ಬ್ರಿಟನ್ ಶ್ರೀಮಂತರ ಪಟ್ಟಿಯಲ್ಲಿ ರಿಷಿ ಸುನಾಕ್ -ಅಕ್ಷತಾ ಮೂರ್ತಿ
ದೇಶದ 222ನೇ ಹಣವಂತರಿವರು; ಸಂಡೇ ಟೈಮ್ಸ್ ಸಿದ್ಧಪಡಿಸಿರುವ ಪಟ್ಟಿ
Team Udayavani, May 21, 2022, 6:50 AM IST
ಲಂಡನ್: ಯುನೈಟೆಡ್ ಕಿಂಗ್‌ಡಂನ ಶ್ರೀಮಂತರ ಸಮೀಕ್ಷೆ ನಡೆಸುವ “ಸಂಡೇ ಟೈಮ್ಸ್’ ಸಂಸ್ಥೆಯು ಈ ವರ್ಷದ ಶ್ರೀಮಂತರ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ.
ಅದರಲ್ಲಿ ಯು.ಕೆ. ವಿತ್ತ ಸಚಿವ, ಭಾರತ ಮೂಲದ ರಿಷಿ ಸುನಾಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಸ್ಥಾನ ಪಡೆದುಕೊಂಡಿದ್ದಾರೆ. 250 ಮಂದಿ ಇರುವ ಪಟ್ಟಿಯಲ್ಲಿ 222ನೇ ಸ್ಥಾನ ಈ ದಂಪತಿಯದ್ದಾಗಿದೆ.
ರಿಶಿ-ಅಕ್ಷತಾ ಅವರ ಆಸ್ತಿ ಮೌಲ್ಯ 7,074 ಕೋಟಿ ರೂ. ಎಂದು ಸಂಡೇ ಟೈಮ್ಸ್ ವರದಿ ಮಾಡಿದೆ.
ಕಳೆದ 34 ವರ್ಷಗಳಿಂದ ಯು.ಕೆ. ಶ್ರೀಮಂತರ ಪಟ್ಟಿ ಬಿಡುಗಡೆಯಾಗುತ್ತಿದ್ದು, ಅದರಲ್ಲಿ ಇದೇ ಮೊದಲನೇ ಬಾರಿಗೆ ರಾಜಕಾರಣಿಯೊಬ್ಬರು ಸ್ಥಾನ ಪಡೆದುಕೊಂಡಿದ್ದಾರೆ.
ಅಕ್ಷತಾ ಅವರು ತಮ್ಮ ಪೋಷಕರ ಸಂಸ್ಥೆಯಾದ ಇನ್ಫೋಸಿಸ್‌ನಲ್ಲಿ ಶೇ.0.93 ಷೇರನ್ನು ತಾವು ಹೊಂದಿರುವುದಾಗಿ ಕಳೆದ ವರ್ಷ ಘೋಷಿಸಿಕೊಂಡಿದ್ದರಿಂದಾಗಿ ಅವರು ಈ ವರ್ಷ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಅವರಿಗೆ ಇನ್ಫೋಸಿಸ್‌ನಲ್ಲೇ 6,684 ಕೋಟಿ ರೂ. ಆಸ್ತಿ ಇರುವುದಾಗಿ ತಿಳಿಸಲಾಗಿದೆ.
ಭಾರತೀಯರೇ ಮೊದಲು
ವಿಶೇಷವೆಂದರೆ ಈ ಪಟ್ಟಿಯಲ್ಲಿ ಹಿಂದುಜಾ ಸಂಸ್ಥೆಯ ಮುಖ್ಯಸ್ಥರಾಗಿರುವ ಗೋಪಿಚಂದ್ ಹಿಂದುಜಾ ಮತ್ತವರ ಕುಟುಂಬವೇ ಯು.ಕೆ. ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಅವರ ಆಸ್ತಿ ಮೌಲ್ಯ 2.75 ಲಕ್ಷ ಕೋಟಿ ರೂ. ಇದೆ.
ಪಟ್ಟಿಯ 3ನೇ ಸ್ಥಾನದಲ್ಲಿ ಭಾರತ ಮೂಲದ ಡೇವಿಡ್ ಮತ್ತು ಸೈಮೆನ್ ರೂಬೆನ್ ಇದ್ದಾರೆ. 250 ಮಂದಿಯ ಪಟ್ಟಿಯಲ್ಲಿ ಹತ್ತಾರು ಭಾರತೀಯರು ಸ್ಥಾನ ಪಡೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಮ್ರಾನ್ ಖಾನ್ ನಿವಾಸದಲ್ಲಿ ಬೇಹು ಸಾಧನ ಅಳವಡಿಕೆಗೆ ಯತ್ನ: ಭದ್ರತಾ ಸಿಬ್ಬಂದಿ ಬಂಧನ
ಆರ್ಥಿಕ ದುಸ್ಥಿತಿ: ಶ್ರೀಲಂಕಾದಲ್ಲಿ ಪೆಟ್ರೋಲ್, ಡೀಸೆಲ್ ಮತ್ತಷ್ಟು ತುಟ್ಟಿ
ದಕ್ಷಿಣ ಆಫ್ರಿಕಾದ ನೈಟ್ಕ್ಲಬ್ನಲ್ಲಿ 17 ಮಂದಿ ಶವವಾಗಿ ಪತ್ತೆ! ಕಾರಣ ನಿಗೂಢ
ಮ್ಯೂನಿಚ್ ಪ್ರವಾಸದಲ್ಲಿ ಪ್ರಧಾನಿ ಮೋದಿ: ಭಾರತೀಯರಿಂದ ಭವ್ಯ ಸ್ವಾಗತ
“ಲಸ್ಸಿ, ಸಟ್ಟುವಿನಂತಹ ಸ್ಥಳೀಯ ಪಾನೀಯಗಳನ್ನೇ ಕುಡಿಯಿರಿ ಪ್ಲೀಸ್!”
MUST WATCH
ಉಡುಪಿ : ಆಟೋರಿಕ್ಷಾ ಬಳಿ ತೆರಳಿ ಪ್ರಕರಣ ಇತ್ಯರ್ಥಪಡಿಸಿದ ನ್ಯಾಯಾಧೀಶರು
ಸುಳ್ಯ, ಕೊಡಗಿನ ಕೆಲವೆಡೆ ಭಾರಿ ಶಬ್ದದೊಂದಿಗೆ ಭೂಕಂಪನ, ಗೋಡೆ ಬಿರುಕು
ಸಕಲೇಶಪುರ : ರಸ್ತೆ ಅಪಘಾತಕ್ಕೆ ದೈಹಿಕ ಶಿಕ್ಷಕ ಸ್ಥಳದಲ್ಲೇ ಸಾವು: ವಿದ್ಯಾರ್ಥಿಗಳ ಕಣ್ಣೀರು…
ಗೃಹ ಪ್ರವೇಶ ಸಂದರ್ಭ ಅವಾಂತರ |ಮಂಗಳಮುಖಿಯರ ರಂಪಾಟ
ಕಿನ್ನಿಗೋಳಿ :ಪತ್ನಿ ಸೇರಿ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಯತ್ನಿಸಿದ ಪತಿ
ಹೊಸ ಸೇರ್ಪಡೆ
ಹುಣಸೂರು : ನಿಯಂತ್ರಣ ತಪ್ಪಿ ನಾಲೆಗೆ ಬಿದ್ದ ಬೈಕ್ : ಸವಾರ ಸ್ಥಳದಲ್ಲೇ ಸಾವು
ಇಮ್ರಾನ್ ಖಾನ್ ನಿವಾಸದಲ್ಲಿ ಬೇಹು ಸಾಧನ ಅಳವಡಿಕೆಗೆ ಯತ್ನ: ಭದ್ರತಾ ಸಿಬ್ಬಂದಿ ಬಂಧನ
ಐಎಂಎ ಕೆಎಸ್ಬಿ ವೈದ್ಯರ ದಿನಾಚರಣೆ ಪ್ರಶಸ್ತಿಗೆ ಡಾ. ಆಶಾ ಪ್ರಭು ಆಯ್ಕೆ
ಪಂಚಾಂಗ ನೋಡಿ ರಾಕೆಟ್ ಉಡಾವಣೆ : ಟೀಕೆಗೆ ಗುರಿಯಾದ ಖ್ಯಾತ ನಟ ಮಾಧವನ್ !
3 ಲೋಕಸಭೆ ಮತ್ತು 7 ವಿಧಾನಸಭಾ ಸ್ಥಾನಗಳ ಉಪಚುನಾವಣೆಯ ಫಲಿತಾಂಶ ಹೀಗಿದೆ