ಭಾರತೀಯರಿಗೆ ತೈವಾನ್ ವಿಶೇಷ ನಮಸ್ತೇ
Team Udayavani, Oct 11, 2020, 6:10 AM IST
ಹೊಸದಿಲ್ಲಿ: ಚೀನದ ಬುಡದಲ್ಲಿದ್ದೂ ಸ್ವಾತಂತ್ರ್ಯದ ರೆಕ್ಕೆ ಬಡಿಯುತ್ತಿರುವ ತೈವಾನ್ ಶನಿವಾರ “ರಾಷ್ಟ್ರೀಯ ದಿನ’ವನ್ನು ಹೆಮ್ಮೆಯಿಂದ ಆಚರಿಸಿಕೊಂಡಿದೆ. ಈ ವೇಳೆ ವಿಶೇಷವಾಗಿ ಭಾರತವನ್ನು ಸ್ಮರಿಸಿ, ಚೀನಕ್ಕೆ ಇನ್ನಷ್ಟು ಹೊಟ್ಟೆ ಉರಿಸಿದೆ.
“ನಮ್ಮ ಧ್ವಜ ಎತ್ತರದಲ್ಲಿ ಹಾರುತ್ತಿರುವುದನ್ನು ನೋಡಿ ಹೆಮ್ಮೆಯಾಗುತ್ತಿದೆ. ಈ ಧ್ವಜವನ್ನು ಇಡೀ ಜಗತ್ತು ಗುರುತಿಸುತ್ತಿದೆ. ನಮಗೆ ಶುಭಾಶಯ ಕೋರಿದ ಎಲ್ಲ ದೇಶಗಳಿಗೂ ಧನ್ಯವಾದಗಳು. ವಿಶೇಷವಾಗಿ ಭಾರತೀಯ ಗೆಳೆಯರಿಗೆ ಪ್ರೀತಿ ಪೂರ್ವಕ ನಮಸ್ತೇ!’ ಎಂದು ತೈವಾನ್ ಉಪಾ ಧ್ಯಕ್ಷ ಲಾಯಿ ಚಿಂಗ್-ಟೆ ಟ್ವೀಟ್ ಮಾಡಿದ್ದಾರೆ.
ಭಾರತ ಟಾಂಗ್: ತೈವಾನ್ ರಾಷ್ಟ್ರೀಯ ದಿನದಂದು ಯಾವುದನ್ನು ಸುದ್ದಿ ಮಾಡಬೇಕು, ಯಾವುದನ್ನು ಮಾಡ ಬಾರದು ಎಂದು ಆಜ್ಞೆ ಹೊರಡಿಸಿದ್ದ ಚೀನಕ್ಕೆ ಭಾರತ ಸರಿಯಾಗಿ ಟಾಂಗ್ ಕೊಟ್ಟಿದೆ. “ಭಾರ ತೀಯ ಮಾಧ್ಯಮ ಗಳಿಗೆ ಸ್ವತಂತ್ರ ಅಸ್ತಿತ್ವವಿದೆ.ಯಾವುದನ್ನು ರಿಪೋರ್ಟ್ ಮಾಡಬೇಕು ಎಂಬುದು ನಮ್ಮ ಪತ್ರಿಕೆಗಳಿಗೆ ಚೆನ್ನಾಗಿ ಗೊತ್ತಿದೆ’ ಎಂದು ವಿದೇಶಾಂಗ ಇಲಾಖೆ ಖಡಕ್ಕಾಗಿ ಹೇಳಿದೆ. ಇವೆಲ್ಲದರ ಮಧ್ಯೆ ಹೊಸದಿಲ್ಲಿಯ ಚಾಣಕ್ಯಪುರಿಯಲ್ಲಿರುವ ಚೀನ ರಾಯಭಾರಿ ಕಚೇರಿ ಕಟ್ಟಡದ ಮುಂಭಾಗ ತೈವಾನ್ ರಾಷ್ಟ್ರೀಯ ದಿನಕ್ಕೆ ಶುಭ ಕೋರುವ ಪೋಸ್ಟರ್ಗಳು ರಾರಾಜಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ