ಆರು ಪೊಲೀಸರ ಸಾವಿಗೆ ಕಾರಣನಾಗಿದ್ದ ಉಗ್ರನ ಹತ್ಯೆ

Team Udayavani, Jul 2, 2017, 3:45 AM IST

terror.jpg

ಶ್ರೀನಗರ/ಇಸ್ಲಾಮಾಬಾದ್‌: ಕಳೆದ ತಿಂಗಳು 6 ಮಂದಿ ಪೊಲೀಸರನ್ನು ಹತ್ಯೆಗೈದ ಲಷ್ಕರ್‌-ಎ-ತಯ್ಯಬಾ ಉಗ್ರ ಸಂಘಟನೆಯ ಕಮಾಂಡರ್‌ ಬಶೀರ್‌ ಲಷ್ಕರಿ ಸಹಿತ ಇಬ್ಬರು ಪ್ರಮುಖ ಉಗ್ರರನ್ನು ಹತ್ಯೆಗೈಯು ವಲ್ಲಿ ಸೇನಾಪಡೆ ಯಶಸ್ವಿಯಾಗಿದೆ. 

ಶನಿವಾರ ಜಮ್ಮು-ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಈ ಇಬ್ಬರು ಉಗ್ರರನ್ನು ಯೋಧರು ಸದೆ ಬಡಿದಿದ್ದಾರೆ. ಲಷ್ಕರಿ ಮತ್ತು ಆತನ ಗ್ಯಾಂಗ್‌ ಕಳೆದ ತಿಂಗಳು ನಡೆದ ಎಸ್‌ಎಚ್‌ಒ ಫಿರೋಜ್‌ ಅಹ್ಮದ್‌ ದರ್‌ ಮತ್ತು ಇತರ 5 ಮಂದಿ ಪೊಲೀಸರ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂದು ಡಿಜಿಪಿ ಎಸ್‌.ಪಿ. ವೇದ್‌ ಹೇಳಿದ್ದಾರೆ.

ಉಗ್ರರ ಗುಂಪು ಮನೆಯೊಂದರಲ್ಲಿ ಅಡಗಿ ಕುಳಿತಿದೆ ಎಂಬ ಸುಳಿವು  ಶನಿವಾರ ಬೆಳಗ್ಗೆ ಸಿಕ್ಕಿದೊಡನೆ ಭದ್ರತಾ ಪಡೆ ಆ ಪ್ರದೇಶವನ್ನು ಸುತ್ತುವರಿದು ಶೋಧ ಆರಂಭಿಸಿತು. ಅಷ್ಟರಲ್ಲಿ ಮನೆಯೊಳಗೆ ಅವಿತಿದ್ದ ಉಗ್ರರು ಗುಂಡಿನ ದಾಳಿ ಆರಂಭಿಸಿದ್ದು, ಎರಡೂ ಕಡೆಯಿಂದ ಗುಂಡಿನ ಚಕಮಕಿ ನಡೆಯಿತು. ಈ ಸಂದರ್ಭ ಸ್ಥಳೀಯರಾದ ತಾಹಿರಾ (44), ಶದಾಬ್‌ ಅಹ್ಮದ್‌ ಚೋಪಾನ್‌ (21) ಅವರೂ ಸಾವಿಗೀಡಾದರು. ಇತರ ನಾಲ್ವರು ಗಾಯ ಗೊಂಡರು.

ಕಾರ್ಯಾಚರಣೆಯಲ್ಲಿ ಉಗ್ರ ಲಷ್ಕರಿ, ಜಾದ್‌ ದಾದಾ ನನ್ನು ಸೇನೆ ಹತ್ಯೆಗೈದಿದೆ ಎಂದು ವೇದ್‌ ಮಾಹಿತಿ ನೀಡಿದ್ದಾರೆ.

ಕಾಶ್ಮೀರವನ್ನು ಪಾಕ್‌ ಜತೆೆ ವಿಲೀನಗೊಳಿಸಬೇಕಂತೆ !
“ಕಾಶ್ಮೀರಕ್ಕೆ ಸ್ವಾತಂತ್ರ್ಯ ಸಿಗುವವರೆಗೂ ಹೋರಾಟ ಮುಂದುವರಿಸುತ್ತೇನೆ’ ಹೀಗೆಂದು ಹೇಳಿರುವುದು ಕಳೆದ ವಾರವಷ್ಟೇ ಅಮೆರಿಕದಿಂದ ಜಾಗತಿಕ ಉಗ್ರ ಎಂದು ಘೋಷಿಸಲ್ಪಟ್ಟ ಹಿಜ್ಬುಲ್‌ ಮುಜಾಹಿದೀನ್‌ ನಾಯಕ ಸೈಯದ್‌ ಸಲಾಹುದ್ದೀನ್‌. ಪಾಕ್‌ ಆಕ್ರಮಿತ ಕಾಶ್ಮೀರದ ಮುಜಾಫ‌ರಾಬಾದ್‌ನಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಉಗ್ರ ಸಲಾಹುದ್ದೀನ್‌, “ಭಾರತದಿಂದ ಕಾಶ್ಮೀರವನ್ನು ಸ್ವತಂತ್ರಗೊಳಿಸುವವರೆಗೂ ನಾವು ಈ ಹೋರಾಟವನ್ನು ಅಂತ್ಯಗೊಳಿಸುವುದಿಲ್ಲ. ಡೊನಾಲ್ಡ್‌ ಟ್ರಂಪ್‌ ಆದೇಶವನ್ನು ಪ್ರಶ್ನಿಸಿ ಯಾರಾದರೂ ಅಮೆರಿಕದ ಕೋರ್ಟ್‌ ಮೆಟ್ಟಿಲೇರಿದರೆ ಟ್ರಂಪ್‌ರ ಆದೇಶವನ್ನೇ ಕಿತ್ತು ಬಿಸಾಕಲಾಗುತ್ತದೆ. ಟ್ರಂಪ್‌ರಂಥ ಹುಚ್ಚುತನವನ್ನು ಬೇರೆ ಯಾವುದೇ ದೇಶ ಪ್ರದರ್ಶಿಸಿಲ್ಲ.

ಕಾಶ್ಮೀರದ ಜನರಿಗೆ ಸ್ವಾತಂತ್ರ್ಯ ಬೇಕೋ, ಬೇಡವೋ ಎಂಬ ಬಗ್ಗೆ ಮತದಾನ ವನ್ನು ವಿಶ್ವಸಂಸ್ಥೆ ಏರ್ಪಡಿಸಲಿ ಅಥವಾ ಕಾಶ್ಮೀರವನ್ನು ಪಾಕ್‌ಜತೆ ವಿಲೀನಗೊಳಿಸಲಿ’ ಎಂದಿದ್ದಾನೆ. ಕಾಶ್ಮೀರದಲ್ಲಿರುವುದು ಹಿಜ್ಬುಲ್‌ ಮುಜಾಹಿದೀನ್‌ ಮಾತ್ರ. ಇಸ್ಲಾಮಿಕ್‌ ಸ್ಟೇಟ್‌(ಐಸಿಸ್‌) ಆಗಲೀ, ಅಲ್‌ಕಾಯಿದಾವಾಗಲೀ ಅಲ್ಲಿ ಅಸ್ತಿತ್ವದಲ್ಲಿ ಇಲ್ಲ ಎಂದೂ ಹೇಳಿದ್ದಾನೆ.

ಟಾಪ್ ನ್ಯೂಸ್

OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಲ್ಲಿ ಸಂದೇಶ

OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಲ್ಲಿ ಸಂದೇಶ

Elephant Census; ಮೊದಲ ಬಾರಿಗೆ ದಕ್ಷಿಣದ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಆನೆ ಗಣತಿ

Elephant Census; ಮೊದಲ ಬಾರಿಗೆ ದಕ್ಷಿಣದ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಆನೆ ಗಣತಿ

Udupi ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ಆಗುಂಬೆ ಸುರಂಗ ಮಾರ್ಗದ ಡಿಪಿಆರ್‌?

Udupi ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ಆಗುಂಬೆ ಸುರಂಗ ಮಾರ್ಗದ ಡಿಪಿಆರ್‌?

“ಪ್ರೇತ’ ಮದುವೆಗೆ ಕೊನೆಗೂ ಸಿಕ್ಕಿದ “ವರ’! ಆಟಿಯಲ್ಲಿ ನಡೆಯಲಿದೆ “ಪ್ರೇತ ಮದುವೆ’

“ಪ್ರೇತ’ ಮದುವೆಗೆ ಕೊನೆಗೂ ಸಿಕ್ಕಿದ “ವರ’! ಆಟಿಯಲ್ಲಿ ನಡೆಯಲಿದೆ “ಪ್ರೇತ ಮದುವೆ’

1-24-monday

Daily Horoscope: ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ

4 ವರ್ಷ ಪೂರ್ಣಗೊಳ್ಳದೆ ಎಲ್‌ಕೆಜಿ ಪ್ರವೇಶವಿಲ್ಲ

4 ವರ್ಷ ಪೂರ್ಣಗೊಳ್ಳದೆ ಎಲ್‌ಕೆಜಿ ಪ್ರವೇಶವಿಲ್ಲ

ಜೂನ್‌ ಮೊದಲ ವಾರವೇ ರಾಜ್ಯಕ್ಕೆ ಮುಂಗಾರು? ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಂತ ಮಳೆ

ಜೂನ್‌ ಮೊದಲ ವಾರವೇ ರಾಜ್ಯಕ್ಕೆ ಮುಂಗಾರು? ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಂತ ಮಳೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rishi-sunak

British ದೊರೆಗಿಂತ ಪಿಎಂ ರಿಷಿ ದಂಪತಿ ಶ್ರೀಮಂತರು!

ISREL

Israel–ಹಮಾಸ್‌ಯುದ್ಧ: 70 ಹಮಾಸ್‌ ಉಗ್ರರ ಹತ್ಯೆ

imran-khan

Pak ಅಮೂಲ್ಯ ಗಿಫ್ಟ್ ಮಾರಾಟ: ಇಮ್ರಾನ್‌ ವಿರುದ್ಧ ಪ್ರಕರಣ

1-wqewewqe

Iran ಅಧ್ಯಕ್ಷ ರೈಸಿ ಇದ್ದ ಹೆಲಿಕಾಪ್ಟರ್‌ ಪತನ?; ರಕ್ಷಣ ಕಾರ್ಯ

1-wq-eeqeqwe

Kyrgyzstan:ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ; ಪಾಕಿಸ್ಥಾನದ 3 ವಿದ್ಯಾರ್ಥಿಗಳ ಕೊಲೆ?

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಲ್ಲಿ ಸಂದೇಶ

OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಲ್ಲಿ ಸಂದೇಶ

Elephant Census; ಮೊದಲ ಬಾರಿಗೆ ದಕ್ಷಿಣದ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಆನೆ ಗಣತಿ

Elephant Census; ಮೊದಲ ಬಾರಿಗೆ ದಕ್ಷಿಣದ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಆನೆ ಗಣತಿ

Udupi ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ಆಗುಂಬೆ ಸುರಂಗ ಮಾರ್ಗದ ಡಿಪಿಆರ್‌?

Udupi ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ಆಗುಂಬೆ ಸುರಂಗ ಮಾರ್ಗದ ಡಿಪಿಆರ್‌?

“ಪ್ರೇತ’ ಮದುವೆಗೆ ಕೊನೆಗೂ ಸಿಕ್ಕಿದ “ವರ’! ಆಟಿಯಲ್ಲಿ ನಡೆಯಲಿದೆ “ಪ್ರೇತ ಮದುವೆ’

“ಪ್ರೇತ’ ಮದುವೆಗೆ ಕೊನೆಗೂ ಸಿಕ್ಕಿದ “ವರ’! ಆಟಿಯಲ್ಲಿ ನಡೆಯಲಿದೆ “ಪ್ರೇತ ಮದುವೆ’

1-24-monday

Daily Horoscope: ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.