ಸಂಧಾನಕ್ಕೆ ಹೊಸ ಷರತ್ತು : ತಾಲಿಬಾನಿಗರ ಕರಾರಿನಿಂದ ಇಕ್ಕಟ್ಟಿಗೆ ಸಿಲುಕಿದ ಅಫ್ಘಾನ್‌ ಸರಕಾರ


Team Udayavani, Aug 15, 2021, 6:40 AM IST

ಸಂಧಾನಕ್ಕೆ ಹೊಸ ಷರತ್ತು : ತಾಲಿಬಾನಿಗರ ಕರಾರಿನಿಂದ ಇಕ್ಕಟ್ಟಿಗೆ ಸಿಲುಕಿದ ಅಫ್ಘಾನ್‌ ಸರಕಾರ

ಕಾಬೂಲ್‌: ರಾಜಧಾನಿ ಕಾಬೂಲ್‌ ಅನ್ನು ವಶಪಡಿಸಿಕೊಳ್ಳುವ ಮೂಲಕ ಇಡೀ ಅಫ್ಘಾನಿಸ್ಥಾನವನ್ನು ತನ್ನ ಮುಷ್ಟಿಗೆ ಪಡೆಯಲು ಸನ್ನದ್ಧವಾಗಿರುವ ತಾಲಿಬಾನ್‌, ಈಗ ಸಂಧಾನಕ್ಕೆ ಹೊಸ ಷರತ್ತುಗಳನ್ನು ವಿಧಿಸಿದೆ. ಉಗ್ರರು ವಿಧಿಸಿರುವ ಷರತ್ತು ಅಫ್ಘಾನ್‌ನ ಅಶ್ರಫ್ ಘನಿ ನೇತೃತ್ವದ ಸರಕಾರಕ್ಕೆ “ನುಂಗಲಾರದ ತುತ್ತಾಗಿ’ ಪರಿಣಮಿಸಿದೆ.

ಸಂಧಾನದ ಮೂಲಕ ಶಾಂತಿ ಕಾಪಾಡುವ ವಿಚಾರಕ್ಕೆ ಸಂಬಂಧಿಸಿ ಜಾಗತಿಕ ಒತ್ತಡ ಹೆಚ್ಚಿರುವಂತೆಯೇ, ತಾಲಿಬಾನ್‌ ಹೊಸ ಷರತ್ತುಗಳ ಮೂಲಕ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಜೈಲಲ್ಲಿರುವ ಉಗ್ರರ ಬಿಡುಗಡೆ, ಹೊಸ ಸರಕಾರದಲ್ಲಿ ಪ್ರಮುಖ ಎಲ್ಲ ಹುದ್ದೆಗಳಿಗೆ ಬೇಡಿಕೆ ಹಾಗೂ ವಿಶ್ವಸಂಸ್ಥೆಯ “ಉಗ್ರ ಪಟ್ಟಿ’ಯಿಂದ ಹೊರಗಿಡುವಂತೆ ಷರತ್ತು ವಿಧಿಸಿದೆ. ವಿಶೇಷವೆಂದರೆ, ವ್ಯಕ್ತಿಗಳು ಹಾಗೂ ಸಂಸ್ಥೆಗಳನ್ನು ಭಯೋತ್ಪಾದನೆಯ ಬೆಂಬಲಿಗರು ಎಂದು ಪಟ್ಟಿ ಮಾಡುವ 1267 ನಿರ್ಬಂಧ ಸಮಿತಿಯ ನೇತೃತ್ವವನ್ನು ಸದ್ಯ ಭಾರತ ಹೊತ್ತಿದೆ.

ಸಂಧಾನ ಬೇಕೆಂದರೆ, ಅಶ್ರಫ್ ಘನಿಯನ್ನು ತೆಗೆದುಹಾಕಿ, ಬೇರೆ ಯಾರನ್ನು ನೇಮಿಸಬೇಕು ಎಂಬ ನಿರ್ಧಾರ ಅಮೆರಿಕ ಮತ್ತು ಅಫ್ಘಾನ್‌ಗೆ ಬಿಟ್ಟಿದ್ದು ಎಂದೂ ತಾಲಿಬಾನ್‌ ಹೇಳಿದೆ.

ಅಮೆರಿಕದ ಶಸ್ತ್ರಾಸ್ತ್ರಗಳೇ ಉಗ್ರರಿಗೆ ವರದಾನ: ತಾಲಿಬಾನ್‌ ಉಗ್ರರ ಸಂಹಾರಕ್ಕೆಂದು ಅಫ್ಘಾನ್‌ಸೇನೆಗೆ ಅಮೆರಿಕ ಕಳುಹಿಸಿಕೊಟ್ಟಿದ್ದ ಭರಪೂರ ಶಸ್ತ್ರಾಸ್ತ್ರಗಳೇ ಈಗ ಉಗ್ರರ ಕೈಗಳನ್ನು ಬಲಪಡಿಸುತ್ತಿವೆ! ಪ್ರತೀ ಪ್ರಾಂತ್ಯವನ್ನು ವಶಕ್ಕೆ ಪಡೆಯುವಾಗ ನೂರಾರು ಸೈನಿಕರು ಅಸಹಾಯಕರಾಗಿ ಶರಣಾಗಿ, ಅಲ್ಲಿಂದ ಓಡಿ ಹೋಗುತ್ತಿದ್ದಾರೆ. ಈ ವೇಳೆ ಸೇನೆಯ ಬಳಿಯಿದ್ದ ಲೋಡ್‌ಗಟ್ಟಲೆ ಶಸ್ತ್ರಾಸ್ತ್ರಗಳನ್ನು ಉಗ್ರರು ವಶಕ್ಕೆ ಪಡೆಯುತ್ತಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಹೊಸ ಷರತ್ತುಗಳೇನು? :

1.ಅಫ್ಘಾನಿಸ್ಥಾನದ ಜೈಲುಗಳಲ್ಲಿರುವ ಎಲ್ಲ ತಾಲಿಬಾನಿ ಕೈದಿಗಳನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು

  1. ಅಫ್ಘಾನ್‌ ಸರಕಾರವು ತನ್ನ ಉನ್ನತ ಅಧಿಕಾರಿಗಳನ್ನು ಬಳಸಿಕೊಂಡು ವಿಶ್ವಸಂಸ್ಥೆಯ “ಉಗ್ರ ಸಂಘಟನೆ’ಗಳ ಪಟ್ಟಿಯಿಂದ ತಾಲಿಬಾನ್‌ ಅನ್ನು ಹೊರಗಿಡುವಂತೆ ಮಾಡಬೇಕು.
  2. ಅಫ್ಘಾನ್‌ನ ಹೊಸ ಸರಕಾರದಲ್ಲಿ ಅಧ್ಯಕ್ಷ, ರಕ್ಷಣ ಸಚಿವರು, ಆಂತರಿಕ ಸಚಿವರು, ಸೇನಾ ಮುಖ್ಯಸ್ಥರು ಮತ್ತು ಬೇಹುಗಾರಿಕಾ ಸಂಸ್ಥೆ (ಎನ್‌ಡಿಎಸ್‌) ಮುಖ್ಯಸ್ಥರ ಹುದ್ದೆಗಳನ್ನು ತಾಲಿಬಾನ್‌ ಉಗ್ರರಿಗೇ ನೀಡಬೇಕು.

ಭಾರತಕ್ಕೆ ತಾಲಿಬಾನ್‌ ಮೆಚ್ಚುಗೆ-ಎಚ್ಚರಿಕೆ! :

ಶನಿವಾರ ತಾಲಿಬಾನ್‌ ಉಗ್ರರು ಭಾರತದ ಪರ ಮೆಚ್ಚುಗೆ ವ್ಯಕ್ತಪಡಿಸುತ್ತಲೇ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದೆ. ಭಾರತವೇನಾದರೂ ಅಫ್ಘಾನಿಸ್ತಾನದ ಸೇನೆಯನ್ನು ಕಳುಹಿಸಿಲು ನಿರ್ಧರಿಸಿದರೆ, ಪರಿಣಾಮ ನೆಟ್ಟಗಿರಲ್ಲ. ಅದರಿಂದ ಕೇಡಾಗುವುದು ಭಾರತಕ್ಕೇ ಎಂದು ಉಗ್ರರು ಬೆದರಿಕೆ ಹಾಕಿದ್ದಾರೆ. ಇದೇ ವೇಳೆ, ಆಫ‌^ನ್‌ನಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಭಾರತ ನೀಡಿದ ಕೊಡುಗೆ ಶ್ಲಾಘನೀಯ. ಇಲ್ಲಿನ ಜನರಿಗೆ ಅಗತ್ಯ ಸೌಲಭ್ಯ ಕಲ್ಪಿಸಿದ್ದೀರಿ, ಅಣೆಕಟ್ಟು, ರಸ್ತೆ ನಿರ್ಮಿಸಿ ಕೊಟ್ಟಿದ್ದೀರಿ. ಅದಕ್ಕೆ ನಾವು ಮೆಚ್ಚುಗೆ ವ್ಯಕ್ತಪಡಿಸುತ್ತೇವೆ ಎಂದೂ ತಾಲಿಬಾನ್‌ ಹೇಳಿದೆ.

ಭಾರತದಿಂದ ಆಶ್ರಯ? : ಯುದ್ಧಪೀಡಿತ ಅಫ್ಘಾನಿಸ್ಥಾನವನ್ನು ತೊರೆಯುತ್ತಿರುವ ಭಾರತದ ಬೆಂಬಲಿಗರಿಗೆ ಧರ್ಮಾತೀತವಾಗಿ ಆಶ್ರಯ ನೀಡಲು ಭಾರತ ಚಿಂತನೆ ನಡೆಸಿದೆ ಎಂದು ನ್ಯೂಸ್‌18 ವರದಿ ಮಾಡಿದೆ. ಅಲ್ಲಿಂದ ಓಡಿ ಬರುವಂಥ ನಾಗರಿಕರಿಗೆ ಆಶ್ರಯ ನೀಡುವ ಯೋಜನೆಯೊಂದನ್ನು ಕೇಂದ್ರ ಸರಕಾರ‌ ಸಿದ್ಧಪಡಿಸುತ್ತಿದೆ ಎಂದು ಹೇಳಲಾಗಿದೆ.

ಟಾಪ್ ನ್ಯೂಸ್

ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್‌ ದಾಖಲು

Prajwal Revanna Case ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್‌ ದಾಖಲು

Four humans to begin living on Mars

Mars; ಮಂಗಳ ಗ್ರಹದಲ್ಲಿ 4 ಮಂದಿ ವಾಸ: ಆದ್ರೆ ಇದು ನಿಜವಲ್ಲ!

google

Google; ಪೈಥಾನ್‌ ತಂಡದ ಉದ್ಯೋಗಿಗಳ ವಜಾ

ಕಾರ್ತಿಕ್‌ ಪೆನ್‌ಡ್ರೈವ್‌ ಕೊಟ್ಟಿದ್ದು ನಿಜ: ದೇವರಾಜೇಗೌಡ

Hassan Pen Drive Case; ಕಾರ್ತಿಕ್‌ ಪೆನ್‌ಡ್ರೈವ್‌ ಕೊಟ್ಟಿದ್ದು ನಿಜ: ದೇವರಾಜೇಗೌಡ

lLondon sword attack

London; ಬೇಕಾಬಿಟ್ಟಿ ಖಡ್ಗ ಬೀಸಿದ ಯುವಕ: ಬಾಲಕ ಬಲಿ

INDWvsBANW: ಭಾರತಕ್ಕೆ 2-0 ಮುನ್ನಡೆ

INDWvsBANW: ಭಾರತಕ್ಕೆ 2-0 ಮುನ್ನಡೆ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Four humans to begin living on Mars

Mars; ಮಂಗಳ ಗ್ರಹದಲ್ಲಿ 4 ಮಂದಿ ವಾಸ: ಆದ್ರೆ ಇದು ನಿಜವಲ್ಲ!

google

Google; ಪೈಥಾನ್‌ ತಂಡದ ಉದ್ಯೋಗಿಗಳ ವಜಾ

lLondon sword attack

London; ಬೇಕಾಬಿಟ್ಟಿ ಖಡ್ಗ ಬೀಸಿದ ಯುವಕ: ಬಾಲಕ ಬಲಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್‌ ದಾಖಲು

Prajwal Revanna Case ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್‌ ದಾಖಲು

Four humans to begin living on Mars

Mars; ಮಂಗಳ ಗ್ರಹದಲ್ಲಿ 4 ಮಂದಿ ವಾಸ: ಆದ್ರೆ ಇದು ನಿಜವಲ್ಲ!

google

Google; ಪೈಥಾನ್‌ ತಂಡದ ಉದ್ಯೋಗಿಗಳ ವಜಾ

ಕಾರ್ತಿಕ್‌ ಪೆನ್‌ಡ್ರೈವ್‌ ಕೊಟ್ಟಿದ್ದು ನಿಜ: ದೇವರಾಜೇಗೌಡ

Hassan Pen Drive Case; ಕಾರ್ತಿಕ್‌ ಪೆನ್‌ಡ್ರೈವ್‌ ಕೊಟ್ಟಿದ್ದು ನಿಜ: ದೇವರಾಜೇಗೌಡ

lLondon sword attack

London; ಬೇಕಾಬಿಟ್ಟಿ ಖಡ್ಗ ಬೀಸಿದ ಯುವಕ: ಬಾಲಕ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.