ಫೋಟೋ ಪೋಸ್ಟ್ ಮಾಡಿ ಸಿಕ್ಕಿಹಾಕಿಕೊಂಡರೇ ಟ್ರಂಪ್ ?
Team Udayavani, Sep 1, 2019, 5:04 AM IST
ವಾಷಿಂಗ್ಟನ್: ಇರಾನ್ನಲ್ಲಿ ಇತ್ತೀಚೆಗೆ ಕ್ಷಿಪಣಿ ಪ್ರಯೋಗವೊಂದು ವಿಫಲವಾಗಿದ್ದು, ಧ್ವಂಸಗೊಂಡಿರುವ ಸ್ಥಳದ ಉಪಗ್ರಹ ಚಿತ್ರಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಟ್ವೀಟರ್ ಖಾತೆಯಲ್ಲಿ ಪ್ರಕಟಿಸಿರುವುದು, ಅಮೆರಿಕದ ಗೂಢಚರ್ಯೆ ವಿಭಾಗವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದಂತಾಗಿದೆ.
ಚಿತ್ರದ ಬಗ್ಗೆ ವಿಶ್ಲೇಷಣೆ ಮಾಡಿರುವ ಮಾಂಟೆರಿಯಲ್ಲಿರುವ “ಮಿಡಲ್ಬರಿ ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್’ ಕೇಂದ್ರದ ತಜ್ಞ ಜೆಫ್ರಿ ಲೂಯಿಸ್, “”ಟ್ರಂಪ್ ಪ್ರಕಟಿಸಿರುವ ಚಿತ್ರ ಉಪಗ್ರಹದಿಂದ ಪಡೆದದ್ದಲ್ಲ. ಕ್ಷಿಪಣಿ ಉಡಾವಣ ಸ್ಥಳದಿಂದ ನೂರಾರು ಅಡಿಗಷ್ಟೇ ಎತ್ತರದಲ್ಲಿ ತೆಗೆದಿರುವ ಚಿತ್ರವದು. ಫೋಟೋದಲ್ಲಿ, ಧ್ವಂಸಗೊಂಡಿರುವ ವಸ್ತುಗಳನ್ನು ಗುರುತು ಹಾಕಿರುವುದನ್ನು ನೋಡಿದರೆ ಅವು ಗುಪ್ತಚರ ಇಲಾಖೆಯ ಕೆಲಸ ಎನಿಸುತ್ತದೆ. ಒಟ್ಟಾರೆಯಾಗಿ, ಈ ಫೋಟೋ ಇರಾನ್ ಮೇಲೆ ಅಮೆರಿಕ ಗೂಢಚರ್ಯೆ ನಡೆಸುತ್ತಿರುವುದಕ್ಕೆ ಸಾಕ್ಷಿ ಒದಗಿಸಿದಂತಿದೆ” ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ