ಅಫ್ಘಾನಿಸ್ಥಾನಕ್ಕೆ ಹೊಸ ಆಡಳಿತ, ಕಾನೂನು 


Team Udayavani, Aug 20, 2021, 6:30 AM IST

ಅಫ್ಘಾನಿಸ್ಥಾನಕ್ಕೆ ಹೊಸ ಆಡಳಿತ, ಕಾನೂನು 

ನಿರೀಕ್ಷೆಗೂ ಮೀರಿದ ವೇಗದಲ್ಲಿ ಅಫ್ಘಾನಿಸ್ಥಾನ ಇಪ್ಪತ್ತು ವರ್ಷಗಳ ಬಳಿಕ ಸುಲಭವಾಗಿ ತಾಲಿಬಾನ್‌ ಉಗ್ರರ ಕೈ ಸೇರಿದೆ. ಅಲ್ಲಿ ಯಾವ ರೀತಿಯ ಆಡಳಿತ ವ್ಯವಸ್ಥೆ, ಹೇಗೆ ಇರಲಿದೆ ಎಂಬು ದನ್ನು ಉಗ್ರ ಸಂಘಟನೆಯ ವಕ್ತಾರ ಝಬೀವುಲ್ಲ ಮುಜಾಹಿದ್‌ ಮಂಗಳವಾರ ಹೇಳಿದ್ದ. ದೇಶದಲ್ಲಿ ಶರಿಯತ್‌ ಕಾನೂನು ಜಾರಿಯಾಗುತ್ತದೆ ಎಂಬ ಅಂಶವನ್ನೂ ಆತ ಸ್ಪಷ್ಟವಾಗಿ ಹೇಳಿದ್ದಾನೆ. ಇಪ್ಪತ್ತು ವರ್ಷಗಳ ಹಿಂದೆ ನಡೆಸುತ್ತಿದ್ದ ಕ್ರೂರ ಕೃತ್ಯಗಳನ್ನು ಮತ್ತೂಮ್ಮೆ ಪುನರಾವರ್ತನೆ ಮಾಡುವುದಿಲ್ಲ ಎಂಬ ತಾಲಿಬಾನ್‌ ಹೇಳಿಕೆ ಹಗಲಿನಷ್ಟೇ ಸುಳ್ಳು ಎನ್ನುವುದು ಬುಧವಾರ ದೃಢಪಟ್ಟ ಹಲವು ಘಟನೆಗಳಿಂದ ಜಗತ್ತಿಗೇ ವೇದ್ಯವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಅಲ್ಲಿ ಏನಾಗಲಿದೆ ಎನ್ನುವ ಮುನ್ಸೂಚನೆ ಸಿಕ್ಕಿದೆ.

ಏನಿದು ಶರಿಯಾ ಕಾನೂನು? :

ಮುಸ್ಲಿಂ ಸಮುದಾಯದ ಪವಿತ್ರ ಗ್ರಂಥ ಕುರಾನ್‌ ಮತ್ತು ಇಸ್ಲಾಂ ಧಾರ್ಮಿಕ ವಿದ್ವಾಂಸರ ಬೋಧನೆಗಳನ್ನು ಒಳಗೊಂಡು ಇರುವ ಕಾನೂನು ವ್ಯವಸ್ಥೆಯೇ ಶರಿಯಾ ಕಾನೂನು. ಅರೆಬಿಕ್‌ ಭಾಷೆಯಲ್ಲಿ ಶರಿಯಾ ಎಂದರೆ “ಮುಂದಕ್ಕೆ ಸಾಗುವುದು’ ಎಂಬ ಅರ್ಥವನ್ನು ಕೊಡುತ್ತದೆ. ಅದರಲ್ಲಿ ವಿವಿಧ ರೀತಿಯ ನೈತಿಕ ಮತ್ತು ಜೀವನ ಹೇಗೆ ನಡೆಸಬೇಕು ಎಂಬ ಬಗ್ಗೆ ಸೂತ್ರಗಳು ಇವೆ. ಅದರಲ್ಲಿನ ಪ್ರತಿಯೊಂದು ಅಂಶಗಳೂ ಕಡ್ಡಾಯ, ಅನುಸರಣೀಯವಾಗಿದೆ.

ಏನೇನು ಅಂಶಗಳು? :

ಮುಸ್ಲಿಂ ಸಮುದಾಯ ಯಾವ ರೀತಿಯಲ್ಲಿ ಜೀವನ ನಿರ್ವಹಿಸಬೇಕು ಎಂಬ ಅಂಶವನ್ನು ಅದರಲ್ಲಿ ಉಲ್ಲೇಖೀ ಸಲಾಗಿದೆ.

ಆಧುನಿಕ ಯುಗದ ಕಾನೂನುಗಳಂತೆ ಶರಿಯಾ ಕಾನೂನುಗಳು ಲಿಖೀತ ರೂಪದಲ್ಲಿಲ್ಲ. ಅದನ್ನು ಸರಕಾರ ಕೂಡ ಜಾರಿ ಮಾಡುವುದಿಲ್ಲ. ಜತೆಗೆ ನ್ಯಾಯಾಲಯಗಳಲ್ಲಿ ಕೂಡ ಅದರ ಬಗ್ಗೆ ವಿಮರ್ಶೆ ಮಾಡಲಾಗುವುದಿಲ್ಲ.

ಶರಿಯಾ ಕಾನೂನು ವ್ಯಾಪ್ತಿಯಲ್ಲಿ ಏನೇನು ಅಪರಾಧಗಳು? :

ತಜೀರ್‌ :

ಈ ವಿಭಾಗದಲ್ಲಿ ಬರುವ ಅಪರಾಧಗಳು ಅತ್ಯಂತ ಗಂಭೀರವಲ್ಲದ ಅಪರಾಧ ಗಳು. ಅವುಗಳಿಗೆ ಶಿಕ್ಷೆ ನೀಡಬೇಕೋ ಬೇಡವೋ ಎಂಬ ಅಂಶ ನ್ಯಾಯಾಧೀಶರ ವಿವೇಚನೆಯಲ್ಲಿರುತ್ತದೆ. ಅಂದರೆ ಈ ವಿಭಾಗದಲ್ಲಿ ನಡೆದ ಅಪರಾಧಗಳಿಗೆ ನ್ಯಾಯಾಧೀಶರೇ ಪರಾಮರ್ಶೆ ನಡೆಸಿ ಶಿಕ್ಷೆ ವಿಧಿಸುತ್ತಾರೆ. ಈ ವಿಭಾಗದಲ್ಲಿ ಬರುವ ಅಪರಾಧಗಳೆಂದರೆ ಬಂಧುಗಳ ಮನೆಯಿಂದಲೇ ಕಳವು ಅಥವಾ ಕಳವು ಮಾಡಲು ಯತ್ನ, ಸುಳ್ಳು ಪ್ರಮಾಣ ಮಾಡುವುದು, ಸಾಲ ನೀಡುವುದು.

ಖೀಸಾಸ್‌ :

ಈ ವ್ಯಾಪ್ತಿಯಲ್ಲಿ ಒಬ್ಬ ವ್ಯಕ್ತಿಯಿಂದ ಮತ್ತೂಬ್ಬ ತೊಂದರೆಗೆ ಒಳಗಾದರೆ, ನೋವು ಅನುಭವಿಸಿದ ವ್ಯಕ್ತಿಯೇ ಶಿಕ್ಷೆ ವಿಧಿಸುವ ವ್ಯವಸ್ಥೆ. ಅಂದರೆ ಸಂತ್ರಸ್ತರೇ ಅಪರಾಧಿಗೆ ಶಿಕ್ಷಿಸುವ ಮೂಲಕ ಪ್ರತೀಕಾರ ತೀರಿಸುವುದು. ಉದಾಹರಣೆಗೆ ವ್ಯಕ್ತಿ ಮತ್ತೂಬ್ಬನಿಗೆ ಥಳಿಸಿದ್ದರೆ, ನೋವಿಗೆ ಒಳಗಾದ ವ್ಯಕ್ತಿ ಥಳಿಸಿದಾತನಿಗೆ ಅದೇ ಮಾದರಿಯಲ್ಲಿ ಶಿಕ್ಷೆ ನೀಡು ತ್ತಾನೆ. ಒಂದು ವೇಳೆ, ವ್ಯಕ್ತಿ ಮತ್ತೂಬ್ಬನನ್ನು ಕೊಲೆ ಮಾಡಿದರೆ ಆತನ ಸಮೀಪದವರು ಕೃತ್ಯವೆಸಗಿದವ ನನ್ನು ಕೊಲ್ಲಲು ಅನುಮತಿ ನೀಡಲಾಗುತ್ತದೆ. ಹೀಗೆ ಮಾಡಲು ನ್ಯಾಯಾಲಯದ ಒಪ್ಪಿಗೆ ಬೇಕಾಗುತ್ತದೆ.

ಹುದೂದ್‌ :

ಇದು ಕುರಾನ್‌ನಲ್ಲಿ ಉಲ್ಲೇಖಗೊಂಡಿ ರುವ ಘೋರ ಶಿಕ್ಷೆ. ಈ ವ್ಯಾಪ್ತಿಯಲ್ಲಿ ನಡೆಯುವ ಅಪರಾಧ ಕೃತ್ಯಗಳು ಭಗವಂತನ ವಿರುದ್ಧ ನಡೆಸಿದ್ದು ಎಂದು ಪರಿಗಣಿಸಲಾಗುತ್ತದೆ. ದ್ರಾಕ್ಷಾರಸ ಸೇವನೆ, ಮದ್ಯಪಾನ, ವ್ಯಭಿಚಾರ, ಅಕ್ರಮವಾಗಿ ಲೈಂಗಿಕ ಸಂಬಂಧ ಇರಿಸಿದ್ದಾರೆ ಎಂದು ಸುಳ್ಳು ಆರೋಪ ಮಾಡುವುದು, ರಸ್ತೆಗಳಲ್ಲಿ ಕಳವು, ದರೋಡೆ ಈ ವ್ಯಾಪ್ತಿಗೆ ಬರುತ್ತದೆ. ಈ ಕೃತ್ಯ ನಡೆಸಿದವರಿಗೆ ಛಡಿಯೇಟು, ಕಲ್ಲು ಎಸೆದು ಶಿಕ್ಷೆ ನೀಡುವುದು, ಅಂಗಾಂಗ ಕತ್ತರಿಸುವುದು, ಗಡೀಪಾರು ಅಥವಾ ಮರಣದಂಡನೆ ಶಿಕ್ಷೆಯನ್ನು ನೀಡಲಾಗುತ್ತದೆ.

ಅಫ್ಘಾನ್‌ನ‌ಲ್ಲಿ ಹೇಗೆ? :

ಅಫ್ಘಾನಿಸ್ಥಾನಕ್ಕೆ ಸಂಬಂಧಿಸಿದಂತೆ ತಾಲಿಬಾನ್‌ ಆಡಳಿತ ಯಾವ ರೀತಿ ಅದನ್ನು ಜಾರಿಗೊಳಿಸಲಿದೆ ಎನ್ನುವ ಕುತೂಹಲ ಇದೆ. ಆದರೆ ಅವರು ಯಾವ ರೀತಿ ನಡೆದು ಕೊಳ್ಳಲಿದ್ದಾರೆ ಎನ್ನುವ ಅಂಶ ಈಗಾಗಲೇ ಜಾಹೀರುಗೊಂಡಿದೆ. 1996ರಿಂದ 2001ರ ವರೆಗೆ ಅಂತಾರಾಷ್ಟ್ರೀಯವಾಗಿ ಅವರ ನಡವಳಿಕೆ ತೀವ್ರವಾಗಿ ಖಂಡನೆಗೆ ಗುರಿಯಾಗಿತ್ತು. ಸಾರ್ವಜನಿಕವಾಗಿ ಅಪರಾಧಿಗಳಿಗೆ ಛಡಿಯೇಟು, ಕಲ್ಲಲ್ಲಿ ಹೊಡೆದು ಸಾಯಿಸುವುದು ಸೇರಿದಂತೆ ಹಲವು ಅಮಾನವೀಯ ಕೃತ್ಯಗಳನ್ನು ನಡೆಸಿದ್ದರು. ತಮ್ಮ ಸಹವರ್ತಿ ಉಗ್ರ ಸಂಘಟನೆಗಳ ಜತೆ ಸೇರಿಕೊಂಡು ವಿಶ್ವಸಂಸ್ಥೆ ನೀಡಿದ್ದ ಆಹಾರ ತಿರಸ್ಕರಿಸಿದ್ದರು. ಇದರಿಂದಾಗಿ 1,60,000ಕ್ಕೂ ಅಧಿಕ ಮಂದಿ ಹಸಿವಿನಿಂದ ನರಳುವಂತೆ ಮಾಡಿದ್ದರು. ಸಾವಿರಾರು ಮನೆಗಳನ್ನು ಧ್ವಂಸ ಮಾಡಿದ್ದರು ಮತ್ತು ಫ‌ಲವತ್ತಾಗಿರುವ ಎಕ್ರೆಗಟ್ಟಲೆ ಜಮೀನನ್ನು ಹಾಳುಗೆಡವಿದ್ದರು. ಹಿಂದಿನ ಅವಧಿಯಲ್ಲಿ ಮಾಧ್ಯಮಗಳಿಗೆ, ಚಿತ್ರಕಲೆ, ಛಾಯಾಗ್ರಹಣ, ಸಿನೆಮಾಗಳಿಗೆ ನಿಷೇಧ ಹೇರಲಾಗಿತ್ತು.

ಯಾವ ರಾಷ್ಟ್ರಗಳಲ್ಲಿ ಕಾನೂನು ಪಾಲನೆ? :

ಕೆಲವೊಂದು ರಾಷ್ಟ್ರಗಳು ಐರೋಪ್ಯ ಒಕ್ಕೂಟಗಳ ಕಾನೂನಿನ ಜತೆಗೆ ಶರಿಯಾ ಕಾನೂನುಗಳನ್ನು ಜಾರಿಗೆ ತಂದಿವೆ. ಆಫ್ರಿಕಾದ ರಾಷ್ಟ್ರಗಳಲ್ಲಿ  ಇದೇ ಕಾನೂನನ್ನು ಹೋಲುವ ಅಂಶಗಳನ್ನು ಜಾರಿಗೆ ತಂದಿವೆ. ನೈಜೀ ರಿಯಾ, ಕೀನ್ಯಾ, ಇಥಿಯೋಪಿಯಾ ಸೇರಿವೆ. 2020ರ ಸೆಪ್ಟಂಬರ್‌ ಬಳಿಕ ಸುಡಾನ್‌ನಲ್ಲಿ ಶರಿಯಾ ಕಾನೂನು ಪಾಲನೆಗೆ ಅಂತ್ಯ ಹಾಡಲಾಗಿದೆ. ಈಗ  ಜಾತ್ಯತೀತ ಕಾನೂನು ವ್ಯವಸ್ಥೆ ಇದೆ.  ಅಫ್ಘಾನಿಸ್ಥಾನ, ಬಹ್ರೈನ್‌, ಬ್ರೂನೈ, ಈಜಿಪ್ಟ್, ಇಂಡೋ ನೇಷ್ಯಾ, ಇರಾನ್‌, ಇರಾಕ್‌, ಮಲೇಷ್ಯಾ, ಮಾಲ್ಡೀವ್ಸ್‌, ಮರಿಟಾ ನಿಯಾ, ನೈಜೀರಿಯಾ, ಪಾಕಿಸ್ಥಾನ, ಕತಾರ್‌, ಸೌದಿ ಅರೇ ಬಿಯಾ, ಯುಎಇ, ಯೆಮನ್‌ಗಳಲ್ಲಿ ಶರಿಯಾ ಕಾನೂನು ಪಾಲನೆ ಮಾಡಲಾಗುತ್ತಿದೆ.

ತಾಲಿಬಾನಿಗರ ಶಸ್ತ್ರಾಸ್ತ್ರ ಸಾಮ್ರಾಜ್ಯ :

ವಾಹನಗಳು  :

  • ಹೈಮೊಬಿಲಿಟಿ ಮಲ್ಟಿಪ್ಯೂರ್‌ ಪೋಸ್‌ ವೀಲ್ಮಂಡ್ ವೆಹಿಕಲ್ಸ್‌ : ಇಂಥ ನೂರಾರು ವೆಹಿಕಲ್‌ಗಳನ್ನು ತಾಲಿಬಾನ್‌ ಉಗ್ರರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
  • ಆರ್ಮಿ ಪಿಕ್‌ಅಪ್‌ ಟ್ರಕ್ಸ್‌ ಮತ್ತು ಕಂಟೈನರ್ಸ್‌: ಕೆಲವು ಡಜನ್‌ಗಳ ಲೆಕ್ಕದಲ್ಲಿ ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಯುದ್ಧ ವಿಮಾನಗಳು  :

ಎಂ-24 ಅಟ್ಯಾಕ್‌ ಕಾಪರ್ಸ್‌:  ಅಮೆರಿಕ ಮೂಲಕ ಯುದ್ಧ ಹೆಲಿಕಾಪ್ಟರ್‌. ಬಳಕೆಗೆ ಯೋಗ್ಯವಿವೆಯೋ ತಿಳಿದಿಲ್ಲ.

ಎಂ-8/17 ಟ್ರಾನ್ಸ್‌ಪೋರ್ಟ್‌: ರಷ್ಯಾ ಮೂಲಕ ಯುದ್ಧ ವಿಮಾನವಿದು. ಸೈನಿಕರನ್ನು ಸಾಗಿಸಲು ಬಳಕೆ ಮಾಡಲಾಗುತ್ತಿತ್ತು. ಈಗ ಕಡೇ ಪಕ್ಷ ಎರಡು ಬಳಕೆಯಲ್ಲಿ ಇವೆ.

ಯುಎಚ್‌-60 ಬ್ಲ್ಯಾಕ್‌ಹಾಕ್ಸ್‌ : ತಾಲಿಬಾನ್‌ ಪಡೆಗಳು ಒಂದನ್ನು ವಶಪಡಿಸಿಕೊಂಡಿವೆ. ಆದರೆ ಇದರ ಸೇವೆ ಬಗ್ಗೆ ಮಾಹಿತಿ ಇಲ್ಲ.

ಎ-29 ಸೂಪರ್‌ ಟುಕ್ಯಾನೋ ಲೈಟ್‌ ಫೈಟರ್ಸ್‌ : ಅಫ್ಘಾನ್‌ ವಾಯುದಳ ಹೆಚ್ಚಾಗಿ ಬಳಕೆ ಮಾಡಿದ ಯುದ್ಧ ವಿಮಾನಗಳಿವು. ಆದರೆ ಬಳಕೆಗೆ ಯೋಗ್ಯವಾಗಿಲ್ಲ

ರೈಫ‌ಲ್ಸ್‌ ಮತ್ತು ಅಮ್ಯೂನಿಶನ್‌  :

ನ್ಯೂಅಮೆರಿಕನ್‌ ಎಂ-16 , ಎಂ-4 ರೈಫ‌ಲ್ಸ್‌  ಲಕ್ಷಗಳ ಲೆಕ್ಕಾಚಾರದಲ್ಲಿ ಗುಂಡುಗಳು ಸಿಕ್ಕಿರಬಹುದು.  ಸಾವಿರಾರು ಗ್ರೆನೇಡ್‌ಗಳು, ರಾಕೆಟ್ಸ್‌, ಭಾರೀ ಪ್ರಮಾಣದ ಸ್ಫೋಟಕಗಳೂ ತಾಲಿಬಾನ್‌ ಉಗ್ರರಿಗೆ ಸಿಕ್ಕಿರುವ ಸಾಧ್ಯತೆ ಇದೆ.

ಟ್ಯಾಂಕ್‌ಗಳು  :

  • ಟಿ-55/62: ಒಂದಷ್ಟು ಸೋವಿಯತ್‌ ಮೂಲದ ಟ್ಯಾಂಕರ್‌ಗಳು ಇವೆ.
  • ಎಂ-1117: ಅಮೆರಿಕ ಮೂಲದ 50ಕ್ಕೂ ಹೆಚ್ಚು ಟ್ಯಾಂಕರ್‌ಗಳು ತಾಲಿಬಾನಿಗರ ಕೈಗೆ ಸಿಕ್ಕಿವೆ.

ಡ್ರೋನ್‌ಗಳು  :

ಅಮೆರಿಕನ್‌ ಸ್ಕ್ಯಾನ್‌ ಈಗಲ್‌ ಡ್ರೋನ್‌ಗಳನ್ನು ತಾಲಿಬಾನಿಗರು ವಶಪಡಿಸಿಕೊಂಡಿದ್ದಾರೆ.

ಅಫ್ಘಾನಿಸ್ಥಾನ ಯೋಧರ ಮಾನಸಿಕ ಹೋರಾಟ :

ಅಫ್ಘಾನಿಸ್ಥಾನ ಸೇನೆಯ ಮಾನಸಿಕ ಹೋರಾಟ ಬೇರೆ ಬೇರೆ ಸ್ತರಗಳಲ್ಲಿ ನಡೆದಿತ್ತು. ಅಫ್ಘಾನಿ ನಾಯಕತ್ವವು ಮಿಲಿಟರಿ ವಿಮಾನಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತದೆಯೇ ವಿನಾ ಅವುಗಳನ್ನು ಹಾರಿಸುವ ಪೈಲಟ್‌ಗಳ ಬಗ್ಗೆ ಅಲ್ಲ ಎಂದಿದ್ದರು ಅಲ್ಲಿನ ಓರ್ವ ಪೈಲಟ್‌. ಕೊನೆಯವರೆಗೂ ಸರಕಾರದ ನೇರ ನಿಯಂತ್ರಣದಡಿ ಇದ್ದು, ಹೋರಾಟ ನಡೆಸುತ್ತಿದ್ದ ಅಲ್ಲಿನ ಕಮಾಂಡೊ ಪಡೆಯನ್ನು ನಿತ್ಯವೂ ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಹೋರಾಟಕ್ಕಾಗಿ ಕಳುಹಿಸಲಾಗುತ್ತಿತ್ತು. ಗೊತ್ತುಗುರಿ ಇಲ್ಲದೆ, ಆಹಾರ, ನಿದ್ದೆ ಸಿಗದೆ ಅವರು ಕಂಗಾಲಾಗಿದ್ದರು.

ಅಫ್ಘಾನಿಸ್ಥಾನದ ಬಹುತೇಕ ಪ್ರಾಂತ್ಯಗಳಲ್ಲಿ ಬುಡಕಟ್ಟು ಯೋಧರಿಂದ ತುಂಬಿದ ಸೇನೆಗಳಿದ್ದವು. ಅವು ಕೂಡ ತಾಲಿಬಾನಿಗಳಿಗೆ ಶರಣಾಗಿವೆ. ಅಫ್ಘಾನಿಸ್ಥಾನದ ಉತ್ತರ ಭಾಗದಲ್ಲಿರುವ ಶೆಬರ್ಘಾನ್‌ ನಗರದಲ್ಲಿ ಆಡಳಿತ ನಡೆಸುತ್ತಿದ್ದವನು ಮಾರ್ಶಲ್‌ ರಶೀದ್‌ ದೋಸ್ತಮ್‌. ಈತ ಕುಖ್ಯಾತ ಬಂಡುಕೋರ ಮತ್ತು ಅಫ್ಘಾನಿಸ್ಥಾನದ ಉಪಾಧ್ಯಕ್ಷನೂ ಆಗಿದ್ದಾತ. ಇವನು ಕಳೆದ 40 ವರ್ಷಗಳಲ್ಲಿ ಬುಡಕಟ್ಟು ನಾಯಕರು ಮತ್ತು ಸರಕಾರಗಳ ಜತೆಗೆ ಒಪ್ಪಂದ ಮಾಡಿಕೊಳ್ಳುತ್ತ, ಕಾಲಕ್ಕೆ ತಕ್ಕಂತೆ ನಿಷ್ಠೆ ಬದಲಾಯಿಸಿಕೊಳ್ಳುತ್ತ ಉಳಿದು, ಬೆಳೆದುಬಂದಾತ. ಆತನೂ ತಾಲಿಬಾನಿಗಳಿಗೆ ಶರಣಾಗಿದ್ದಾನೆ.

ಆ. 13ರಂದು ಇನ್ನೊಬ್ಬ ಬಂಡುಕೋರ, ಮಾಜಿ ರಾಜ್ಯಪಾಲ ಮೊಹಮ್ಮದ್‌ ಇಸ್ಮಾಯಿಲ್‌ ಖಾನ್‌ ಕೂಡ ತಾಲಿಬಾನ್‌ಗೆ ಶರಣಾಗಿದ್ದಾನೆ. ಈತನೂ ಹಲವು ವಾರಗಳಿಂದ ಪಶ್ಚಿಮ ಅಫ್ಘಾನಿಸ್ಥಾನದಲ್ಲಿ ತಾಲಿಬಾನಿಗಳಿಗೆ ಪ್ರಬಲ ಪ್ರತಿರೋಧ ಒಡ್ಡಿದ್ದಾತ.

“ನಾವು ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಕೊಳೆಯುತ್ತಿದ್ದೇವೆ’ ಎಂದು ಒಂದು ತಿಂಗಳ ಹಿಂದೆ ಕಂದಹಾರ್‌ನಲ್ಲಿ ಪೊಲೀಸ್‌ ಅಧಿಕಾರಿಯಾಗಿದ್ದ ಅಬ್ದುಲ್‌ ಹಲೀಮ್‌ ಎಂಬಾತ ಹೇಳಿಕೊಂಡಿದ್ದ. ಆ ಹೊತ್ತಿಗೆ ಅವನಡಿ ಇದ್ದ ವಿಶೇಷ ಕಾರ್ಯಾಚರಣೆ ಪಡೆಯ ಯೋಧರ ಸಂಖ್ಯೆ 30ರಿಂದ 15ಕ್ಕೆ ಇಳಿದಿತ್ತು. ಅವರ ಬಳಿ ಇದ್ದ ಒಂದೇ ಒಂದು ಹೆವಿ ಮೆಶಿನ್‌ ಗನ್‌ನಲ್ಲಿ ಕೆಲವೇ ಬುಲೆಟ್‌ಗಳಿದ್ದವು. ಆ ರಾತ್ರಿ ಅದೂ ಖಾಲಿಯಾಗಿ ಹೋಯಿತು.

ತಾಲಿಬಾನ್‌ ಅಫ್ಘಾನಿಸ್ಥಾನವನ್ನು ಮಿಂಚಿನ ವೇಗದಲ್ಲಿ ಕೈವಶ ಮಾಡಿಕೊಳ್ಳುತ್ತಿರುವಾಗ ಅವರ ಸಂಖ್ಯಾಬಲದ ಬಗ್ಗೆಯೂ ಪ್ರಶ್ನೆಗಳು ಉದ್ಭವಿಸಿವೆ. ಒಂದು ಅಂದಾಜಿನ ಪ್ರಕಾರ ತಾಲಿಬಾನಿ ಹೋರಾಟಗಾರರ ಸಂಖ್ಯೆ 50 ಸಾವಿರದಿಂದ 1 ಲಕ್ಷದ ವರೆಗೆ ಇದೆ. ವಿದೇಶೀ ಹೋರಾಟಗಾರರ ಆಗಮನ, ಗೆದ್ದ ಪ್ರಾಂತ್ಯಗಳಲ್ಲಿ ಯುವಕರನ್ನು ಕಡ್ಡಾಯವಾಗಿ ಹೋರಾಟಕ್ಕೆ ಸೇರಿಸಿಕೊಳ್ಳುವ ತಂತ್ರದಿಂದ ತಾಲಿಬಾನಿಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ ಎಂಬುದಾಗಿ ಕೆಲವು ಅಮೆರಿಕನ್‌ ಅಧಿಕಾರಿಗಳು ಪ್ರತಿಪಾದಿಸುತ್ತಾರೆ. ಇನ್ನು ಕೆಲವು ಮಿಲಿಟರಿ ತಜ್ಞರ ಪ್ರಕಾರ, ಈಗಿರುವ ತಾಲಿಬಾನಿ ಹೋರಾಟಗಾರರಲ್ಲಿ ಬಹುತೇಕ ಮಂದಿ ಪಾಕಿಸ್ಥಾನದಿಂದ ಬಂದವರು.

ತಾಲಿಬಾನಿಗಳಿಗೆ ಬಂಪರ್‌ ಲಾಭ!: ಅಮೆರಿಕ ಕೋಟ್ಯಂತರ ಡಾಲರ್‌ ವ್ಯಯಿಸಿ ಅಫ್ಘಾನಿ ಸೇನೆಗೆ ಒದಗಿಸಿದ್ದ ಯುದ್ಧ ಹೆಲಿಕಾಪ್ಟರ್‌ಗಳು, ಟ್ಯಾಂಕ್‌ಗಳು, ಶಸ್ತ್ರಾಸ್ತ್ರಗಳು ಎಲ್ಲವೂ ಈಗ ತಾಲಿಬಾನ್‌ ಪಾಲಾಗಿವೆ. ಈಗಾಗಲೇ ಅಮೆರಿಕ ಪಡೆಗಳು ಭದ್ರವಾದ ಸೇನಾ ಮೂಲಸೌಕರ್ಯವನ್ನು ನಿರ್ಮಿಸಿವೆ. ಹೀಗಾಗಿ, ತಾಲಿಬಾನ್‌ ಉಗ್ರರಿಗೆ ಹೊಸದಾಗಿ ಸೇನೆಗೆ ಬೇಕಾದ ಮೂಲಸೌಕರ್ಯ ಸೃಷ್ಟಿ ಮಾಡುವ ಅಗತ್ಯವಿಲ್ಲ. ಅಂದರೆ ಆರ್ಮಿ ಪೋಸ್ಟ್‌ಗಳು, ಏರ್‌ಬೇಸ್‌ಗಳು ಸಿದ್ಧವಾಗಿವೆ. ಒಂದರ್ಥ ದಲ್ಲಿ ಇದು ತಾಲಿಬಾನ್‌ಗೆ ಬಂಪರ್‌ ಲಾಭ. ಹೋರಾಟವೇ ಬದುಕಾಗಿರುವ ಉಗ್ರವಾದಿಗಳಿಗೆ ಕಷ್ಟಪಡದೆ ಅನಾಯಾಸವಾಗಿ ಹಬ್ಬದೂಟ ಸಿಕ್ಕಿದಂತಾಗಿದೆ.

ಟಾಪ್ ನ್ಯೂಸ್

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.