ವಾರ್ಷಿಕ ಹಜ್ ಯಾತ್ರೆಗೆ ತೆರೆ
Team Udayavani, Aug 12, 2019, 5:33 AM IST
ಮೀನಾ: ಸೌದಿ ಅರೇಬಿಯಾದ ಮೆಕ್ಕಾದಲ್ಲಿ ನಡೆಯುವ ವಾರ್ಷಿಕ ಹಜ್ ಯಾತ್ರೆಗೆ ರವಿವಾರ ತೆರೆ ಬಿದ್ದಿದ್ದು, ಸುಮಾರು 160 ದೇಶಗಳ 25 ಲಕ್ಷ ಯಾತ್ರಿಕರು ಈ ವರ್ಷ ಹಜ್ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಯಾತ್ರೆ ಮುಗಿಯುತ್ತಿದ್ದಂತೆಯೇ ವಿಶ್ವಾದ್ಯಂತದ ಮುಸ್ಲಿಂ ಸಮುದಾಯ ಸೋಮವಾರ ಈದ್-ಉಲ್-ಅದ್‌ಹಾ (ಬಕ್ರೀದ್) ಹಬ್ಬವನ್ನು ಆಚರಿಸಲಿದೆ. ಈ ಬಾರಿ 2 ಲಕ್ಷ ಭಾರತೀಯರು ಹಜ್ ಯಾತ್ರೆಯಲ್ಲಿ ಭಾಗವಹಿಸಿದ್ದು, ಈ ಪೈಕಿ ಶೇ. 48ರಷ್ಟು ಮಂದಿ ಮಹಿಳೆಯರಾಗಿದ್ದಾರೆ. ಅಲ್ಲದೆ, 2,340 ಮಹಿಳೆಯರು “ಮೆಹ್ರಾಮ್'(ಪುರುಷ ಒಡನಾಡಿ) ಇಲ್ಲದೇ ಏಕಾಂಗಿಯಾಗಿ ಹಜ್ ಕೈಗೊಂಡಿದ್ದಾರೆ.