ಕಾಶ್ಮೀರ ಪ್ರಶ್ನೆ: ವಿಶ್ವಸಂಸ್ಥೆ ಶಾಂತಿಯುತವಾಗಿ ಬಗೆಹರಿಸಲಿ: ಟರ್ಕಿ
Team Udayavani, Sep 14, 2018, 6:14 PM IST
ಇಸ್ಲಾಮಾಬಾದ್ : ಕಾಶ್ಮೀರ ಪ್ರಶ್ನೆಯನ್ನು ವಿಶ್ವಸಂಸ್ಥೆ ಶಾಂತಿಯುತ ರೀತಿಯಲ್ಲಿ ಇತ್ಯರ್ಥ ಪಡಿಸಬೇಕು ಮತ್ತು ಈ ನಿಟ್ಟಿನಲ್ಲಿ ಪಾಕಿಸ್ಥಾನದ ಪ್ರಯತ್ನಗಳನ್ನು ಟರ್ಕಿ ಬೆಂಬಲಿಸುತ್ತದೆ ಎಂದು ವಿದೇಶ ಸಚಿವ ಮೆವ್ಲುತ್ ಕಾವುಸೋಗ್ಲು ಅವರು ಇಂದಿಲ್ಲಿ ಹೇಳಿದರು.
ಟರ್ಕಿ ವಿದೇಶ ಸಚಿವ ಮೆವ್ಲುತ್ ಅವರು ಪಾಕ್ ವಿದೇಶ ಸಚಿವ ಶಾ ಮೆಹಮೂದ್ ಕುರೇಶಿ ಅವರ ಜತೆಗೆ ಮಾತುಕತೆ ನಡೆಸಿದ ವೇಳೆ ಟರ್ಕಿಯ ನಿಲುವು ಮತ್ತು ಭರವಸೆಯನ್ನು ಪುನರುಚ್ಚರಿಸಿದರು.
ಈ ಮಾತುಕತೆಯ ವೇಳೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಆರ್ಥಿಕ ಬಾಂಧವ್ಯ ಮತ್ತು ವ್ಯೂಹಾತ್ಮಕ ಸಹಕಾರವನ್ನು ಹೆಚ್ಚಿಸಲು ಒಪ್ಪಿಕೊಳ್ಳಲಾಯಿತು.
ಅನಂತರ ನಡೆಸಲಾದ ಪತ್ರಿಕಾಗೋಷ್ಠಿಯಲ್ಲಿ ಟರ್ಕಿ ವಿದೇಶ ಸಚಿವ ಕಾವುಸೋಗ್ಲು ಮತ್ತು ಪಾಕ್ ವಿದೇಶ ಸಚಿವ ಕುರೇಶಿ ಅವರು ಕಾಶ್ಮೀರ ಪ್ರಶ್ನೆಯನ್ನು ಶಾಂತಿಯುತವಾಗಿ ಬಗೆಹರಿಸಲು ವಿಶ್ವಸಂಸ್ಥೆ ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ
ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್
CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani
ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3
ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು
ಹೊಸ ಸೇರ್ಪಡೆ
ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ : 8ನೇ ಸ್ಥಾನಕ್ಕೆ ಏರಿದ ರೋಹಿತ್ ಶರ್ಮ
ಕ್ರೀಡಾಲೋಕದ ಮೇಲೆ ಮತ್ತೆ ಕೆಂಗಣ್ಣು ಬೀರಿದ ಕೋವಿಡ್
ಲಾಕ್ಡೌನ್ ಸಮಯದಲ್ಲಿ “ರಾಮಾಯಣ’ ರಚಿಸಿದ 10 ವರ್ಷದ ಬಾಲಕ !
ಉತ್ತರಾಖಂಡ ಕುಂಭಮೇಳಕ್ಕೆ “ಕೋವಿಡ್ ನೆಗೆಟಿವ್ ‘ ಪ್ರಮಾಣಪತ್ರ ಕಡ್ಡಾಯ
“ತೈಲ ಬೆಲೆ ಜಿಎಸ್ಟಿ ವ್ಯಾಪ್ತಿಗೆ ಬರಲಿ’ : ಆರ್ಥಿಕ ಸಲಹೆಗಾರ ಕೆ.ವಿ. ಸುಬ್ರಮಣ್ಯನ್ ಬೆಂಬಲ