
ಬಾಡಿಗೆ ಕಟ್ಟದ ಟ್ವಿಟರ್ ಕಂಪನಿಗೆ ನೋಟಿಸ್
Team Udayavani, Jan 2, 2023, 7:40 AM IST

ವಾಷಿಂಗ್ಟನ್: ಟ್ವಿಟರ್ ಕಂಪನಿಯು ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೊದಲ್ಲಿರುವ ಕಚೇರಿಗೆ ಬಾಡಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಕಾರಣದಿಂದ ಕಟ್ಟಡ ಮಾಲೀಕರು ಲೀಗಲ್ ನೋಟಿಸ್ ನೀಡಿದ್ದಾರೆ ಎಂದು ಸುದ್ದಿ ವಾಹಿನಿಗಳು ವರದಿ ಮಾಡಿವೆ.
ಸ್ಯಾನ್‌ಫ್ರಾನ್ಸಿಸ್ಕೊದ ಹಾರ್ಟ್‌ಫೋರ್ಡ್ ಕಟ್ಟಡದ 30 ಅಂತಸ್ತಿನ ಕಚೇರಿ ಸ್ಥಳದಲ್ಲಿ ಟ್ವಿಟರ್ ಕಂಪನಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಕೆಲವು ತಿಂಗಳಿಂದ ಕಂಪನಿ ಬಾಡಿಗೆ ಕಟ್ಟದೇ ಇರುವುದರಿಂದ ಮಾಲೀಕರು ಸ್ಥಳೀಯ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.
ಇದೇ ರೀತಿ ಟ್ವಿಟರ್ ಕಂಪನಿಯು ತನ್ನ ಪ್ರಧಾನ ಕಚೇರಿ ಹಾಗೂ ಇತರೆ ಜಾಗತಿಕ ಕಚೇರಿಗಳ ಬಾಡಿಗೆ ಕೂಡ ಪಾವತಿಸಿಲ್ಲ ಎಂದು ವರದಿಗಳು ತಿಳಿಸಿವೆ.
ಟ್ವಿಟರ್ ಸಂಸ್ಥೆಯು ಈ ರೀತಿ ನೋಟಿಸ್ ಪಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಎರಡು ಚಾರ್ಟರ್ ವಿಮಾನಗಳ ಬಾಡಿಗೆ ಪಾವತಿಸದ ಹಿನ್ನೆಲೆಯಲ್ಲಿ ಕೋರ್ಟ್‌ನಿಂದ ಕಂಪನಿಗೆ ನೋಟಿಸ್ ಬಂದಿತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
