ಅವಳಿ ಮಕ್ಕಳ ಗಾತ್ರದಲ್ಲಿತ್ತು ಒಂದೇ ಮಗು!
Team Udayavani, Apr 30, 2021, 7:15 AM IST
ಲಂಡನ್: ಗರ್ಭಿಣಿಯ ಭಾರೀ ಉಬ್ಬಿದ ಹೊಟ್ಟೆ ಕಂಡು ವೈದ್ಯರು “ನಿಮಗೆ ಅವಳಿ ಮಗು ಹುಟ್ಟುತ್ತೆ’ ಅಂತಲೇ ಹೇಳಿದ್ದರು. ಆದರೆ ಹೆರಿಗೆ ಬಳಿಕ ಹೊರಬಂದ ಮಗು ಇಂಗ್ಲೆಂಡಿನಲ್ಲಿ ದಾಖಲೆ ನಿರ್ಮಿಸಿದೆ.
ಬರೋಬ್ಬರಿ 5.8 ಕಿಲೋ ತೂಕದ ಮಗು ಸ್ವತಃ ವೈದ್ಯರ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದೆ. ಎಮಿಲಿಯಾಗೆ ಅವಳಿ ಮಕ್ಕಳ ಗರ್ಭಿಣಿಗೆ ಇರುವಂಥ ಹೊಟ್ಟೆಯೇ ಇತ್ತು. ಸ್ಕ್ಯಾನಿಂಗ್ನಲ್ಲೂ ಗರ್ಭ ಕೋಶದಲ್ಲಿನ ಮಗು ಬಗ್ಗೆ ಅಷ್ಟು ನಿಖರತೆ ಸಿಕ್ಕಿರಲಿಲ್ಲ.
ಸಾಮಾನ್ಯವಾಗಿ ಅವಳಿ ಮಗು ಅತೀ ಹೆಚ್ಚು ಎಂದರೆ 3.4 ಕಿಲೋ ತೂಗುತ್ತದೆ. ಆದರೆ ಪ್ರಸ್ತುತ ಎಮಿಲಿಯಾಗೆ ಜನಿಸಿದ ದಷ್ಟಪುಷ್ಟ ಮಗು ಈಗ ಇಂಗ್ಲೆಂಡಿನಲ್ಲಿ ಹುಟ್ಟಿದ 2ನೇ ಅತೀ ತೂಕದ ಮಗು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2012ರಲ್ಲಿ ಹುಟ್ಟಿದ ಮಗು ಇದಕ್ಕಿಂತ 900 ಗ್ರಾಂ ಹೆಚ್ಚು ತೂಕ ಹೊಂದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್