Cinematic style ಪಾಕ್ನ ಭೂಗತ ಪಾತಕಿ ಅಮೀರ್ ಟಿಪ್ಪು ಹತ್ಯೆ
Team Udayavani, Feb 20, 2024, 12:23 AM IST
ಇಸ್ಲಮಾಬಾದ್: ಲಾಹೋರ್ನ ಮದುವೆ ಸಮಾರಂಭದಲ್ಲಿ ಪಾಕಿಸ್ಥಾನದ ಭೂಗತ ಪಾತಕಿ ಅಮೀರ್ ಬಲಾಜ್ ಟಿಪ್ಪುನನ್ನು ಅಪರಿಚಿತ ವ್ಯಕ್ತಿಯೊಬ್ಬ ಸಿನಿಮೀಯ ರೀತಿಯಲ್ಲಿ ಹತ್ಯೆ ಮಾಡಿದ್ದಾನೆ. ಡಿಎಸ್ಪಿಯೊಬ್ಬರ ಮದುವೆ ಸಮಾರಂಭಕ್ಕೆ ಹೋಗಿದ್ದ ವೇಳೆ, ಸೆಲ್ಫಿ ತೆಗೆದುಕೊಳ್ಳುವುದಾಗಿ ದಾಳಿಕೋರನು ಟಿಪ್ಪು ಬಳಿಗೆ ಹೋಗಿ, ಏಕಾಏಕಿ ಶೂಟ್ ಮಾಡಿ ಕೊಂದಿದ್ದಾನೆ. ಟಿಪ್ಪುವಿನ ಬೆಂಬಲಿಗರು ನಡೆಸಿದ ಪ್ರತಿದಾಳಿಯಲ್ಲಿ ದಾಳಿಕೋರನೂ ಮೃತಪಟ್ಟಿದ್ದಾನೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿರುವ ಶಂಕೆಯಿದೆ ಎಂದು ಪೊಲೀಸರು ಹೇಳಿದ್ದಾರೆ.