ಅಮೆರಿಕದಲ್ಲಿ ಸೌದಿ ವಿದ್ಯಾರ್ಥಿಯಿಂದ ಶೂಟೌಟ್‌

Team Udayavani, Dec 7, 2019, 9:57 PM IST

ವಾಷಿಂಗ್ಟನ್‌: ಯುಎಸ್‌ ನೌಕಾ ನೆಲೆಯಲ್ಲಿ ಪೈಲಟ್‌ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟು, 8 ಮಂದಿ ಗಾಯಗೊಂಡ ಘಟನೆ ನಡೆದಿದೆ.

ಇಲ್ಲಿನ ಸೌದಿ ವಾಯುಪಡೆ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿಯೇ ಈ ಕೃತ್ಯವೆಸಗಿದ್ದಾನೆ.ಬಳಿಕ ಪೊಲೀಸರು ಆತನನ್ನು ಗುಂಡಿಕ್ಕಿ ಕೊಂದಿದ್ದಾರೆ. ಹತ್ಯೆ ಮಾಡಿದ ವ್ಯಕ್ತಿಯನ್ನು ಗುಪ್ತಚರ ಗುಂಪು ಸೌದಿ ಅರೇಬಿಯಾದ ಮೊಹಮ್ಮದ್‌-ಅಲ್‌-ಶಾಮ್ರಾನಿ ಎಂದು ಗುರುತಿಸಿದೆ. ಈ ದಾಳಿ ನಡೆಸುವ ಮುನ್ನ ಆತ ಟ್ವಿಟರ್‌ನಲ್ಲಿ ಅಮೆರಿಕ ಪ್ರಪಂಚದಲ್ಲಿ ಕ್ರೌರ್ಯವನ್ನು ಹುಟ್ಟುಹಾಕುತ್ತಿರುವುದುದಾಗಿ ಪೋಸ್ಟ್‌ಗಳನ್ನು ಬರೆದಿದ್ದ. ಜೊತೆಗೆ ಅಮೆರಿಕ ಇಸ್ರೇಲ್‌ಗೆ ಬೆಂಬಲ ನೀಡುತ್ತಿರುವುದನ್ನೂ ವಿರೋಧಿಸಿದ್ದ ಎಂದು ಹೇಳಲಾಗಿದೆ. ಇದೇ ವೇಳೆ, ಆತ ತನ್ನ ದೇಶದ ಪ್ರಜೆ ಅಲ್ಲ ಎಂದು ಸೌದಿ ಅರೇಬಿಯಾ ಹೇಳಿಕೊಂಡಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ