Donald Trump ಬಂಧನ, ರಿಲೀಸ್‌; ರಹಸ್ಯ ಕಡತ ಸಂಗ್ರಹಿಸಿಟ್ಟುಕೊಂಡ ಆರೋಪ

ಅಮೆರಿಕ ಇತಿಹಾಸದಲ್ಲಿ ಇಂಥ ಬೆಳವಣಿಗೆ ಇದೇ ಮೊದಲು

Team Udayavani, Jun 15, 2023, 7:35 AM IST

Donald Trump; ನಾನು ತಪ್ಪು ಮಾಡಿಯೇ ಇಲ್ಲ; ಮಿಯಾಮಿ ಕೋರ್ಟ್‌ ಮುಂದೆ ಹೇಳಿಕೊಂಡ ಟ್ರಂಪ್‌

ಮಿಯಾಮಿ:ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಬಂಧಿಸಿ, ಬಿಡುಗಡೆ ಮಾಡಲಾಗಿದೆ. ಅಧಿಕಾರಾವಧಿ ಮುಗಿದ ಬಳಿಕವೂ ರಾಷ್ಟ್ರೀಯ ಭದ್ರತಾ ಕಡತಗಳನ್ನು ಕಾನೂನುಬಾಹಿರವಾಗಿ ಸಂಗ್ರಹಿಸಿಟ್ಟುಕೊಂಡ ಮತ್ತು ಅದನ್ನು ಮರಳಿ ಪಡೆಯಲು ಬಂದ ಅಧಿಕಾರಿಗಳಿಗೆ ಸುಳ್ಳು ಹೇಳಿದ ಪ್ರಕರಣದಲ್ಲಿ ಈ ಬೆಳವಣಿಗೆ ನಡೆದಿದೆ. ಮಿಯಾಮಿಯ ಕೋರ್ಟ್‌ಗೆ ಅವರು ಶರಣಾಗತರಾದ ಕೂಡಲೇ ಅವರನ್ನು ಬಂಧಿಸಲಾಗಿತ್ತು. ಜಡ್ಜ್ ಮುಂದೆ ವಾದಿಸಿದ ಟ್ರಂಪ್‌, “ನಾನು ನಿರ್ದೋಷಿ. ಯಾವುದೇ ತಪ್ಪು ಮಾಡಿಲ್ಲ’ ಎಂದು ಹೇಳಿದ್ದಾರೆ.

2024ರ ನವೆಂಬರ್‌ನಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಈ ಬಾರಿ ಮತ್ತೆ ಕಣಕ್ಕಿಳಿಯಲು ಟ್ರಂಪ್‌ ಸಿದ್ಧತೆ ನಡೆಸಿಕೊಳ್ಳುತ್ತಿರುವಂತೆಯೇ ಈ ಬೆಳವಣಿಗೆ ನಡೆದಿದೆ. ನೀತಿ ಚಿತ್ರ ತಾರೆಗೆ ಹಣ ನೀಡಿ ಬಾಯಿ ಮುಚ್ಚಿಸಿದ ಪ್ರಕರಣದಲ್ಲಿ ಏಪ್ರಿಲ್‌ನಲ್ಲಷ್ಟೇ ಟ್ರಂಪ್‌ ಕೋರ್ಟ್‌ಗೆ ಹಾಜರಾಗಿದ್ದರು. ಈಗ ಫೆಡರಲ್‌ ಅಪರಾಧವೊಂದರಲ್ಲಿ ಆರೋಪ ಎದುರಿಸುತ್ತಿರುವ ಮೊದಲ ಅಧ್ಯಕ್ಷ ಎಂಬ ಕುಖ್ಯಾತಿಗೆ ಟ್ರಂಪ್‌ ಪಾತ್ರರಾಗಿದ್ದಾರೆ.

ಮೌನಕ್ಕೆ ಜಾರಿದ್ದ ಟ್ರಂಪ್‌
ಮಿಯಾಮಿ ಕೋರ್ಟ್‌ಗೆ ಶರಣಾಗುವ ಮುನ್ನ ಕೋರ್ಟ್‌ ಹೊರಗೆ ಸೇರಿದ್ದ ಭಾರೀ ಸಂಖ್ಯೆಯ ಜನರತ್ತ ಟ್ರಂಪ್‌ ಕೈಬೀಸುತ್ತಾ ನಡೆದರು. ಆದರೆ, ಕೋರ್ಟ್‌ ಕೊಠಡಿಯೊಳಗೆ ಮಾತ್ರ ಮೌನವಾಗಿ, ಕೈಕಟ್ಟಿ ಕುಳಿತಿದ್ದರು.

ದೋಷಿಯಾದರೂ ಸ್ಪರ್ಧಿಸುವ ಅವಕಾಶ
ಈ ಪ್ರಕರಣದಲ್ಲಿ ದೋಷಿ ಎಂಬ ತೀರ್ಪು ಬಂದರೂ ಡೊನಾಲ್ಡ್‌ ಟ್ರಂಪ್‌ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಮತ್ತು ಪ್ರಚಾರ ಅಭಿಯಾನ ನಡೆಸಲು ಅಡ್ಡಿಯಿಲ್ಲ. ಟ್ರಂಪ್‌ ವಿರುದ್ಧದ  ವಿಚಾರಣೆಗಳು ಪೂರ್ಣಗೊಳ್ಳಲು ಇನ್ನೂ ಹಲವು ತಿಂಗಳು ಬೇಕು. ವಿಚಾರಣೆ ಹಂತದಲ್ಲೂ ಅವರು ಪ್ರಚಾರ ಮುಂದುವರಿಸಬಹುದು. ಏಕೆಂದರೆ, ಅಮೆರಿಕದ ಸಂವಿಧಾನದ ಪ್ರಕಾರ, ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ನೈಸರ್ಗಿಕವಾಗಿ ಜನಿಸಿದ ನಾಗರಿಕನಾಗಿರಬೇಕು, ಕನಿಷ್ಠ 35 ವರ್ಷದವರಾಗಿರಬೇಕು ಮತ್ತು ಕನಿಷ್ಠ 14 ವರ್ಷ ಅಮೆರಿಕದಲ್ಲಿ ನೆಲೆಸಿರಬೇಕು. ಹೀಗಾಗಿ, ಟ್ರಂಪ್‌ ಅವರು ಅಪರಾಧಿ ಎಂದು ಸಾಬೀತಾದರೂ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ತೊಂದರೆ ಇಲ್ಲ ಎನ್ನುತ್ತಾರೆ ಕಾನೂನು ಪ್ರೊಫೆಸರ್‌ ರಿಚರ್ಡ್‌ ಹೇಸನ್‌,

ಟಾಪ್ ನ್ಯೂಸ್

Exam

NEET-UG ಪರೀಕ್ಷೆ ಫ‌ಲಿತಾಂಶ ನಾಳೆ ಮಧ್ಯಾಹ್ನದೊಳಗೆ ಪ್ರಕಟಿಸಿ: ಸುಪ್ರೀಂ ಕೋರ್ಟ್‌

1-trumph

Donald Trump ಮೇಲಿನ ದಾಳಿ ಬಗ್ಗೆ ಮೊದಲೇ ಮಾಹಿತಿ ನೀಡಿದ್ದ!

1-fffrr

‘Bhut jolokia’ ಚಿಪ್ಸ್‌ ತಿಂದು ಜಪಾನ್‌ನ 14 ವಿದ್ಯಾರ್ಥಿಗಳು ಅಸ್ವಸ್ಥ

1-kanwar

UP Police;ಕನ್ವರ್‌ ಯಾತ್ರೆ ಮಾರ್ಗದ ಹೊಟೇಲ್‌ ಮಾಲಕರ ಹೆಸರು ಪ್ರದರ್ಶನ ಕಡ್ಡಾಯ!

1-insta

Instagram Influencer ಆನ್ವಿ ಕಾಮ್ದಾರ್‌ ಕಮರಿಗೆ ಬಿದ್ದು ಮರಣ

modi (4)

J&K ಉಗ್ರ ನಿಗ್ರಹಕ್ಕೆ ಹೆಚ್ಚು ಪಡೆ ನಿಯೋಜಿಸಿ: ಪ್ರಧಾನಿ ಮೋದಿ

Heavy Rains ಅದ್ಯಪಾಡಿ ಗ್ರಾಮದ 30 ಮನೆಗಳು ಜಲಾವೃತ

Heavy Rains ಅದ್ಯಪಾಡಿ ಗ್ರಾಮದ 30 ಮನೆಗಳು ಜಲಾವೃತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-trumph

Donald Trump ಮೇಲಿನ ದಾಳಿ ಬಗ್ಗೆ ಮೊದಲೇ ಮಾಹಿತಿ ನೀಡಿದ್ದ!

1-fffrr

‘Bhut jolokia’ ಚಿಪ್ಸ್‌ ತಿಂದು ಜಪಾನ್‌ನ 14 ವಿದ್ಯಾರ್ಥಿಗಳು ಅಸ್ವಸ್ಥ

Suspended

US; ಭಾರತೀಯಳನ್ನು ಕೊಂದು ನಕ್ಕಿದ್ದ ಪೊಲೀಸ್‌ ವಜಾ

1-weqwqew

Italy ಪ್ರಧಾನಿಯವರನ್ನು ಅಣಕಿಸಿದ್ದ ಪತ್ರಕರ್ತೆಗೆ ದಂಡ!

‌Gazaಪಟ್ಟಿಯಲ್ಲಿ ತಕ್ಷಣವೇ ಕದನವಿರಾಮ ಘೋಷಿಸಿ: ವಿಶ್ವಸಂಸ್ಥೆಯಲ್ಲಿ ಧ್ವನಿ ಎತ್ತಿದ ಭಾರತ

‌Gazaಪಟ್ಟಿಯಲ್ಲಿ ತಕ್ಷಣವೇ ಕದನವಿರಾಮ ಘೋಷಿಸಿ: ವಿಶ್ವಸಂಸ್ಥೆಯಲ್ಲಿ ಧ್ವನಿ ಎತ್ತಿದ ಭಾರತ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

football

FIFA ರ್‍ಯಾಂಕಿಂಗ್‌; ಆರ್ಜೆಂಟೀನ ನಂ.1; 124ರಲ್ಲೇ ಉಳಿದ ಭಾರತ

Exam

NEET-UG ಪರೀಕ್ಷೆ ಫ‌ಲಿತಾಂಶ ನಾಳೆ ಮಧ್ಯಾಹ್ನದೊಳಗೆ ಪ್ರಕಟಿಸಿ: ಸುಪ್ರೀಂ ಕೋರ್ಟ್‌

1-trumph

Donald Trump ಮೇಲಿನ ದಾಳಿ ಬಗ್ಗೆ ಮೊದಲೇ ಮಾಹಿತಿ ನೀಡಿದ್ದ!

1-wqewqewq

Mauritius ನಲ್ಲಿಯೂ ಭಾರತದ ಜನೌಷಧ ಕೇಂದ್ರ

1-fffrr

‘Bhut jolokia’ ಚಿಪ್ಸ್‌ ತಿಂದು ಜಪಾನ್‌ನ 14 ವಿದ್ಯಾರ್ಥಿಗಳು ಅಸ್ವಸ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.