ಹ್ಯಾಂಡ್ ಗನ್ ನಲ್ಲಿ ಮಹಿಳೆಗೆ ಶೂಟ್ ಮಾಡಿದ 7 ತಿಂಗಳ ಸಾಕು ನಾಯಿ

Team Udayavani, Oct 9, 2019, 12:27 PM IST

ಒಕ್ಲಾಹೋಮ: 7 ತಿಂಗಳ ಸಾಕು ನಾಯಿಯೊಂದು ತನ್ನ ಒಡತಿಗೆ ಶೂಟ್ ಮಾಡಿದ ಅಪರೂಪದ ಘಟನೆ ಅಮೇರಿಕಾದ ಒಕ್ಲಾಹೋಮ ನಗರದಲ್ಲಿ ಇತ್ತೀಚೆಗೆ ನಡೆದಿದೆ. ಗುಂಡೇಟು ತಿಂದ ಮಹಿಳೆ ಆಸ್ಪತ್ರಗೆ ದಾಖಲಾಗಿದ್ದಾರೆ.

ಒಕ್ಲಾಹೋಮ ನಗರದ ನಿವಾಸಿ ಟೀನಾ ತನ್ನ ಡ್ರೈವರ್ ನೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅವರ ಸಾಕು ನಾಯಿ ‘ಮೊಲಿ’ ಹಿಂದಿನ ಸೀಟಿನಲ್ಲಿ ಕುಳಿತಿತ್ತು. ಆ ವೇಳೆಯಲ್ಲಿ ದಾರಿ ಮಧ್ಯೆ ರೈಲ್ವೇ ಕ್ರಾಸಿಂಗ್ ಇದ್ದ ಕಾರಣ ಕಾರನ್ನು ನಿಲ್ಲಿಸಿದ್ದರು.  ಎದುರಿನ ಸೀಟಿನ ನಡುವೆ ಗುಂಡು ತುಂಬಿದ್ದ 0.22 ಕ್ಯಾಲಿಬರ್ ಹ್ಯಾಂಡ್ ಗನ್ ಇಡಲಾಗಿತ್ತು.

ರೈಲಿನ ಸದ್ದನ್ನು ಕೇಳಿದ ‘ಮೊಲಿ’ ಗಾಬರಿಗೊಂಡು ಎದುರಿನ ಒಡತಿ ಇದ್ದ ಎದುರಿನ ಸೀಟಿಗೆ ಹಾರಿದೆ. ಆಗ ‘ಮೊಲಿ’ ಕಾಲು ತಾಗಿ ಹ್ಯಾಂಡ್ ಗನ್ ನಿಂದ ಗುಂಡು ಸಿಡಿದಿದ್ದು, ಅದು ಟೀನಾ ಅವರ ಎಡತೊಡೆಯನ್ನು ಸೀಳಿದೆ. ಅವರಿಗೆ ತೀವ್ರ ರಕ್ತಸ್ರಾವವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ