ಚೀನ ಕಿಂಡರ್ ಗಾರ್ಟನ್‌ಗೆ ನುಗ್ಗಿ 14ಮಕ್ಕಳನ್ನು ಇರಿದ ಮಹಿಳೆ ಅರೆಸ್ಟ್
Team Udayavani, Oct 26, 2018, 12:04 PM IST
ಬೀಜಿಂಗ್ : ಚೀನದ ನೈಋತ್ಯ ನಗರ ಶಾಂಗಿಂಗ್‌ನಲ್ಲಿ ಇಂದು ಶುಕ್ರವಾರ ಬೆಳಗ್ಗೆ ಚೂರಿ ಝಳಪಿಸುತ್ತಾ ಮಕ್ಕಳ ಕಿಂಡರ್‌ಗಾರ್ಟನ್ ಪ್ರವೇಶಿಸಿದ 39ರ ಹರೆಯದ ಮತಿ ಭ್ರಮಿತ ಮಹಿಳೆಯೊಬ್ಬಳು ಸುಮಾರು 14 ಮಕ್ಕಳನ್ನು ಗಾಯಗೊಳಿಸಿದಳು. ಪೊಲೀಸರು ಕೊನೆಗೂ ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಚೂರಿ ಝಳಪಿಸುತ್ತಾ ಮಹಿಳೆ ಬನಾನ್ ಜಿಲ್ಲೆಯ ಕಿಂಡರ್ ಗಾರ್ಟನ್ ಗೆ ಬಂದಾಗ ಮಕ್ಕಳು ಆಟದ ಬಯಲಿನಲ್ಲಿ ಆಡುತ್ತಿದ್ದರು. ಆದರೂ ಅಲ್ಲಿಗೆ ಧಾವಿಸಿದ ಮಹಿಳೆ 14 ಮಕ್ಕಳಿಗೆ ಚೂರಿಯಿಂದ ಗಾಯಮಾಡಿದಳು.
ಮಹಿಳೆಯು ತನ್ನ ಸರ್ ನೇಮ್ ಲೀಯು ಎಂದು ತಿಳಿಸಿದ್ದಾಳೆ. ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹಾಂಕಾಂಗ್ ನ ದಕ್ಷಿಣ ಚೀನದ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.