು ಪತ್ತೆಯಾಗಿದ್ದು, 8,961 ಪ್ರಕರಣಗಳು ಮಾತ್ರ ದಾಖಲಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…