ಮನೆ ಕೆಲಸಕ್ಕೂ ಅನುವಾದಕ್ಕೂ ತಂತ್ರಜ್ಞಾನದ ನೆರವು
Team Udayavani, Apr 26, 2017, 12:44 PM IST
ಬೀಜಿಂಗ್: ಒಂದೇ ಗಂಟೆಯಲ್ಲಿ ಈ ರೊಬೋಟ್ ಬರೋಬ್ಬರಿ 3,600 ವಸ್ತುಗಳನ್ನು ಅಚ್ಚುಕಟ್ಟಾಗಿ ಜೋಡಿಸುತ್ತದೆ, ಮನೆಗೆ ನೆಂಟರು ಬಂದರೆ ಚಹಾ, ಕಾಫಿ ತಂದು ಅತಿಥಿ ಸತ್ಕಾರ ಮಾಡುತ್ತದೆ, ವ್ಯಾಕ್ಯೂಮ್ ಕ್ಲೀನಿಂಗ್, ಪಾತ್ರೆ ತೊಳೆಯುವಂಥ ಮನೆ ಕೆಲಸ, ವಯೋವೃದ್ಧರ ಆರೈಕೆ… ಇವುಗಳಿಗೆ ಸಾಧ್ಯವಿಲ್ಲದ್ದು ಯಾವುದೂ ಇಲ್ಲ ಅನ್ನುವಷ್ಟರ ಮಟ್ಟಿಗೆ ರೊಬೋಟ್ಗಳ ಆವಿಷ್ಕಾರಗಳು ನಡೆಯುತ್ತಿವೆ. ಅದರಲ್ಲೂ ಈ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಚೀನ ಎಲ್ಲ ರೀತಿಯ ಕಸರತ್ತುಗಳನ್ನೂ ನಡೆಸುತ್ತಿದೆ. ಬಿಡಿ ಭಾಗಗಳ ಜೋಡಣೆ ಕ್ಷೇತ್ರದಲ್ಲಿ ಹೆಚ್ಚಿನ ಬಳಕೆ ಮಾಡಲು ಚಿಂತನೆ ನಡೆಸಿದ್ದು, ಈ ನಿಟ್ಟಿನಲ್ಲಿ ಕೆಲಸ ಮಾಡುವ 2 ಸಾವಿರ ಕಂಪೆನಿಗಳಿಗೆ ಸಬ್ಸಿಡಿ ನೀಡಲು ಮುಂದಾಗಿದೆ.
2016ರಲ್ಲಿ ಚೀನವು ಬರೋಬ್ಬರಿ 90 ಸಾವಿರ ಹೊಸ ರೊಬೋಟ್ಗಳನ್ನು ವಿವಿಧ ಕೆಲಸಗಳಿಗಾಗಿ ಅಳವಡಿಸಿಕೊಂಡಿದೆ. ಅಂದರೆ, ಇದು ಇಡೀ ಜಗತ್ತಿನಲ್ಲಿರುವ ಒಟ್ಟು ರೊಬೋಟ್ಗಳ ಪೈಕಿ ಮೂರನೇ ಒಂದರಷ್ಟು. ಒಳ್ಳೇದಾಯ್ತಲ್ವ ಎಂದು ಯೋಚಿಸಿದ್ರೆ ಅದು ಮೂರ್ಖತನ. ಮಾನವರು ಮಾಡುವ ಎಲ್ಲ ಕೆಲಸಗಳನ್ನೂ ಯಂತ್ರ ಮಾನವರು ಮಾಡಿದರೆ ನಮ್ಮ ಪಾಡೇನು? ‘ಫ್ಯಾಕ್ಟರಿಗಳಲ್ಲಿ ಯಾವಾಗ ಮನುಷ್ಯರೇ ಇಲ್ಲದಂಥ ಪರಿಸ್ಥಿತಿ ನಿರ್ಮಾಣವಾಗುತ್ತದೋ ಅಲ್ಲಿಯವರೆಗೆ ರೊಬೋಗಳ ತಯಾರಿ ಮುಂದುವರಿಸುತ್ತೇವೆ’ ಎನ್ನುತ್ತಾರೆ ಚೀನದ ರೋಬೋ ತಯಾರಿಕಾ ಕಂಪೆನಿ ಮಾಲಕ ಚು. ಇದು ನಿಜವಾದರೆ, ಮುದೆ ಭಾರತಕ್ಕೂ ಅಪಾಯ ಕಟ್ಟಿಟ್ಟ ಬುತ್ತಿ. ಸೇವಾ ಕ್ಷೇತ್ರಗಳಲ್ಲೂ ಮಾನವರ ಬದಲಿಗೆ ಯಂತ್ರಮಾನವರನ್ನು ಬಳಸಿಕೊಂಡರೆ ಹೆಚ್ಚಿನ ಉದ್ಯೋಗ ನಷ್ಟವಾಗುವ ಸಾಧ್ಯತೆ ಇಲ್ಲದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ