ಮಿಸ್ ಫ್ರಾನ್ಸ್ಗೆ ಭುವನ ಸುಂದರಿ ಕಿರೀಟದ ಗರಿಮೆ
Team Udayavani, Jan 31, 2017, 11:01 AM IST
ವಾಷಿಂಗ್ಟನ್: ಫ್ರಾನ್ಸ್ನ ಚೆಲುವೆ ಐರಿಸ್ ಮಿಟ್ಟೆನಾಯೆರೆ 2017ರ ಭುವನ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಮಿಟ್ಟೆನಾಯೆರೆ ದಂತ ವೈದ್ಯ ವಿದ್ಯಾರ್ಥಿಯಾಗಿದ್ದಾರೆ. ವಿಶ್ವದ ವಿವಿಧ ದೇಶಗಳ 85 ಸ್ಪರ್ಧಿಗಳನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಫಿಲಿಪ್ಪೀನ್ಸ್ನ ಮನಿಲಾದಲ್ಲಿ ಅಂತಿಮ ಹಂತದ ಸ್ಪರ್ಧೆಗಳು ನಡೆದವು.
ಐರಿಸ್ ಅವರು 2010ರಲ್ಲಿ ಹೈಟಿಯಲ್ಲಿ ನಡೆದ ಭೂಕಂಪದಲ್ಲಿ ಪಾರಾಗಿದ್ದ ಘಟನೆಯನ್ನು ಮನಮುಟ್ಟುವಂತೆ ತೀರ್ಪುಗಾರರಿಗೆ ವಿವರಿಸಿದರು. ಜತೆಗೆ ವಿಶ್ವಾದ್ಯಂತ ಇರುವ ವಲಸಿಗರ ಸಮಸ್ಯೆ ಮತ್ತು ಇತರ ಅಂತಾರಾಷ್ಟ್ರೀಯ ವಿದ್ಯಮಾನಗಳ ಬಗೆಗಿನ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರಿಸಿದರು. ಮಿಸ್ ಹಯಾತಿ ಮೊದಲನೇ ರನ್ನರ್ ಅಪ್ ಮತ್ತು ಮಿಸ್ ಕೋಲಂಬಿಯಾ ಎರಡನೇ ರನ್ನರ್ ಅಪ್ ಎನಿಸಿಕೊಂಡಿದ್ದಾರೆ.
ಈ ಬಾರಿ ಸ್ಪರ್ಧೆಯ ನಿಯಮದಲ್ಲಿ ಸ್ಪಲ್ಪ ಬದಲಾವಣೆ ಮಾಡಲಾಗಿದ್ದು, ಅಂತಿಮ ಸುತ್ತಿನಲ್ಲಿ 13 ಮಂದಿ ಸ್ಪರ್ಧಿಗಳು ಫೈನಲ್ ತಲುಪಿದ್ದರು. ಭಾರತದ ವತಿಯಿಂದ ಸ್ಪರ್ಧಿಸಿದ್ದ ಬೆಂಗಳೂರು ಮೂಲದ ರೋಷ್ಮಿತಾ ಹರಿಮೂರ್ತಿ ಅವರು ಅಂತಿಮ ಸುತ್ತು ಪ್ರವೇಶಿಸುವಲ್ಲಿ ವಿಫಲರಾಗಿದ್ದರು. ಕಳೆದ 17 ವರ್ಷಗಳಿಂದ ಭಾರತದ ಸ್ಪರ್ಧಿ ಭುವನ ಸುಂದರಿ ಕಿರೀಟವನ್ನು ಗೆದ್ದುಕೊಂಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?