ಬಡವರಿಗಿಂತ ಶ್ರೀಮಂತರಿಗೇ ಆಯುಷ್ಯ ಹೆಚ್ಚಂತೆ!
Team Udayavani, Apr 26, 2017, 9:44 AM IST
ವಾಷಿಂಗ್ಟನ್: ಬಡವರ-ಶ್ರೀಮಂತರ ಮಧ್ಯೆ ಆಯುಷ್ಯ ದಲ್ಲೂ ವ್ಯತ್ಯಾಸವಿದೆ ಎಂಬ ಸಂಗತಿ ಬಹಿರಂಗವಾ ಗಿದೆ. ಅಮೆರಿಕದ ಸಮೀಕ್ಷೆಯಲ್ಲಿ ಶ್ರೀಮಂತರು ಬಡವರಿಗಿಂತ 12.7 ವರ್ಷ ಹೆಚ್ಚು ಜೀವಿಸುತ್ತಾರೆಂಬ ಅಂಶ ಗೊತ್ತಾಗಿದೆ.
ಅಮೆರಿಕದ ಶ್ರೀಮಂತ-ಬಡವರನ್ನು ಗುರಿಯಾಗಿಸಿ ಈ ಸಮೀಕ್ಷೆ ನಡೆಸಲಾಗಿದೆ. ಆದಾಯವನ್ನು ಮಾನದಂಡ ವಾಗಿಟ್ಟು, 41ರಿಂದ 51 ವರ್ಷದವರೆಗಿನವರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. 1980ರಲ್ಲಿ ಬಡವರು-ಶ್ರೀಮಂತರ ನಡುವಿನ ಆಯುಷ್ಯದ ಸರಾಸರಿ ವ್ಯತ್ಯಾಸ 5 ವರ್ಷವಿದ್ದರೆ, 2010ರಲ್ಲಿ ಇದು 12.7 ವರ್ಷಕ್ಕೇರಿದೆಯಂತೆ. 50 ವರ್ಷ ವಯಸ್ಸಿನ ಅಮೆರಿಕದ ಬಡವನೊಬ್ಬ 76 ವರ್ಷ ಬದುಕುವ ನಿರೀಕ್ಷೆ ಹೊಂದಿದ್ದರೆ, ಅದೇ ವಯಸ್ಸಿನ ಶ್ರೀಮಂತನೊಬ್ಬ 89 ವರ್ಷ ಬದುಕುವ ನಿರೀಕ್ಷೆ ಹೊಂದಿದ್ದಾಗಿ ಹೇಳಲಾಗಿದೆ. 13 ಮಂದಿ ಆರ್ಥಿಕ ತಜ್ಞರ ಗುಂಪು ಮತ್ತು ಆರೋಗ್ಯ ನೀತಿ ತಜ್ಞರು ಈ ಸಮೀಕ್ಷೆ ನಡೆಸಿದ್ದಾರೆ. ಅಮೆರಿಕ ಸಂಸತ್ತು ಸಾಮಾಜಿಕ ಭದ್ರತೆ, ಆರೋಗ್ಯ ವಿಮಾ ಕ್ಷೇತ್ರ, ಇತರ ಕಾರ್ಯಕ್ರಮಗಳ ಬದಲಾವಣೆ ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಮೀಕ್ಷೆ ನಡೆಸಿ ದತ್ತಾಂಶ ಸಂಗ್ರಹಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…