ಪಾಕ್ ಸುಪ್ರೀಂಕೋರ್ಟ್ಗೆ ಮೊದಲ ಮಹಿಳಾ ಜಡ್ಜ್
Team Udayavani, Jan 7, 2022, 11:00 PM IST
ಇಸ್ಲಾಮಾಬಾದ್: ಪಾಕಿಸ್ತಾನದ ಸುಪ್ರೀಂ ಕೋರ್ಟ್ಗೆ ನ್ಯಾಯಮೂರ್ತಿಯಾಗಿ ಲಾಹೋರ್ ಹೈಕೋರ್ಟ್ನ ನ್ಯಾಯಮೂರ್ತಿ ಆಯೆಷಾ ಮಲಿಕ್ ಅವರನ್ನು ಪಾಕಿಸ್ತಾನ ನ್ಯಾಯಾಂಗ ಆಯೋಗ(ಜೆಸಿಪಿ) ಆಯ್ಕೆ ಮಾಡಿದೆ.
ನ್ಯಾ.ಆಯೆಷಾ ಪಾಕ್ ಸುಪ್ರೀಂ ಕೋರ್ಟ್ನ ಮೊದಲ ಮಹಿಳಾ ನ್ಯಾಯಮೂರ್ತಿಯಾಗಲಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕಾಗಿ ಜೆಸಿಪಿ ಗುರುವಾರ ಚುನಾವಣೆ ನಡೆಸಿದೆ. ಅದರಲ್ಲಿ ನ್ಯಾ.ಆಯೆಷಾ ಬಹುಮತ ಪಡೆದಿದ್ದಾರೆ.
ಈ ಹಿಂದೆ ಕಳೆದ ಸೆಪ್ಟೆಂಬರ್ನಲ್ಲೂ ಒಮ್ಮೆ ಚುನಾವಣೆ ನಡೆಸಲಾಗಿತ್ತು. ಆದರೆ ಆಗ ಇಬ್ಬರು ನ್ಯಾಯಮೂರ್ತಿಗಳಿಗೆ ಸಮಾನ ಮತ ಸಿಕ್ಕಿದ್ದರಿಂದ ಆ ಚುನಾವಣೆಯನ್ನು ಪರಿಗಣಿಸಲಾಗಿರಲಿಲ್ಲ.
ಈ ಆಯ್ಕೆಗೆ ಪಾಕಿಸ್ತಾನದ ಸಂಸತ್ ಅನುಮೋದನೆ ನೀಡಿದ ಬಳಿಕ ಅದು ಊರ್ಜಿತಗೊಳ್ಳಲಿದೆ.
ಇದನ್ನೂ ಓದಿ:ಸರ್ಕಾರಿ ಶಾಲೆಯ 21ವಿದ್ಯಾರ್ಥಿಗಳು, ಓರ್ವ ಶಿಕ್ಷಕರಲ್ಲಿ ಕೋವಿಡ್ ದೃಢ : ಶಾಲೆಗೆ 7 ದಿನ ರಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ