ಹೊಳೆಯುವ “ಗುರು’ ಸೆರೆಹಿಡಿದ “ಜೇಮ್ಸ್ ವೆಬ್ ಟೆಲಿಸ್ಕೋಪ್’
Team Udayavani, Aug 2, 2022, 7:10 AM IST
ವಾಷಿಂಗ್ಟನ್: ಬಾಹ್ಯಾಕಾಶದ ಅಧ್ಯಯನಕ್ಕಾಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ನಭಕ್ಕೆ ಕಳುಹಿಸಿರುವ, ವಿಶ್ವದ ಅತಿ ಶಕ್ತಿಶಾಲಿ ದೂರದರ್ಶಕ ಯಂತ್ರವೆಂದೇ ಖ್ಯಾತಿ ಪಡೆದಿರುವ ಜೇಮ್ಸ್ ವೆಬ್ ಟೆಲಿಸ್ಕೋಪ್, ಗುರುಗ್ರಹದ ಒಂದಿಷ್ಟು ಚಿತ್ರಗಳನ್ನು ಸೆರೆಹಿಡಿದು ನಾಸಾಕ್ಕೆ ಕಳುಹಿಸಿದೆ.
ಈವರೆಗೆ ಗುರುಗ್ರಹದ ಹಲವಾರು ಚಿತ್ರಗಳನ್ನು ಸೆರೆಹಿಡಿಯಲಾಗಿದೆಯಾದರೂ, ಜೇಮ್ಸ್ ವೆಬರ್ ಕಳುಹಿಸಿರುವ ಚಿತ್ರ ನೋಡುಗರಿಗೆ ಹೊಸ ಆಹ್ಲಾದ ಉಂಟು ಮಾಡುತ್ತದೆ. ಕಪ್ಪುಬಿಳುಪಿನ ಈ ಚಿತ್ರದಲ್ಲಿ ಗುರುಗ್ರಹ ಕತ್ತಲೆಯ ಬಾಹ್ಯಾಕಾಶದ ಹಿನ್ನೆಲೆಯಲ್ಲಿ ದೊಡ್ಡ ಹೊಳೆಯುವ ಗೋಳವಾಗಿ ಕಾಣಿಸುತ್ತದೆ.
ಗುರುಗ್ರಹದ ಮೇಲಿನ ದೊಡ್ಡ ಚುಕ್ಕಿಯಂತೂ (ಗ್ರೇಟ್ ರೆಡ್ ಸ್ಪಾಟ್) ಹೆಚ್ಚು ಪ್ರಕಾಶಮಾನವಾಗಿ ಕಾಣಿಸುತ್ತದೆ. ಜೇಮ್ಸ್ ವೆಬ್ನಲ್ಲಿರುವ ನಿಯರ್ ಇನ್ಫ್ರಾರೆಡ್ ಕ್ಯಾಮೆರಾದ (ಎನ್ಐಆರ್ ಕ್ಯಾಮ್) ಸಹಾಯದಿಂದ ಈ ಚಿತ್ರವನ್ನು ಜು. 27ರಂದು ಸೆರೆಹಿಡಿಯಲಾಗಿದೆ ಎಂದು ನಾಸಾ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ