ಚಂದ್ರಯಾನಕ್ಕೆ ಇಸ್ರೇಲ್ ಯತ್ನ ವಿಫಲ
Team Udayavani, Apr 13, 2019, 6:00 AM IST
ಸಾಂದರ್ಭಿಕ ಚಿತ್ರ
ಜೆರುಸಲೇಂ: ಚಂದ್ರನ ಮೇಲೆ ಕಾಲಿಟ್ಟ ನಾಲ್ಕನೇ ದೇಶ ಎಂಬ ಹೆಗ್ಗಳಿಕೆ ಪಡೆಯುವ ಇಸ್ರೇಲ್ ಪ್ರಯತ್ನ ಕೊನೆಯ ಕ್ಷಣದಲ್ಲಿ ವಿಫಲವಾಗಿದೆ. ಗುರುವಾರ ಇಸ್ರೇಲ್ನ ಬೆರೆಶೀತ್ ಗಗನನೌಕೆ ಚಂದ್ರನ ಮೇಲೆ ಇಳಿಯಿತಾದರೂ, ಲ್ಯಾಂಡ್ ಆಗುವ ಕೆಲವೇ ನಿಮಿಷಗಳ ಮೊದಲು ಎಂಜಿನ್ ವೈಫಲ್ಯದಿಂದಾಗಿ ನಿಯಂತ್ರಣ ಕೇಂದ್ರದಿಂದ ಎಲ್ಲ ಸಂಪರ್ಕಗಳನ್ನೂ ಕಡಿದುಕೊಂಡಿದೆ.
ಈ ಬಗ್ಗೆ ಇಸ್ರೇಲ್ ಬಾಹ್ಯಾಕಾಶ ಉದ್ಯಮಗಳ ಪ್ರಧಾನ ವ್ಯವಸ್ಥಾಪಕ ಆಫರ್ ಡೊರೋನ್ ಮಾತನಾಡಿ, ಚಂದ್ರನ ಮೇಲೆ ನಮ್ಮ ನೌಕೆ ಇಳಿದಿದೆ. ಆದರೆ ಅದು ನಾವು ನಿರೀಕ್ಷಿಸಿದ ರೀತಿಯಲ್ಲಿ ನಡೆದಿಲ್ಲ ಎಂದಿದ್ದಾರೆ. ಇದೇ ವೇಳೆ ಇತ್ತೀಚೆಗಷ್ಟೇ ಮರು ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದ ಪ್ರಧಾನಿ ಬೆಂಜಮಿನ್ ನೇತನ್ಯಾಹು ಕೂಡ ‘ನಮ್ಮ ಯೋಜನೆ ನಾವು ಅಂದುಕೊಂಡಂತೆ ನಡೆಯದಿದ್ದರೂ, ಇದು ಮಹತ್ವದ ಸಾಧನೆ. ಮತ್ತೂಂದು ಪ್ರಯತ್ನವನ್ನು ನಾವು ಮಾಡಲಿದ್ದೇವೆ’ ಎಂದಿದ್ದಾರೆ.
ಬಾಹ್ಯಾಕಾಶ ಸಂಸ್ಥೆ ಸ್ಪೇಸ್ಇಲ್ನ ಅಧ್ಯಕ್ಷ ಮೋರಿಸ್ ಕಾಹ್° ಮಾತನಾಡಿ, ನಾವು ಚಂದ್ರನ ಮೇಲೆ ಇಳಿದಿದ್ದೇವೆ. ಆದರೆ ಈ ಪ್ರಯಾಣ ಮುಗಿದಿಲ್ಲ. ಮುಂದಿನ ದಿನಗಳಲ್ಲಿ ನಾವು ಈ ಯೋಜನೆಯನ್ನು ಪೂರ್ಣಗೊಳಿಸಲಿದ್ದೇವೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ