ಲಾಸ್ ವೆಗಾಸ್ ದಾಳಿ ಉಗ್ರರ ಕೃತ್ಯವೆನ್ನಲು ಪುರಾವೆಗಳು ಇಲ್ಲ
Team Udayavani, Oct 5, 2017, 9:49 AM IST
ಲಾಸ್ ವೆಗಾಸ್: ಇಲ್ಲಿ ಕಳೆದ ಭಾನುವಾರ ನಡೆದ ರಣ ಭೀಕರ ಗುಂಡಿನ ದಾಳಿ ಉಗ್ರರ ಕುಕೃತ್ಯವೆಂದು ಹೇಳಲು ಯಾವುದೇ ಪುರಾವೆಗಳು ಲಭ್ಯವಾಗಿಲ್ಲ ಎಂದು ಉನ್ನತ ಮಟ್ಟದ ತನಿಖಾ ಸಂಸ್ಥೆ ಎಫ್ಬಿಐ ಬುಧವಾರ ಹೇಳಿದೆ.
ಎಫ್ಬಿಐ ವಿಶೇಷ ಪ್ರತಿನಿಧಿ ಆರೋನ್ ರೌಸ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು ‘ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಯ ಪ್ರೇಯಸಿಯನ್ನು ನಾವು ತೀವ್ರ ವಿಚಾರಣೆಗೊಳಪಡಿಸಿದ್ದೇವೆ. ಆದು ಹೊರತು ಪಡಿಸಿ ಬೇರೆ ಯಾರನ್ನೂ ಇದುವರೆಗೆ ವಶಕ್ಕೆ ಪಡೆದಿಲ್ಲ. ಇದು ಉಗ್ರರ ಕೃತ್ಯ ಎನ್ನಲು ಯಾವುದೇ ಪುರಾವೆಗಳು ಇದುವರೆಗೆ ಲಭ್ಯವಾಗಿಲ್ಲ’ಎಂದು ತಿಳಿಸಿದ್ದಾರೆ.
ಇದೇ ವೇಳೆ ದಾಳಿಯಲ್ಲಿ ಗಾಯಗೊಂಡಿದ್ದ 489 ಗಾಯಾಳುಗಳ ಪೈಕಿ 317 ಮಂದಿ ಚೇತರಿಸಿಕೊಂಡು ಮನೆಗಳಿಗೆ ಮರಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಗೆ 60 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ