ಜಪಾನ್ ನಲ್ಲಿ ನೆಲೆಸಿದ್ದಾರಂತೆ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ
Team Udayavani, Nov 30, 2022, 9:52 AM IST
ಬೀಜಿಂಗ್: ಚೀನಾದ ಬಿಲಿಯನೇರ್ ಮತ್ತು ಇ-ಕಾಮರ್ಸ್ ದೈತ್ಯ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ ಅವರು ಏಕಸ್ವಾಮ್ಯ ವಿರೋಧಿ ನಿಯಮಾವಳಿಗಳನ್ನು ಉಲ್ಲಂಘಿಸಿ ಚೀನಾ ಸರ್ಕಾರದೊಂದಿಗೆ ತೊಂದರೆಗೆ ಸಿಲುಕಿ 2020 ರಿಂದಲೂ ಸಾರ್ವಜನಿಕ ಜೀವನದಿಂದ ದೂರವಿರದ್ದಾರೆ. ಇದೀಗ ಸುಮಾರು ಆರು ತಿಂಗಳಿನಿಂದ ಟೋಕಿಯೊದಲ್ಲಿ ವಾಸಿಸುತ್ತಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ಜಾಕ್ ಮಾ ಅವರು ಕುಟುಂಬದೊಂದಿಗೆ ಟೋಕಿಯೊದ ಹೊರ ವಲಯದಲ್ಲಿ ವಾಸವಿದ್ದು, ಯುಎಸ್ ಮತ್ತು ಇಸ್ರೇಲ್ ಗೆ ನಿಯಮಿತ ಪ್ರವಾಸಗಳನ್ನು ಮಾಡುತ್ತಿದ್ದಾರೆ ಎಂದು ಫೈನಾನ್ಶಿಯಲ್ ಟೈಮ್ಸ್ ವರದಿ ಮಾಡಿದೆ.
ಇದನ್ನೂ ಓದಿ:ಬಾಂಬ್ ಸ್ಫೋಟದ ಬಳಿಕವೂ ಸಾರ್ವಜನಿಕ ಸುರಕ್ಷೆ ನಿರ್ಲಕ್ಷ್ಯ ! ನಗರದ ಪ್ರಮುಖ ಸ್ಥಳಗಳಲ್ಲೇ ಭದ್ರತಾ ಲೋಪ
58 ವರ್ಷದ ಜಾಕ್ ಮಾ ಅವರು 2020 ರಲ್ಲಿ ಚೀನೀ ನಿಯಂತ್ರಕರನ್ನು ಟೀಕಿಸಿದ್ದರು. ಆ ಬಳಿಕ ಅವರು ಅವರು ಸಾರ್ವಜನಿಕವಾಗಿ ಹೆಚ್ಚು ಕಂಡು ಬಂದಿಲ್ಲ.