ಭಾರತಕ್ಕೆ ಬರುವ ಸೌದಿ ಪ್ರಜೆಗಳಿಗೆ 3 ವರ್ಷ ನಿಷೇಧ?
Team Udayavani, Jul 28, 2021, 10:05 PM IST
ರಿಯಾದ್: ಇತ್ತೀಚೆಗಿನ ಕೊರೊನಾ ಎರಡನೇ ಅಲೆಯ ವೇಳೆ ಹೆಚ್ಚು ಬಾಧಿತವಾದ ದೇಶಗಳನ್ನು ಕೆಂಪು ಪಟ್ಟಿಗೆ ಹಾಕಿರುವ ಸೌದಿ ಅರೇಬಿಯಾ, ಈ ದೇಶಗಳಿಗೆ ಹೋಗಿ ಬರುವ ತನ್ನ ಪ್ರಜೆಗಳಿಗೆ 3 ವರ್ಷಗಳವರೆಗೆ ಸೌದಿ ಪ್ರವೇಶಿಸದಂತೆ ನಿಷೇಧ ಹೇರುವುದಾಗಿ ಬೆದರಿಕೆ ಹಾಕಿದೆ. ಸೌದಿ ಅರೇಬಿಯಾದ ಕೆಂಪು ಪಟ್ಟಿಯಲ್ಲಿ ಭಾರತವೂ ಇದೆ.
ಇತರ ದೇಶಗಳಿಂದ ಕೊರೊನಾ ತನ್ನ ದೇಶದೊಳಕ್ಕೆ ಪ್ರವೇಶಿಸುವುದನ್ನು ತಡೆಯುವ ಉದ್ದೇಶಕ್ಕಾಗಿ, ಕೊರೊನಾಕ್ಕೆ ಹೆಚ್ಚು ತುತ್ತಾದ ದೇಶಗಳ ಪಟ್ಟಿಯನ್ನು ಸೌದಿ ಅರೇಬಿಯಾ ತಯಾರಿಸಿದೆ. ಪಟ್ಟಿಯಲ್ಲಿರುವ ಇತರ ರಾಷ್ಟ್ರಗಳೆಂದರೆ, ಅಫ್ಘಾನಿಸ್ತಾನ, ಅರ್ಜೆಂಟೈನಾ, ಬ್ರೆಜಿಲ್, ಈಜಿಪ್ಟ್, ಇಂಡೋನೇಷ್ಯಾ, ಲೆಬನಾನ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಟರ್ಕಿ, ವಿಯೆಟ್ನಾಂ ಹಾಗೂ ಯುಎಇ. ಈ ದೇಶಗಳಿಗೆ ಹೋಗಬಾರದೆಂಬ ಸೂಚನೆಯಿದ್ದರೂ ಕೆಲವು ಪ್ರಯಾಣಿಕರು ಅದನ್ನು ಉಲ್ಲಂ ಸಿರುವುದರಿಂದ ಕಠಿಣ ಕ್ರಮ ತೆಗೆದುಕೊಳ್ಳಲು ಅಲ್ಲಿನ ಸರ್ಕಾರ ತೀರ್ಮಾನಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ