ಭಾರತೀಯ ವಿಮಾನಗಳ ಹಾರಾಟಕ್ಕೆ ಮೇ 30ರ ತನಕ ಪಾಕ್‌ ವಾಯು ಕ್ಷೇತ್ರ ಬಂದ್‌

Team Udayavani, May 15, 2019, 7:19 PM IST

ಲಾಹೋರ್‌ : ಭಾರತದಲ್ಲಿನ ಲೋಕಸಭಾ ಚುನಾವಣೆಯ ಫ‌ಲಿತಾಂಶವನ್ನು ಇಸ್ಲಾಮಾಬಾದ್‌ ಕಾಯುತ್ತಿರುವುದರಿಂದ ಮೇ 30ರ ವರೆಗೆ ತನ್ನ ವಾಯು ಕ್ಷೇತ್ರವನ್ನು ಭಾರತೀಯ ವಿಮಾನಗಳ ಹಾರಾಟಕ್ಕೆ ತೆರೆಯದಿರಲು ಪಾಕಿಸ್ಥಾನ ಇಂದು ಬುಧವಾರ ನಿರ್ಧರಿಸಿದೆ.

ಕಳೆದ ಫೆ.26ರಂದು ಭಾರತೀಯ ವಾಯು ಪಡೆಯು ಬಾಲಾಕೋಟ್‌ ನಲ್ಲಿನ ಜೈಶ್‌ ಎ ಮೊಹಮ್ಮದ್‌ ಸಂಘಟನೆಯ ಉಗ್ರ ಶಿಬಿರದ ಮೇಲೆ ಬಾಂಬ್‌ ದಾಳಿ ನಡೆಸಿದ ಬಳಿಕದಲ್ಲಿ ಪಾಕಿಸ್ಥಾನ ವಾಯು ಕ್ಷೇತ್ರವನ್ನು ಭಾರತೀಯ ವಿಮಾನಗಳ ಹಾರಾಟಕ್ಕೆ ಮುಚ್ಚಿತ್ತು.

ಆದರೂ ಕಳೆದ ಮಾರ್ಚ್‌ 27ರಂದು ಪಾಕಿಸ್ಥಾನ, ಹೊಸದಿಲ್ಲಿ, ಬ್ಯಾಂಕಾಕ್‌ ಮತ್ತು ಕೌಲಾಲಂಪುರ ಹೊರತುಪಡಿಸಿ ಉಳಿದೆಲ್ಲ ವಿಮಾನ ಹಾರಾಟಗಳಿಗೆ ತನ್ನ ವಾಯು ಕ್ಷೇತ್ರವನ್ನು ತೆರೆದಿತ್ತು.

ಪಾಕ್‌ ರಕ್ಷಣಾ ಇಲಾಖೆಯ ಉನ್ನತಾಧಿಕಾರಿ ಹೇಳಿರುವ ಪ್ರಕಾರ ಇಂದು ಬುಧವಾರ ಪಾಕ್‌ ಸರಕಾರ ಭಾರತೀಯ ವಿಮಾನಗಳ ಹಾರಾಟಕ್ಕೆ ತನ್ನ ವಾಯು ಕ್ಷೇತ್ರವನ್ನು ತೆರೆಯುವುದನ್ನು ಪುನರ್‌ ಪರಿಶೀಲಿಸುವ ಸಭೆ ನಡೆಸಿತ್ತು. ಆದರೆ ಭಾರತದಲ್ಲಿನ ಲೋಕಸಭಾ ಚುನಾವಣೆ ಫ‌ಲಿತಾಂಶಗಳು ಸದ್ಯವೇ ಹೊರಬರಲಿರುವ ಕಾರಣ ಮೇ 30ರ ತನಕ ತನ್ನ ವಾಯು ಕ್ಷೇತ್ರವನ್ನು ಮಚ್ಚಿಡಲು ಅದು ನಿರ್ಧರಿಸಿತು.


ಈ ವಿಭಾಗದಿಂದ ಇನ್ನಷ್ಟು

  • ಅಗರ್ತಲಾ: ನಿಷೇಧಿತ ಉಗ್ರ ಸಂಘಟನೆ ಜಮಾತ್‌ ಉಲ್‌ ಮುಜಾಹಿದೀನ್‌ ಬಾಂಗ್ಲಾದೇಶ (ಜೆಎಂಬಿ) ಪಶ್ಚಿಮ ರಾಜ್ಯಗಳಲ್ಲಿ ನೆಲೆಯೂರಲು ಯತ್ನಿಸಿತ್ತು ಎಂದು ಗೃಹ ಸಚಿವಾಲಯದ...

  • ಲಂಡನ್‌: ಡಿಯಾಜಿಯೋ ಕಂಪೆನಿ ಜೊತೆಗಿನ ಪ್ರಕರಣವೊಂದರಲ್ಲಿ ಉದ್ಯಮಿ ವಿಜಯ್‌ ಮಲ್ಯ ವಿರುದ್ಧ ಇಂಗ್ಲೆಂಡ್‌ ಹೈಕೋರ್ಟ್‌ ತೀರ್ಪು ನೀಡಿದ ಪರಿಣಾಮ 90 ಕೋಟಿ ರೂ. ನಷ್ಟವನ್ನು...

  • ಕಠ್ಮಂಡು: ಈ ಬಾರಿ ಮೌಂಟ್‌ ಎವರೆಸ್ಟ್‌ ಏರುವ ಸಾಹಸಿಗರಲ್ಲಿ ಮೃತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಕಳೆದ ವಾರ ಮೂವರು ಭಾರತೀಯರು ಸಾವನ್ನಪ್ಪಿದ್ದರು. ಶನಿವಾರ ಬ್ರಿಟನ್‌ನ...

  • ವಾಷಿಂಗ್ಟನ್‌: ಮುಂದಿನ ತಿಂಗಳು ಜಪಾನ್‌ನಲ್ಲಿ ಜಿ-20 ಶೃಂಗ ನಡೆಯಲಿದ್ದು, ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಟ್ರಂಪ್‌ ಭೇಟಿ ನಡೆಯಲಿದೆ. ಇಲ್ಲಿ...

  • ಕೈರೋ: ಇರಾಕ್‌ ಹಾಗೂ ಸಿರಿಯಾದಲ್ಲಿ ಅಮೆರಿಕದ ಸೇನಾ ದಾಳಿಯಿಂದಾಗಿ ನೆಲೆ ಕಳೆದುಕೊಂಡಿರುವ ಐಸಿಸ್‌ ಉಗ್ರರು ಈಗ ಗೆರಿಲ್ಲಾ ಯುದ್ಧ ತಂತ್ರ ಗಳನ್ನು ಅಳವಡಿಸಿ ಕೊಳ್ಳುವ...

ಹೊಸ ಸೇರ್ಪಡೆ