ವಾಕರಿಕೆಯೂ ಸೋಂಕಿನ ಲಕ್ಷಣ ; ಅಮೆರಿಕದ ಸಿಡಿಸಿ ಸಂಸ್ಥೆಯ ಅಧ್ಯಯನ
ಈಗಾಗಲೇ ಇರುವ 9 ಲಕ್ಷಣಗಳ ಪಟ್ಟಿಗೆ ಇನ್ನೂ 3 ಸೇರ್ಪಡೆ
Team Udayavani, Jun 29, 2020, 8:55 AM IST
ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ನಿಮಗೆ ವಾಕರಿಕೆ ಬರುತ್ತಿದೆಯೇ?, ವಾಂತಿಯಾಗುತ್ತಿದೆಯೇ?, ನಿಮಗೆ ಅತಿಸಾರ ಭೇದಿಯೇ? ಅಥವಾ ನಿಮ್ಮ ಮೂಗು ನಿರಂತರವಾಗಿ ಸೋರುತ್ತಿದೆಯೇ? ಹಾಗಿದ್ದರೆ ನಿಮಗೆ ಕೋವಿಡ್ ಸೋಂಕಿರುವ ಸಾಧ್ಯತೆ ಇದೆ. ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ), ಕೋವಿಡ್ ರೋಗ ಲಕ್ಷಣಗಳ ಪಟ್ಟಿಗೆ ವಾಕರಿಕೆ ಅಥವಾ ವಾಂತಿಯಾಗುವುದು, ಅತಿಸಾರ ಭೇದಿ ಹಾಗೂ ನಿರಂತರವಾಗಿ ಸೋರುವ ಮೂಗು, ಈ ಮೂರು ಲಕ್ಷಣಗಳನ್ನು ಹೊಸದಾಗಿ ಸೇರ್ಪಡೆ ಮಾಡಿದೆ. ಈ ಮೊದಲು ಸಿಡಿಸಿ, ಕೋವಿಡ್ ಸೋಂಕಿನ 9 ರೋಗ ಲಕ್ಷಣಗಳ ಪಟ್ಟಿ ಬಿಡುಗಡೆ ಮಾಡಿತ್ತು. ಆ ಪಟ್ಟಿಗೆ ಮತ್ತೆ ಮೂರು ಲಕ್ಷಣಗಳನ್ನು ಹೊಸದಾಗಿ ಅದು ಸೇರಿಸಿದೆ.
ಸಿಡಿಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಕೋವಿಡ್ ವೈರಸ್‌ನ ಒಟ್ಟು 12 ರೋಗ ಲಕ್ಷಣಗಳನ್ನು ಪಟ್ಟಿ ಮಾಡಲಾಗಿದೆ. ಕೋವಿಡ್ ಬಗ್ಗೆ ಅಧ್ಯಯನಗಳು ಸಾಗಿವೆ. ಹೀಗಾಗಿ, ಈ ಪಟ್ಟಿ ಪರಿಷ್ಕರಣೆಗೊಳ್ಳುತ್ತಾ ಮುಂದುವರಿಯಲಿದೆ ಎಂದು ಅದು ತಿಳಿಸಿದೆ. ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಶೀತ, ಮೈ ನಡುಗುವಿಕೆ, ತಲೆ ನೋವು, ಗಂಟಲು ನೋವು, ಸ್ನಾಯು ಸೆಳೆತ, ಮತ್ತು ಹಠಾತ್ತನೆ ರುಚಿ ಅಥವಾ ವಾಸನೆ ಕಂಡು ಹಿಡಿಯುವ ಸಾಮರ್ಥ್ಯ ಕಳೆದುಕೊಳ್ಳುವುದು ಕೋವಿಡ್ ಸೋಂಕಿನ ಈವರೆಗಿನ ಲಕ್ಷಣಗಳಾಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ