ಪಾಕ್ನಲ್ಲಿ ರಾತ್ರಿ 8.30ಕ್ಕೆ ಮಾಲ್ಗಳು ಬಂದ್
ಇಂಧನ ಉಳಿತಾಯಕ್ಕೆ ಹೆಣಗುತ್ತಿರುವ ದೇಶ
Team Udayavani, Jan 5, 2023, 12:29 PM IST
ಇಸ್ಲಾಮಾಬಾದ್: ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಅದರಿಂದ ಪಾರಾಗಲು ಹೆಣಗಾಡುತ್ತಿರುವ ಪಾಕಿಸ್ಥಾನದಲ್ಲಿ ದಿನಕ್ಕೊಂದು ಸವಾಲು ಎದುರಾಗುತ್ತಿದ್ದು, ಇತ್ತೀಚಿಗೆ ತನ್ನ ಪ್ರಜೆಗಳಿಗೆ ಚಹಾ ತ್ಯಜಿಸಿ ಎಂದಿದ್ದ ಪಾಕ್, ಈಗ ಇಂಧನ ಉಳಿತಾಯಕ್ಕಾಗಿ ಮಾಲ್, ಮಾರ್ಕೆಟ್, ಮದುವೆ ಮಂಟಪಗಳನ್ನು ಮುಚ್ಚುವುದಾಗಿ ಘೋಷಿಸಿದೆ.
ಪಾಕ್ ಸರಕಾರದ ಇಂಧನ ಸಂರಕ್ಷOಯೆಯೋಜನೆಯ ಅನ್ವಯ ಈ ನಿರ್ಣಯ ಕೈಗೊಳ್ಳಲಾಗಿದ್ದು, ಇನ್ನು ಮುಂದೆ ದೇಶದ ಎಲ್ಲ ಮಾರುಕಟ್ಟೆ ಹಾಗೂ ಮಾಲ್ಗಳನ್ನು ರಾತ್ರಿ 8.30ಕ್ಕೆ ಹಾಗೂ ಮದುವೆ ಮಂಟಪಗಳನ್ನು ರಾತ್ರಿ 10 ಗಂಟೆಗೆ ಮುಚ್ಚುವಂತೆ ಆದೇಶಿಸಲಾಗಿದೆ. ಇದರಿಂದ 60 ಶತಕೋಟಿ ರೂ. ಉಳಿತಾ ಯವಾಗಲಿದೆ ಎಂದು ರಕ್ಷಣಾ ಸಚಿವ ಖ್ವಾಜಾ ಆಸೀಫ್ ತಿಳಿಸಿದ್ದಾರೆ.
ಇದಲ್ಲದೆ, ಇಂಧನ ಉಳಿತಾಯಕ್ಕೆ ಸಂಬಂಧಿಸಿದಂತೆ ಇನ್ನೂ ಹಲವು ಕ್ರಮ ಗಳನ್ನು ಸರಕಾರಕೈಗೊಂಡಿದ್ದು, ಫೆ. 1ರಿಂದ ಹೈ ವೋಲ್ಟೆಜ್ ಬಲ್ಬ್ಗಳು ಹಾಗೂ ಜುಲೈನಿಂದ ಅಸಮರ್ಥ ಫ್ಯಾನ್ಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲಿದೆ. ಇದರಿಂದ 22 ಶತಕೋಟಿ ರೂ.ಉಳಿತಾ ಯವಾಗಲಿದೆ. ದೇಶಾದ್ಯಂತ ಗ್ಯಾಸ್ ಗೀಸರ್ಗಳ ಬಳಕೆ ಕಡಿಮೆ ಮಾಡುವ ಮೂಲಕ 92 ಶತಕೋಟಿ ರೂ. ಹಾಗೂ ಬೀದಿ ದೀಪಗಳ ಕಡಿಮೆ ಬಳಕೆ ಮೂಲಕ 4 ಶತಕೋಟಿ ರೂ.ಗಳನ್ನು ಉಳಿತಾಯ ಮಾಡಲು ಯೋಜಿಸಲಾಗಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ