ಶೂಟೌಟ್ ಗೆ ಖಾಸಗಿ ನ್ಯೂಸ್ ಚಾನೆಲ್ ಆ್ಯಂಕರ್ ಮತ್ತು ಸ್ನೇಹಿತ ಬಲಿ

Team Udayavani, Jul 10, 2019, 10:46 AM IST

ಕರಾಚಿ:ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳದ ಪರಿಣಾಮ ಪಾಕಿಸ್ತಾನ ಮೂಲದ ಟಿವಿ ಚಾನೆಲ್ ನ ಆ್ಯಂಕರ್ ಅನ್ನು ಗುಂಡಿಟ್ಟು ಹತ್ಯೆಗೈದಿರುವ ಘಟನೆ ನಡೆದಿದೆ.

ಪಾಕಿಸ್ತಾನದ ಬೋಲ್ ನ್ಯೂಸ್ ಚಾನೆಲ್ ಆ್ಯಂಕರ್ ಮುರೀದ್ ಅಬ್ಬಾಸ್ ಅವರನ್ನು ಖೈಯಾಬಾನ್ ಇ ಬುಖಾರಿ ಪ್ರದೇಶದ ಸಮೀಪದ ಕೆಫೆಯ ಹೊರಭಾಗದಲ್ಲಿ ಗುಂಡಿಟ್ಟು ಹತ್ಯೆಗೈದಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.

ಜಿಯೋ ನ್ಯೂಸ್ ಪ್ರಕಾರ, ಪತ್ರಕರ್ತ ಅಬ್ಬಾಸ್ ಮೇಲೆ ಅತೀಫ್ ಝಮಾನ್ ಎಂಬಾತ ಗುಂಡು ಹಾರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅಬ್ಬಾಸ್ ಗೆಳೆಯ ಖೈಝಾರ್ ಹಯಾತ್ ಅವರ ಮೇಲೂ ಗುಂಡಿನ ದಾಳಿ ನಡೆದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹಯಾತ್ ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.

ತದನಂತರ ಶಂಕಿತ ಗನ್ ಮ್ಯಾನ್ ನನ್ನು ಭದ್ರತಾ ಪಡೆಗಳು ಸೆರೆಹಿಡಿದಿದ್ದು, ಈ ಸಂದರ್ಭದಲ್ಲಿ ಆತ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ